Yuvraj Singh: ಮತ್ತೊಮ್ಮೆ ಟೀಂ ಇಂಡಿಯಾ ಸೇರುವ ಇಚ್ಛೆ ವ್ಯಕ್ತಪಡಿಸಿದ ