ಮಂಡಳಿ ವಿರುದ್ಧವೇ ಕಾನೂನು ಹೋರಾಟಕ್ಕೆ ಸಜ್ಜಾದ ಇಂಗ್ಲೆಂಡ್ ಕ್ರಿಕೆಟಿಗರು
England Cricket: ಇಂಗ್ಲೆಂಡ್ ಕ್ರಿಕೆಟಿಗರು ತಮ್ಮದೇ ಮಂಡಳಿಯ ವಿರುದ್ಧ ಕಾನೂನು ಹೋರಾಟಕ್ಕಿಳಿಯಲು ಸಜ್ಜಾಗಿದ್ದಾರೆ. ಇದರಿಂದ ದೊಡ್ಡ ವಿವಾದವೇ ಎದ್ದಿದೆ. ವಾಸ್ತವವಾಗಿ, ಇಸಿಬಿ ಇತ್ತೀಚೆಗೆ ತನ್ನ ಆಟಗಾರರಿಗಾಗಿ ಹೊಸ ನೀತಿಯನ್ನು ಹೊರಡಿಸಿದೆ. ಈ ಹೊಸ ನೀತಿಯಲ್ಲಿ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಆಡದಂತೆ ತಂಡದ ಆಟಗಾರರಿಗೆ ನಿಷೇಧ ವಿಧಿಸಲಾಗಿದೆ. ಇದೀಗ ಆಟಗಾರರು ಈ ನಿರ್ಧಾರವನ್ನು ವಿರೋಧಿಸಿ ದೊಡ್ಡ ಹೆಜ್ಜೆ ಇಡಲು ನಿರ್ಧರಿಸಿದ್ದಾರೆ.
1 / 6
ಒಂದೆಡೆ ಚಾಂಪಿಯನ್ಸ್ ಟ್ರೋಫಿ ಆಯೋಜಕತ್ವಕ್ಕೆ ಸಂಬಂಧಿಸಿದಂತೆ ಭಾರತ ಹಾಗೂ ಪಾಕಿಸ್ತಾನ ನಡುವೆ ಎದ್ದಿದ್ದ ಪ್ರತಿಷ್ಠೆಯ ಹೋರಾಟ ಸುಖ್ಯಾಂತ ಕಂಡಿದ್ದರೆ, ಇನ್ನೊಂದೆಡೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಮತ್ತು ತಂಡದ ಆಟಗಾರರ ನಡುವೆಯೇ ಯುದ್ಧ ಆರಂಭವಾಗಿದೆ. ಇಸಿಬಿಯ ನಿರ್ಧಾರದಿಂದ ಅಸಮಾಧಾಗೊಂಡಿರುವ ಇಂಗ್ಲೆಂಡ್ ಆಟಗಾರರು ಇದೀಗ ಮಂಡಳಿ ವಿರುದ್ಧವೇ ಬಂಡಾಯವೆದ್ದಿದ್ದಾರೆ.
2 / 6
ಇದೀಗ ತಮ್ಮದೇ ಮಂಡಳಿಯ ವಿರುದ್ಧ ಕಾನೂನು ಹೋರಾಟಕ್ಕಿಳಿಯಲು ಸಜ್ಜಾಗಿದ್ದಾರೆ. ಇದರಿಂದ ದೊಡ್ಡ ವಿವಾದವೇ ಎದ್ದಿದೆ. ವಾಸ್ತವವಾಗಿ, ಇಸಿಬಿ ಇತ್ತೀಚೆಗೆ ತನ್ನ ಆಟಗಾರರಿಗಾಗಿ ಹೊಸ ನೀತಿಯನ್ನು ಹೊರಡಿಸಿದೆ. ಈ ಹೊಸ ನೀತಿಯಲ್ಲಿ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಆಡದಂತೆ ತಂಡದ ಆಟಗಾರರಿಗೆ ನಿಷೇಧ ವಿಧಿಸಲಾಗಿದೆ. ಇದೀಗ ಆಟಗಾರರು ಈ ನಿರ್ಧಾರವನ್ನು ವಿರೋಧಿಸಿ ದೊಡ್ಡ ಹೆಜ್ಜೆ ಇಡಲು ನಿರ್ಧರಿಸಿದ್ದಾರೆ.
3 / 6
ಇಸಿಬಿಯ ನಿರ್ಧಾರದಿಂದ ಅಸಮಾಧಾಗೊಂಡಿರುವ ಆಟಗಾರರು ನೊ-ಆಬ್ಜೆಕ್ಷನ್ ಸರ್ಟಿಫಿಕೇಟ್ (ಎನ್‌ಒಸಿ) ನ ಹೊಸ ನೀತಿಯ ಬಗ್ಗೆ ತಮಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಮುಂದಿನ ವಾರ ತುರ್ತು ಸಭೆ ಕರೆದು ಈ ನಿಯಮಗಳನ್ನು ಅರ್ಥ ಮಾಡಿಕೊಂಡು ಆಡಳಿತ ಮಂಡಳಿಯಲ್ಲಿ ಪರಿಹಾರ ಕಂಡುಕೊಳ್ಳುವಂತೆ ಒತ್ತಾಯಿಸಿದ್ದಾರೆ.
