ENG vs SL: 8ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿ ದಾಖಲೆಯ ಶತಕ ಸಿಡಿಸಿದ ಇಂಗ್ಲೆಂಡ್ ವೇಗಿ
ENG vs SL: 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಗಸ್ ಅಟ್ಕಿನ್ಸನ್ ಕೇವಲ 103 ಎಸೆತಗಳಲ್ಲಿ ತಮ್ಮ ಶತಕ ಪೂರೈಸಿದರು. ಗಸ್ ಅಟ್ಕಿನ್ಸನ್ ಅವರ ಈ ಶತಕದ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ ಮತ್ತು 12 ಸಿಕ್ಸರ್ಗಳು ಸೇರಿದ್ದವು. ಅಂತಿಮವಾಗಿ ಅಟ್ಕಿನ್ಸನ್ 118 ರನ್ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದರು. ಈ ಶತಕದೊಂದಿಗೆ, ಗಸ್ ಅಟ್ಕಿನ್ಸನ್ ತಮ್ಮ ಹೆಸರನ್ನು ಲಾರ್ಡ್ಸ್‌ನಲ್ಲಿ ಶತಕ ಸಿಡಿಸಿದವರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಂಡರು.
1 / 6
ಪ್ರತಿಷ್ಠಿತ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಇಂಗ್ಲೆಂಡ್ ಮತ್ತು ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ 427 ರನ್ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿದೆ. ತಂಡದ ಪರ ಜೋ ರೂಟ್ ಹಾಗೂ ವೇಗದ ಬೌಲರ್ ಗಸ್ ಅಟ್ಕಿನ್ಸನ್ ಶತಕದ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು ಭದ್ರ ಸ್ಥಿತಿಗೆ ತಂದರು.
2 / 6
ಅದರಲ್ಲೂ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಗಸ್ ಅಟ್ಕಿನ್ಸನ್ ಕೇವಲ 103 ಎಸೆತಗಳಲ್ಲಿ ತಮ್ಮ ಶತಕ ಪೂರೈಸಿದರು. ಗಸ್ ಅಟ್ಕಿನ್ಸನ್ ಅವರ ಈ ಶತಕದ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ ಮತ್ತು 12 ಸಿಕ್ಸರ್ಗಳು ಸೇರಿದ್ದವು. ಅಂತಿಮವಾಗಿ ಅಟ್ಕಿನ್ಸನ್ 118 ರನ್ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದರು. ಈ ಶತಕದೊಂದಿಗೆ, ಗಸ್ ಅಟ್ಕಿನ್ಸನ್ ತಮ್ಮ ಹೆಸರನ್ನು ಲಾರ್ಡ್ಸ್‌ನಲ್ಲಿ ಶತಕ ಸಿಡಿಸಿದವರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಂಡರು.
3 / 6
ಅಟ್ಕಿನ್ಸನ್ ಶತಕ ಗಳಿಸಿದ್ದಲ್ಲದೆ ಎರಡು ಅತ್ಯುತ್ತಮ ಜೊತೆಯಾಟವನ್ನೂ ಮಾಡಿದರು. ಮೊದಲು ಜೋ ರೂಟ್ ಅವರೊಂದಿಗೆ 7ನೇ ವಿಕೆಟ್‌ಗೆ 111 ಎಸೆತಗಳಲ್ಲಿ 92 ರನ್ ಸೇರಿಸಿದರೆ, ಇದಾದ ಬಳಿಕ ಅಟ್ಕಿನ್ಸನ್ ಮ್ಯಾಥ್ಯೂ ಪಾಟ್ಸ್ ಜೊತೆಗೂಡಿ 97 ಎಸೆತಗಳಲ್ಲಿ 85 ರನ್ ಸೇರಿಸಿದರು. ಇದರೊಂದಿಗೆ ಅಟ್ಕಿನ್ಸನ್ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ತಂಡಕ್ಕೆ ಕೊಡುಗೆ ನೀಡಬಲ್ಲರು ಎಂದು ಸಾಬೀತುಪಡಿಸಿದ್ದಾರೆ.
