ಕಪ್ಪು ಮುಖದ ಫೋಟೋ ಹಂಚಿಕೊಂಡ RCB ಆಟಗಾರ್ತಿಗೆ 11 ಲಕ್ಷ ರೂ. ದಂಡ..!
Heather Knight: ಇಂಗ್ಲೆಂಡ್ ತಂಡದ ನಾಯಕಿ ಹೀದರ್ ನೈಟ್ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿದಿದ್ದಾರೆ. ಡಬ್ಲ್ಯೂಪಿಎಲ್ನಲ್ಲಿ ಒಟ್ಟು 8 ಮ್ಯಾಚ್ಗಳನ್ನಾಡಿರುವ ಹೀದರ್ 135 ರನ್ಗಳೊಂದಿಗೆ 4 ವಿಕೆಟ್ಗಳನ್ನು ಸಹ ಕಬಳಿಸಿದ್ದಾರೆ.
1 / 6
ಇಂಗ್ಲೆಂಡ್ ಮಹಿಳಾ ತಂಡದ ನಾಯಕಿ ಹೀದರ್ ನೈಟ್ ಅವರಿಗೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ 1000 ಪೌಂಡ್ (ಸುಮಾರು 11 ಲಕ್ಷ ರೂ.) ದಂಡ ವಿಧಿಸಿದೆ. 2012ರಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಕಪ್ಪುಮುಖದ ಫೋಟೋ ವಿಚಾರವಾಗಿ ವಾಗ್ದಂಡನೆ ಜೊತೆಗೆ ಈ ದಂಡ ವಿಧಿಸಲಾಗಿದೆ ಎಂದು ಇಂಗ್ಲೆಂಡ್ ಕ್ರಿಕೆಟ್ ನಿಯಂತ್ರಕರು ಸೋಮವಾರ ತಿಳಿಸಿದ್ದಾರೆ.
2 / 6
2012 ರಲ್ಲಿ ಕೆಂಟ್‌ನ ಕ್ರಿಕೆಟ್ ಕ್ಲಬ್‌ನಲ್ಲಿ ಫ್ಯಾನ್ಸಿ ಡ್ರೆಸ್ ಪಾರ್ಟಿಯಲ್ಲಿ ಭಾಗವಹಿಸಿದ್ದಾಗ ಹೀದರ್ ನೈಟ್ ಕಪ್ಪು ಮುಖದೊಂದಿಗೆ ಕಾಣಿಸಿಕೊಂಡಿದ್ದರು. ಅಲ್ಲದೆ ಈ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಜನಾಂಗೀಯತೆ ಅಥವಾ ತಾರತಮ್ಯವನ್ನು ಉತ್ತೇಜಿಸುವ ಈ ಫೋಟೋಗೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಇದೀಗ ದಂಡದ ಶಿಕ್ಷೆ ನೀಡಿದ್ದಾರೆ.
3 / 6
ಇನ್ನು ಹೀದರ್ ನೈಟ್ ಹಂಚಿಕೊಂಡಿದ್ದ ಫೋಟೋವನ್ನು ಆಕ್ರಮಣಕಾರಿ ಎಂದು ಪರಿಗಣಿಸಲಾಗಿದೆ. ಅಲ್ಲದೆ ಇಸಿಬಿ ನಿರ್ದೇಶನ 3.3 ರ ಉಲ್ಲಂಘನೆಯಾಗಿದೆ. ಈ ನಡೆಯನ್ನು ಕ್ರಿಕೆಟ್‌ನ ಹಿತಾಸಕ್ತಿಗಳಿಗೆ ಪೂರ್ವಾಗ್ರಹ ಪೀಡಿತ ಅಥವಾ ಕ್ರಿಕೆಟ್/ಕ್ರಿಕೆಟರ್‌ಗಳಿಗೆ ಅಪಖ್ಯಾತಿ ತರುವಂತಹ ಕೃತ್ಯಗಳು ಅಥವಾ ಲೋಪ ಎಂದು ಪರಿಗಣಿಸಲಾಗಿದ್ದು, ಹೀಗಾಗಿ 1000 ಪೌಂಡ್ ದಂಡದೊಂದಿಗೆ ಹೀದರ್ ನೈಟ್ಗೆ ಎಚ್ಚರಿಕೆ ನೀಡಲಾಗಿದೆ.