4 / 6
ಈ ನಿಯಮವನ್ನು ಮುಖ್ಯವಾಗಿ ಇಸಿಬಿಯ ಯಾವುದೇ ಒಪ್ಪಂದಕ್ಕೆ ಒಳಪಟ್ಟಿರದ ಆಟಗಾರರು ವಿರೋಧಿಸಿದ್ದು, ಇಸಿಬಿಯ ಈ ಹೊಸ ನೀತಿ ನಮಗೆ ಸಿಗುತ್ತಿರುವ ಅವಕಾಶಗಳನ್ನು ಕಡಿತಗೊಳಿಸುತ್ತಿದೆ. ಇದರ ಜೊತೆಗೆ ನಮಗೆ ನಷ್ಟವನ್ನು ಉಂಟು ಮಾಡಲಿದೆ ಎಂಬುದು ಈ ಆಟಗಾರರ ಅಭಿಪ್ರಾಯವಾಗಿದೆ . ಹೀಗಾಗಿ ಮಂಡಳಿ ವಿರುದ್ಧವೇ ಈ ಆಟಗಾರರು ತಿರುಗಿಬಿದ್ದಿದ್ದಾರೆ.
5 / 6
ESPNcricinfo ವರದಿಯ ಪ್ರಕಾರ, PCA ಯ ಹಂಗಾಮಿ ಮುಖ್ಯ ಕಾರ್ಯನಿರ್ವಾಹಕ ಡಾರಿಲ್ ಮಿಚೆಲ್ ಸಂಘದ ಕಾನೂನು ತಂಡವು ಈ ECB ನೀತಿಯ ಬಗ್ಗೆ ಚರ್ಚೆ ನಡೆಸುತ್ತಿದೆ. ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಈ ನಿರ್ಧಾರದ ಪರಿಣಾಮವನ್ನು ಅಂದಾಜು ಮಾಡಿದ ನಂತರ, ಅದನ್ನು ಕಾನೂನುಬದ್ಧವಾಗಿ ಪ್ರಶ್ನಿಸುವ ಕೆಲಸಕ್ಕೆ ಕೈಹಾಕಲಿದೆ. ಇಸಿಬಿ ತನ್ನ ಹೊಸ ನೀತಿಯನ್ನು ಆಟಗಾರರೊಂದಿಗೆ ಯಾವುದೇ ಚರ್ಚೆಯಿಲ್ಲದೆ ಜಾರಿಗೆ ತಂದಿದ್ದು, ಇದರಿಂದಾಗಿ ಇಂಗ್ಲೆಂಡ್‌ನ ಹಲವು ಕ್ರಿಕೆಟಿಗರು ಕೋಪಗೊಂಡಿದ್ದಾರೆ ಎಂದು ಮಿಚೆಲ್ ಹೇಳಿದ್ದಾರೆ.
6 / 6
ಇತ್ತ ತನ್ನ ನೂತನ ನೀತಿಯ ಬಗ್ಗೆ ವಿವರಣೆ ನೀಡಿರುವ ಇಸಿಬಿ, ದೇಶೀಯ ಕ್ರಿಕೆಟ್‌ಗೆ ಬಲ ತುಂಬಲ ಮಂಡಳಿ ಈ ನಿರ್ಧಾರ ತೆಗೆದುಕೊಂಡಿದೆ ಇಸಿಬಿ ಮುಖ್ಯ ಕಾರ್ಯನಿರ್ವಾಹಕ ರಿಚರ್ಡ್ ಗೌಲ್ಡ್ ಹೇಳಿದ್ದಾರೆ. ಟಿ20 ಬ್ಲಾಸ್ಟ್ ಮತ್ತು ದಿ ಹಂಡ್ರೆಡ್‌ನಂತಹ ದೇಶೀಯ ಟೂರ್ನಿಗಳಲ್ಲಿ ಯಾವುದೇ ಅಡೆತಡೆಯಿಲ್ಲದಿದ್ದರೆ ಮಾತ್ರ ಆಟಗಾರರಿಗೆ ಪಿಎಸ್‌ಎಲ್ ಮತ್ತು ಸಿಪಿಎಲ್‌ನಂತಹ ಇತರ ದೇಶಗಳ ಲೀಗ್‌ಗಳಲ್ಲಿ ಆಡಲು ಅವಕಾಶ ನೀಡಲಾಗುವುದು ಎಂದು ಮಂಡಳಿ ತಿಳಿಸಿದೆ.