ENG vs SL: ಆಂಗ್ಲರ ನಾಡಲ್ಲಿ ಈ ಸಾಧನೆ ಮಾಡಿದ ಏಕೈಕ ಲಂಕಾ ಬ್ಯಾಟರ್ ಪಾತುಮ್ ನಿಸ್ಸಾಂಕ

|

Updated on: Sep 09, 2024 | 7:07 PM

Pathum Nissanka: ಓವಲ್‌ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಅವಿಸ್ಮರಣೀಯ ಇನ್ನಿಂಗ್ಸ್ ಆಡಿದ ಪಾತುಮ್ ನಿಸ್ಸಾಂಕ ಮೊದಲ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ಬಾರಿಸಿದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ಅದ್ಭುತ ದ್ವಿಶತಕ ಸಿಡಿಸಿದರು. ಪಾತುಮ್ ನಿಸ್ಸಾಂಕ ಅವರ ಈ ಶತಕದ ಆಧಾರದ ಮೇಲೆ ಶ್ರೀಲಂಕಾ 8 ವಿಕೆಟ್​​ಗಳ ಜಯ ಸಾಧಿಸಿತು.

1 / 6
ಇಂಗ್ಲೆಂಡ್ ಹಾಗೂ ಶ್ರೀಲಂಕಾ ನಡುವಿನ 3 ಪಂದ್ಯಳ ಟೆಸ್ಟ್ ಸರಣಿ 2-1 ಅಂತರದಿಂದ ಆತಿಥೇಯರ ಪಾಲಾಗಿದೆ. ಆದಾಗ್ಯೂ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಇರಾದೆಯಲ್ಲಿದ್ದ ಇಂಗ್ಲೆಂಡ್ ತಂಡದ ಕನಸಿಗೆ ಮುಳುವಾದ ಲಂಕಾ ಬ್ಯಾಟರ್ ಪಾತುಮ್ ನಿಸ್ಸಾಂಕ, ಮೂರನೇ ಟೆಸ್ಟ್​ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 107 ಎಸೆತಗಳಲ್ಲಿ ಶತಕ ಬಾರಿಸಿ ತಂಡದ ಗೆಲುವಿಗೆ ಕಾರಣರಾದರು.

2 / 6
ನಿಸ್ಸಾಂಕ ಅವರ ಈ ಶತಕ ಐತಿಹಾಸಿಕವಾಗಿದೆ. ಏಕೆಂದರೆ ಮೊದಲ ಬಾರಿಗೆ ಶ್ರೀಲಂಕಾದ ಬ್ಯಾಟ್ಸ್‌ಮನ್ ಒಬ್ಬರು ಇಂಗ್ಲೆಂಡ್‌ನಲ್ಲಿ ಅದರಲ್ಲೂ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ ಇದೇ ಪಾತುಮ್ ನಿಸ್ಸಾಂಕ ಮೊದಲ ಟೆಸ್ಟ್ ಪಂದ್ಯದ ಆಡುವ ಹನ್ನೊಂದರಲ್ಲಿ ಅವಕಾಶ ಪಡೆದಿರಲಿಲ್ಲ. ಲಾರ್ಡ್ಸ್ ಟೆಸ್ಟ್‌ನಲ್ಲಿ ಆಡುವ ಅವಕಾಶ ಪಡೆದರಾದರೂ ಎರಡೂ ಇನ್ನಿಂಗ್ಸ್‌ಗಳಲ್ಲಿ ಒಟ್ಟು 26 ರನ್ ಬಾರಿಸಿದ್ದರು.

3 / 6
ಆದರೆ ಓವಲ್‌ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಅವಿಸ್ಮರಣೀಯ ಇನ್ನಿಂಗ್ಸ್ ಆಡಿದ ಪಾತುಮ್ ನಿಸ್ಸಾಂಕ ಮೊದಲ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ಬಾರಿಸಿದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ಅದ್ಭುತ ದ್ವಿಶತಕ ಸಿಡಿಸಿದರು. ಪಾತುಮ್ ನಿಸ್ಸಾಂಕ ಅವರ ಈ ಶತಕದ ಆಧಾರದ ಮೇಲೆ ಶ್ರೀಲಂಕಾ 8 ವಿಕೆಟ್​​ಗಳ ಜಯ ಸಾಧಿಸಿತು.

4 / 6
ಈ ಶತಕದೊಂದಿಗೆ  ಇಂಗ್ಲೆಂಡ್ ವಿರುದ್ಧ ಟೆಸ್ಟ್ ಶತಕ ಸಿಡಿಸಿದ ಶ್ರೀಲಂಕಾದ 8ನೇ ಆರಂಭಿಕ ಆಟಗಾರ ಎಂಬ ಹೆಗ್ಗಳಿಕೆ ಪಾತುಮ್ ನಿಸ್ಸಾಂಕ ಪಾತ್ರರಾಗಿದ್ದಾರೆ. ಇವರಿಗೂ ಮುನ್ನ ಸನತ್ ಜಯಸೂರ್ಯ, ತಿಲಕರತ್ನೆ ದಿಲ್ಶನ್, ಸಿದತ್ ವೆಟ್ಟಿಮುನಿ, ಮಾರ್ವನ್ ಅಟಪಟ್ಟು, ರಸೆಲ್ ಅರ್ನಾಲ್ಡ್, ಅಮಲ್ ಸಿಲ್ವಾ ಈ ಸಾಧನೆ ಮಾಡಿದ್ದರು.

5 / 6
ಪಾತುಮ್ ನಿಸ್ಸಾಂಕ ರನ್ ಗಳಿಸಿದ್ದು ಮಾತ್ರವಲ್ಲದೆ ಅತ್ಯುತ್ತಮ ಜೊತೆಯಾಟವನ್ನೂ ಮಾಡಿದರು. ದಿಮುತ್ ಕರುಣಾರತ್ನೆ ಜೊತೆ 39 ರನ್‌ಗಳ ಜೊತೆಯಾಟ ನಡೆಸಿದರು. ಇದಾದ ಬಳಿಕ ಕುಸಾಲ್ ಮೆಂಡಿಸ್ ಜತೆ 69 ರನ್ ಸೇರಿಸಿದರು. ಅಂತಿಮವಾಗಿ ಈ ಆಟಗಾರ ಮ್ಯಾಥ್ಯೂಸ್ ಜತೆಗೂಡಿ 111 ರನ್​ಗಳ ಅಜೇಯ ಜೊತೆಯಾಟ ನಡೆಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

6 / 6
ಶ್ರೀಲಂಕಾ ಪರ ಇದುವರೆಗೆ ಕೇವಲ 11 ಟೆಸ್ಟ್ ಪಂದ್ಯಗಳನ್ನು ಆಡಿರುವ ನಿಸ್ಸಾಂಕ ಇಲ್ಲಿಯವರೆಗೆ 44.11 ಸರಾಸರಿಯಲ್ಲಿ 750 ರನ್ ಬಾರಿಸಿದ್ದಾರೆ. ನಿಸ್ಸಾಂಕ ಅವರು ಟೆಸ್ಟ್‌ನಲ್ಲಿ 2 ಶತಕ ಮತ್ತು 6 ಅರ್ಧ ಶತಕಗಳನ್ನು ಸಿಡಿಸಿದ್ದಾರೆ.