ENG vs IRE: ಬಾಲ್, ಬ್ಯಾಟ್ ಮುಟ್ಟದೆ ಐರ್ಲೆಂಡ್ ವಿರುದ್ಧ ವಿಶ್ವ ದಾಖಲೆ ಬರೆದ ಬೆನ್ ಸ್ಟೋಕ್ಸ್..!
ENG vs IRE: ಆಲ್ರೌಂಡರ್ ಬೆನ್ ಸ್ಟೋಕ್ಸ್, ಒಂದೇ ಒಂದು ಓವರ್ ಬೌಲಿಂಗ್ ಮಾಡದೆ, ಬ್ಯಾಟ್ನಿಂದ ಒಂದೇ ಒಂದು ರನ್ ಬಾರಿಸದೆ ಕ್ರಿಕೆಟ್ ಲೋಕದಲ್ಲಿ ವಿಶ್ವ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
1 / 6
ಐರ್ಲೆಂಡ್ ಹಾಗೂ ಇಂಗ್ಲೆಂಡ್ ನಡುವೆ ಲಾರ್ಡ್ಸ್‌ನಲ್ಲಿ ನಡೆದ ಏಕೈಕ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 10 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿದೆ. ಟೆಸ್ಟ್ ಆರಂಭದಿಂದಲೂ ಐರ್ಲೆಂಡ್ ಮೇಲೆ ಪ್ರಾಬಲ್ಯ ಮೇರೆದ ಆಂಗ್ಲರಿಗೆ ಇದು ಆಶಸ್ ಸರಣಿಗೆ ತಯಾರಿ ನಡೆಸಲು ಸಿಕ್ಕ ಉತ್ತಮ ಅವಕಾಶವಾಗಿತ್ತು.
2 / 6
ಇನ್ನು ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸಿದ ಆಲ್ರೌಂಡರ್ ಬೆನ್ ಸ್ಟೋಕ್ಸ್, ಒಂದೇ ಒಂದು ಓವರ್ ಬೌಲಿಂಗ್ ಮಾಡದೆ, ಬ್ಯಾಟ್ನಿಂದ ಒಂದೇ ಒಂದು ರನ್ ಬಾರಿಸದೆ ಕ್ರಿಕೆಟ್ ಲೋಕದಲ್ಲಿ ವಿಶ್ವ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
3 / 6
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ನಾಯಕನೊಬ್ಬ ಬ್ಯಾಟಿಂಗ್, ಬೌಲಿಂಗ್ ಅಥವಾ ವಿಕೆಟ್ ಕೀಪಿಂಗ್ ಸಹ ಮಾಡದೆ ಪಂದ್ಯವನ್ನು ಗೆದ್ದ ಮೊದಲ ಆಟಗಾರನಾಗಿ ಬೆನ್ ಸ್ಟೋಕ್ಸ್ ಇತಿಹಾಸ ನಿರ್ಮಿಸಿದ್ದಾರೆ. ಅಲ್ಲದೆ ಈ ಪಂದ್ಯದಲ್ಲಿ ಏನನ್ನೂ ಮಾಡದ ಸ್ಟೋಕ್ಸ್ಗೆ ಬಂಪರ್ ಎಂಬಂತೆ 16.41 ಲಕ್ಷ ರೂ.ಗಳ ಪಂದ್ಯ ಶುಲ್ಕ ಕೂಡ ಸಿಗಲಿದೆ.
4 / 6
ಇನ್ನು ಪಂದ್ಯದ ವಿಚಾರಕ್ಕೆ ಬಂದರೆ, ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿದರು. ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ ತಂಡ ಕೇವಲ 172 ರನ್ ಗಳಿಗೆ ಕುಸಿದಿತ್ತು. ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ 4 ವಿಕೆಟ್‌ಗೆ 524 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.
5 / 6
ಇಂಗ್ಲೆಂಡ್ ಪರ ಒಲಿ ಪೋಪ್ ದ್ವಿಶತಕ ಬಾರಿಸಿದರು. ಓಲಿ ಪೋಪ್ ಇನ್ನಿಂಗ್ಸ್‌ನಲ್ಲಿ 22 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಹಿತ 208 ಎಸೆತಗಳಲ್ಲಿ 205 ರನ್ ಗಳಿಸಿದರು. ಇವರಲ್ಲದೇ ಬೆನ್ ಡಕೆಟ್ 178 ಎಸೆತಗಳಲ್ಲಿ 182 ರನ್ ಗಳಿಸಿ ಅತ್ಯುತ್ತಮ ಇನ್ನಿಂಗ್ಸ್ ಆಡಿದರು.
6 / 6
ಇನ್ನು ಎರಡನೇ ಇನ್ನಿಂಗ್ಸ್ ಆರಂಭಿಸಿದ ಐರ್ಲೆಂಡ್ 9 ವಿಕೆಟ್ ನಷ್ಟಕ್ಕೆ 362 ರನ್ ಗಳಿಸಿತು. ಐರ್ಲೆಂಡ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಹ್ಯಾರಿ ಟೆಕ್ಟರ್ ಜೊತೆಗೆ ಆಂಡಿ ಮೆಕ್ ಬರ್ನಿ ಮತ್ತು ಮಾರ್ಕ್ ಎಡರ್ ಕ್ರಮವಾಗಿ 51, 86 ಮತ್ತು 88 ರನ್ ಸಿಡಿಸಿದರು. ಇಂಗ್ಲೆಂಡ್ ಪರ ಜೋಶ್ ಟಾಂಗ್ ಗರಿಷ್ಠ 5 ವಿಕೆಟ್ ಪಡೆದರು. ಇವರಲ್ಲದೆ ಸ್ಟುವರ್ಟ್ ಬ್ರಾಡ್, ಮ್ಯಾಥ್ಯೂ ಪಾಟ್ಸ್, ಜಾಕ್ ಲೀಚ್ ಮತ್ತು ಜೋ ರೂಟ್ ತಲಾ ಒಂದೊಂದು ವಿಕೆಟ್ ಪಡೆದರು.