Gus Atkinson: ಕ್ರಿಕೆಟ್ ಕಾಶಿಯಲ್ಲಿ ಇತಿಹಾಸ ನಿರ್ಮಿಸಿದ ಗಸ್ ಅಟ್ಕಿನ್ಸನ್

Gus Atkinson's Record: ಕ್ರಿಕೆಟ್ ಕಾಶಿ ಎಂದೇ ಗುರುತಿಸಿಕೊಂಡಿರುವ ಲಂಡನ್​ನ ಲಾರ್ಡ್ಸ್​ ಮೈದಾನದಲ್ಲಿ ಇಂಗ್ಲೆಂಡ್ ಆಟಗಾರ ಗಸ್ ಅಟ್ಕಿನ್ಸನ್ ಹೊಸ ದಾಖಲೆ ನಿರ್ಮಿಸಿದ್ದಾರೆ. ಅದು ಸಹ ಈ ಮೈದಾನದಲ್ಲಿ ಆಡಿದ 4 ಇನಿಂಗ್ಸ್​ಗಳ ಮೂಲಕ ಎಂಬುದು ವಿಶೇಷ. ಇದರೊಂದಿಗೆ 1978 ರಲ್ಲಿ ನಿರ್ಮಾಣವಾಗಿದ್ದ ದಾಖಲೆಯನ್ನು ಅಟ್ಕಿನ್ಸನ್ ಅಳಿಸಿ ಹಾಕಿದ್ದಾರೆ.

|

Updated on: Aug 31, 2024 | 8:09 AM

ಕ್ರಿಕೆಟ್​ ಕಾಶಿ ಲಾರ್ಡ್ಸ್​ ಮೈದಾನದಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದೆ. ಹೀಗೆ ಕೇವಲ 4 ಇನಿಂಗ್ಸ್​ಗಳ ಮೂಲಕ ಹೊಸ ಇತಿಹಾಸವನ್ನು ಸೃಷ್ಟಿಸಿದ್ದು ಇಂಗ್ಲೆಂಡ್ ಆಟಗಾರ ಗಸ್ ಅಟ್ಕಿನ್ಸನ್ (Gus Atkinson). ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅಟ್ಕಿನ್ಸನ್ 115 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 14 ಫೋರ್​ಗಳೊಂದಿಗೆ 118 ರನ್ ಚಚ್ಚಿದ್ದಾರೆ.

1 / 6
ಈ ಸ್ಪೋಟಕ ಸೆಂಚುರಿಯೊಂದಿಗೆ ಲಾರ್ಡ್ಸ್​ ಮೈದಾನದಲ್ಲಿ ಶತಕ ಬಾರಿಸಿದ ಬ್ಯಾಟರ್​ಗಳ ಹಾನರ್ಸ್​ ಪಟ್ಟಿಯಲ್ಲಿ ಗಸ್ ಅಟ್ಕಿನ್ಸನ್ ಹೆಸರು ಕೂಡ ಸೇರ್ಪಡೆಯಾಯಿತು. ವಿಶೇಷ ಎಂದರೆ ಅತ್ತ ಇದೇ ಮೈದಾನದಲ್ಲಿ 5 ಹಾಗೂ 10 ವಿಕೆಟ್​ಗಳ ಸಾಧನೆ ಮಾಡಿದ ಬೌಲರ್​ಗಳ ಹಾನರ್ಸ್ ಪಟ್ಟಿಯಲ್ಲೂ ಅಟ್ಕಿನ್ಸನ್ ಹೆಸರಿಸಿದೆ.

2 / 6
ಇದರೊಂದಿಗೆ ಕ್ರಿಕೆಟ್ ಕಾಶಿಯಲ್ಲಿ ಅತೀ ಕಡಿಮೆ ಇನಿಂಗ್ಸ್​ಗಳ ಮೂಲಕ ಮೂರು ಹಾನರ್ಸ್​ ಪಟ್ಟಿಯಲ್ಲಿ ಸ್ಥಾನ ಪಡೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಗಸ್ ಅಟ್ಕಿನ್ಸನ್ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಇಂಗ್ಲೆಂಡ್​ನ ಮಾಜಿ ಆಟಗಾರ ಇಯಾನ್ ಬಾಥಮ್ ಹೆಸರಿನಲ್ಲಿತ್ತು.

3 / 6
1978 ರಲ್ಲಿ ಲಾರ್ಡ್ಸ್ ಮೈದಾನದಲ್ಲಿ ನಡೆದ ಪಾಕಿಸ್ತಾನ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಇಯಾನ್ ಬಾಥಮ್ ಶತಕ ಬಾರಿಸಿದ್ದರು. ಅಲ್ಲದೆ ಅದೇ ಪಂದ್ಯದಲ್ಲಿ 5 ವಿಕೆಟ್​ಗಳ ಸಾಧನೆ ಮಾಡಿದ್ದರು. ಆದರೆ ಲಾರ್ಡ್ಸ್​ ಮೈದಾನದಲ್ಲಿ 5 ವಿಕೆಟ್, 10 ವಿಕೆಟ್ (2 ಇನಿಂಗ್ಸ್​ಗಳ ಮೂಲಕ) ಹಾಗೂ ಶತಕ ಸಿಡಿಸಿದ ಹಾನರ್ಸ್ ಪಟ್ಟಿಯಲ್ಲಿ ಸ್ಥಾನ ಪಡೆಯಲು ಇಯಾನ್ ಬಾಥಮ್ ಒಟ್ಟು 6 ಇನಿಂಗ್ಸ್ ತೆಗೆದುಕೊಂಡಿದ್ದರು.

