ಟಿ20 ವಿಶ್ವಕಪ್ಗೂ ಮುನ್ನ ಹಾಲಿ ಚಾಂಪಿಯನ್ ಆಂಗ್ಲರಿಗೆ ಸಿಹಿ ಸುದ್ದಿ..!
Jofra Archer: ಜೂನ್‌ನಲ್ಲಿ ವೆಸ್ಟ್ ಇಂಡೀಸ್ ಮತ್ತು ಯುಎಸ್‌ಎಯಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಜೋಫ್ರಾ ಆರ್ಚರ್ ಆಡುವ ಸ್ಪರ್ಧೆಯಲ್ಲಿದ್ದಾರೆ ಎಂದು ಇಂಗ್ಲೆಂಡ್ ತಂಡದ ವ್ಯವಸ್ಥಾಪಕ ನಿರ್ದೇಶಕ ರಾಬ್ ಖಚಿತಪಡಿಸಿದ್ದಾರೆ.
1 / 5
2024 ರ ಟಿ20 ವಿಶ್ವಕಪ್ ಆರಂಭಕ್ಕೆ ಇನ್ನು 2 ತಿಂಗಳಿಗೂ ಕಡಿಮೆ ಸಮಯ ಉಳಿದಿದೆ. ಈ ನಡುವೆ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡಕ್ಕೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಅದೇನೆಂದರೆ ಗಾಯದಿಂದಾಗಿ 1 ವರ್ಷಗಳ ಕಾಲ ಕ್ರಿಕೆಟ್ನಿಂದ ದೂರ ಉಳಿದಿದ್ದ ತಂಡದ ಸ್ಟಾರ್ ವೇಗಿ ಪೂರ್ಣ ಗುಣಮುಖರಾಗಿದ್ದಾರೆ.
2 / 5
ಇಂಗ್ಲೆಂಡ್ ತಂಡದ ಸ್ಟಾರ್ ವೇಗದ ಬೌಲರ್ ಜೋಫ್ರಾ ಆರ್ಚರ್ ಗಾಯದ ಸಮಸ್ಯೆಯಿಂದ ಸುಮಾರು ಒಂದು ವರ್ಷ ತಂಡದಿಂದ ಹೊರಗುಳಿದಿದ್ದರು. ಗಾಯದ ಕಾರಣ, ಆರ್ಚರ್ ಕೊನೆಯ ಐಪಿಎಲ್ ಸೀಸನ್ ಮತ್ತು ಏಕದಿನ ವಿಶ್ವಕಪ್ ಕೂಡ ಆಡಲು ಸಾಧ್ಯವಾಗಲಿಲ್ಲ.
3 / 5
ಹೀಗಾಗಿ 2023 ರ ಏಕದಿನ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ತಂಡವು ಜೋಫ್ರಾ ಅವರ ಅಲಭ್ಯತೆಯ ನಷ್ಟವನ್ನು ಅನುಭವಿಸಿತ್ತು. ತಂಡ ಲೀಗ್ನಲ್ಲಿ ತೀರ ಕಳಪೆ ಪ್ರದರ್ಶನ ನೀಡಿ ಲೀಗ್ ಹಂತದಲ್ಲೇ ಟೂರ್ನಿಯಿಂದ ಹೊರಬಿದ್ದಿತ್ತು. ಆದರೆ ಈಗ ಆರ್ಚರ್ ಸಂಪೂರ್ಣವಾಗಿ ಫಿಟ್ ಆಗಿದ್ದು, 2024 ರ ಟಿ20 ವಿಶ್ವಕಪ್‌ನಲ್ಲಿ ಆಡಲಿದ್ದಾರೆ.
4 / 5
ಜೂನ್‌ನಲ್ಲಿ ವೆಸ್ಟ್ ಇಂಡೀಸ್ ಮತ್ತು ಯುಎಸ್‌ಎಯಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಜೋಫ್ರಾ ಆರ್ಚರ್ ಆಡುವ ಸ್ಪರ್ಧೆಯಲ್ಲಿದ್ದಾರೆ ಎಂದು ಇಂಗ್ಲೆಂಡ್ ತಂಡದ ವ್ಯವಸ್ಥಾಪಕ ನಿರ್ದೇಶಕ ರಾಬ್ ಖಚಿತಪಡಿಸಿದ್ದಾರೆ. ಒಂದು ವರ್ಷದಿಂದ ಇಂಗ್ಲೆಂಡ್ ಪರ ಆಡದ ಆರ್ಚರ್ ಮುಂದಿನ ತಿಂಗಳು ಪಾಕಿಸ್ತಾನ ವಿರುದ್ಧದ ತವರಿನಲ್ಲಿ ನಡೆಯಲಿರುವ ಟಿ20 ಸರಣಿಗೆ ಆಯ್ಕೆಯಾಗುವ ಸಾಧ್ಯತೆಗಳಿವೆ.
5 / 5
29 ವರ್ಷ ವಯಸ್ಸಿನ ಆರ್ಚರ್ ಕಳೆದ ಮೂರು ವರ್ಷಗಳಿಂದ ಗಾಯಗಳಿಂದ ಬಳಲುತ್ತಿದ್ದಾರೆ. ವೇಗದ ಬೌಲರ್ ಮಾರ್ಚ್ 2021 ರಿಂದ ಇಂಗ್ಲೆಂಡ್ ಪರ ಕೇವಲ ಏಳು ಪಂದ್ಯಗಳನ್ನು ಮತ್ತು ಕಳೆದ ವರ್ಷ ಮುಂಬೈ ಇಂಡಿಯನ್ಸ್ ಪರ ಐದು ಐಪಿಎಲ್ ಪಂದ್ಯಗಳನ್ನು ಮಾತ್ರ ಆಡಿದ್ದರು.