4 / 6
ಇದಾಗ್ಯೂ ಹೀದರ್ನೈಟ್ ಅವರಿಗೆ ಯಾವುದೇ ಜನಾಂಗೀಯ ಅಥವಾ ತಾರತಮ್ಯದ ಉದ್ದೇಶವಿರಲಿಲ್ಲ. ಹಾಗೆಯೇ ಆ ಘಟನೆಯ ಸಮಯದಲ್ಲಿ ಅವರು 21 ವರ್ಷದವರಾಗಿದ್ದರು. ಹೀಗಾಗಿ ಈ ಬಗ್ಗೆ ಹೆಚ್ಚಿನ ಅರಿವಿರಲಿಲ್ಲ. ಇದೀಗ ಈ ಘಟನೆಯ ಬಗ್ಗೆ ವಿಷಾಧ ವ್ಯಕ್ತಪಡಿಸಿ ಹೀದರ್ ನೈಟ್ ಕ್ಷಮೆಯಾಚಿಸಿದ್ದಾರೆ ಎಂದು ಕ್ರಿಕೆಟ್ ಶಿಸ್ತು ಆಯೋಗದ (CDC) ತನ್ನ ವರದಿಯಲ್ಲಿ ತಿಳಿಸಿದೆ.
5 / 6
2012 ರಲ್ಲಿ ನಾನು ಮಾಡಿದ ತಪ್ಪಿಗೆ ನಿಜವಾಗಿಯೂ ವಿಷಾದಿಸುತ್ತೇನೆ. ನನ್ನಿಂದ ತಪ್ಪಾಗಿದೆ ನಿಜ. ಆದರೆ ಅಂದು ಮಾಡಿದಂತಹ ತಪ್ಪಿನ ಬಗ್ಗೆ ನಿಜಕ್ಕೂ ಅರಿವಿರಲಿಲ್ಲ. ಅಲ್ಲದೆ ಯಾವುದೇ ದುರುದ್ದೇಶವನ್ನೂ ಸಹ ಹೊಂದಿರಲಿಲ್ಲ. ಇದೀಗ ನಾನು ಮಾಡಿದ ತಪ್ಪನ್ನು ಬದಲಾಯಿಸಲು ಸಾಧ್ಯವಾಗದಿದ್ದರೂ, ಇಂತಹ ಘಟನೆಗಳ ವಿರುದ್ಧ ಧ್ವನಿಯೆತ್ತಲು ನಾನು ಬದ್ಧನಾಗಿದ್ದೇನೆ ಎಂದು ಹೀದರ್ ನೈಟ್ ತಿಳಿಸಿದ್ದಾರೆ.
6 / 6
2016 ರಲ್ಲಿ ಇಂಗ್ಲೆಂಡ್ ತಂಡದ ನಾಯಕಿಯಾದ ಹೀದರ್ ನೈಟ್ ಇದೀಗ ಮಹಿಳಾ ಟಿ20 ವಿಶ್ವಕಪ್ನ ತಯಾರಿಯಲ್ಲಿದ್ದಾರೆ. ಅದರಂತೆ ಅಕ್ಟೋಬರ್ 3 ರಿಂದ ಶುರುವಾಗಲಿರುವ ಟಿ20 ವಿಶ್ವಕಪ್ನಲ್ಲಿ ಇಂಗ್ಲೆಂಡ್ ತಂಡವು ಹೀದರ್ ನೈಟ್ ಮುಂದಾಳತ್ವದಲ್ಲಿ ಕಣಕ್ಕಿಳಿಯಲಿದ್ದಾರೆ. ಈ ಮೂಲಕ ಇಂಗ್ಲೆಂಡ್ ತಂಡವು ಚೊಚ್ಚಲ ಟಿ20 ವಿಶ್ವಕಪ್ ಮುಡಿಗೇರಿಸಿಕೊಳ್ಳಲಿದೆಯಾ ಕಾದು ನೋಡಬೇಕಿದೆ.
Published On - 8:53 am, Tue, 24 September 24