4 / 6
ಆದರೀಗ ಈ ದಾಖಲೆಯನ್ನು ಗಸ್ ಅಟ್ಕಿನ್ಸನ್ ಮುರಿದಿದ್ದಾರೆ. ಅದು ಸಹ ಕೇವಲ 4 ಇನಿಂಗ್ಸ್​ಗಳ ಮೂಲಕ ಎಂಬುದು ವಿಶೇಷ. ಜುಲೈನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅಟ್ಕಿನ್ಸನ್ ಮೊದಲ ಇನಿಂಗ್ಸ್​ನಲ್ಲಿ 7 ವಿಕೆಟ್ ಪಡೆದಿದ್ದರು. ಈ ಮೂಲಕ ಲಾರ್ಡ್ಸ್​​ನಲ್ಲಿ 5 ವಿಕೆಟ್ ಪಡೆದ ಸಾಧನೆ ಮಾಡಿದ್ದರು. ಇನ್ನು ದ್ವಿತೀಯ ಇನಿಂಗ್ಸ್​ನಲ್ಲೂ 5 ವಿಕೆಟ್ ಕಬಳಿಸಿ ಒಟ್ಟು 12 ವಿಕೆಟ್ ಪಡೆದಿದ್ದರು. ಈ ಮೂಲಕ ಲಾರ್ಡ್ಸ್ ಟೆಸ್ಟ್​ನಲ್ಲಿ 10 ವಿಕೆಟ್​ಗಳನ್ನು ಪಡೆದ ಸಾಧಕರ ಪಟ್ಟಿಗೂ ಸೇರ್ಪಡೆಯಾಗಿದ್ದರು.

5 / 6
ಇದೀಗ ಶ್ರೀಲಂಕಾ ವಿರುದ್ಧ ಶತಕ ಸಿಡಿಸುವ ಮೂಲಕ ಅತೀ ಕಡಿಮೆ ಇನಿಂಗ್ಸ್​ಗಳಲ್ಲಿ ಲಾರ್ಡ್ಸ್ ಸ್ಟೇಡಿಯಂನಲ್ಲಿನ ಮೂರು ಹಾನರ್ಸ್ ಪಟ್ಟಿಯಲ್ಲೂ ಸ್ಥಾನ ಪಡೆದ ಆಟಗಾರ ಎನಿಸಿಕೊಂಡಿದ್ದಾರೆ. ಈ ಮೂಲಕ ಕ್ರಿಕೆಟ್ ಕಾಶಿಯಲ್ಲಿ ಗಸ್ ಅಟ್ಕಿನ್ಸನ್ ಕೇವಲ 4 ಇನಿಂಗ್ಸ್​ಗಳ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ.

6 / 6
Follow us
ತಾಯಂದಿರನ್ನೇ ಮಂಚಕ್ಕೆ ಕರೆಯುತ್ತಿದ್ದಾರೆ: ಡಿಕೆ ಸುರೇಶ್ ವಾಗ್ದಾಳಿ

ರ‍್ಯಾಪ್ ಸಾಂಗ್ ಬಗ್ಗೆ ಸಿರಿ ಮಾತು; ನಕ್ಕು ಖುಷಿಪಟ್ಟ ತನಿಷಾ

Daily Devotional: ಅಧ್ಯಯನದಲ್ಲಿ ಆಸಕ್ತಿ ಮೂಡಲು ಹೀಗೆ ಮಾಡಿ

Nithya Bhavishya: ಶನಿವಾರದ ರಾಶಿ ಭವಿಷ್ಯ ತಿಳಿಯಿರಿ

ಕೆಟ್ಟ ಕಮೆಂಟ್ ಮಾಡ್ತೀರಾ? ರಕ್ಷಕ್ ಬುಲೆಟ್​ ಏನ್ ಹೇಳ್ತಾರೆ ಸ್ವಲ್ಪ ಕೇಳಿ..

ಬಂದ್​​ ಗತಿ ಕಾಣಿಸುತ್ತೇವೆ: ಗೃಹ ಸಚಿವ ಜಿ ಪರಮೇಶ್ವರ್​ ಹೀಗೆ ಹೇಳಿದ್ದೇಕೆ?

ಜೈಲಿಂದ ಹೊರಬಂದ ಅರವಿಂದ್ ಕೇಜ್ರಿವಾಲ್​ಗೆ ಹೂಮಳೆ ಸುರಿಸಿ ಅದ್ದೂರಿ ಸ್ವಾಗತ

ಮಹಿಳಾ ಅಧಿಕಾರಿಯ ಕೂದಲು ಹಿಡಿದು ಎಳೆದಾಡಿದ ಹೆಂಗಸು; ವಿಡಿಯೋ ವೈರಲ್

ದರ್ಶನ್​ಗೆ ಕೆಟ್ಟ ಸಮಯ ನಡೆಯುತ್ತಿದೆ, ಫೆಬ್ರವರಿಗೆ ಸರಿಹೋಗುತ್ತೆ: ಕೆ ಮಂಜು

ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು:ವಿಡಿಯೋ ನೋಡಿ