4 / 6
ಅಟ್ಕಿನ್ಸನ್ ಜುಲೈ 10 ರಂದು ಇದೇ ಲಾರ್ಡ್ಸ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದರು. ವೆಸ್ಟ್ ಇಂಡೀಸ್ ವಿರುದ್ಧದ ಆ ಪಂದ್ಯದಲ್ಲಿ ಅಟ್ಕಿನ್ಸನ್ ಮೊದಲ ಇನ್ನಿಂಗ್ಸ್‌ನಲ್ಲಿ 7 ವಿಕೆಟ್ ಪಡೆದರೆ, ಎರಡನೇ ಇನ್ನಿಂಗ್ಸ್‌ನಲ್ಲೂ 5 ವಿಕೆಟ್‌ಗಳನ್ನು ಕಬಳಿಸಿದ್ದರು. ಇದರೊಂದಿಗೆ ಲಾರ್ಡ್ಸ್ ಮೈದಾನದಲ್ಲಿ 10 ವಿಕೆಟ್ ಕಬಳಿಸಿದವರ ಪಟ್ಟಿಯಲ್ಲೂ ಗಸ್ ಅಟ್ಕಿನ್ಸನ್ ಸ್ಥಾನ ಪಡೆದಿದ್ದರು.
5 / 6
ಇನ್ನು ಈ ಪಂದ್ಯದಲ್ಲಿ ಗಸ್ ಅಟ್ಕಿನ್ಸನ್ ಅವರಲ್ಲದೆ ಜೋ ರೂಟ್ ಕೂಡ ಅದ್ಭುತ ಶತಕ ಸಿಡಿಸಿದರು. ರೂಟ್ 206 ಎಸೆತಗಳಲ್ಲಿ 18 ಬೌಂಡರಿಗಳ ಸಹಿತ 143 ರನ್ ಬಾರಿಸಿ ಔಟಾದರು. ಈ ಇಬ್ಬರನ್ನು ಹೊರತುಪಡಿಸಿ ಆರಂಭಿಕ ಬೆನ್ ಡಕೆಟ್ 40 ರನ್ ಹಾಗೂ ಹ್ಯಾರಿ ಬ್ರೂಕ್ 33 ರನ್ಗಳ ಕಾಣಿಕೆ ನೀಡಿದರು.
6 / 6
ಮೂರು ಟೆಸ್ಟ್‌ಗಳ ಸರಣಿಯ ಮೊದಲ ಪಂದ್ಯವನ್ನು ಇಂಗ್ಲೆಂಡ್ ಗೆದ್ದುಕೊಂಡಿದೆ. ಸರಣಿಯಲ್ಲಿ ಉಳಿಯಲು ಶ್ರೀಲಂಕಾ ಈ ಪಂದ್ಯವನ್ನು ಯಾವುದೇ ಬೆಲೆ ತೆತ್ತಾದರೂ ಗೆಲ್ಲಲೇಬೇಕು. ವಿಶೇಷವೆಂದರೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಸರಣಿ ನಡೆಯುತ್ತಿದ್ದು, ಈ ಪಂದ್ಯದ ಗೆಲುವು ಅಥವಾ ಸೋಲು ಡಬ್ಲ್ಯುಟಿಸಿ ಪಾಯಿಂಟ್‌ಗಳ ಪಟ್ಟಿಯ ಮೇಲೂ ಪರಿಣಾಮ ಬೀರಲಿದೆ. ಪ್ರಸ್ತುತ, ಇಂಗ್ಲೆಂಡ್ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದರೆ, ಶ್ರೀಲಂಕಾ ತಂಡವು ಐದನೇ ಸ್ಥಾನದಲ್ಲಿದೆ.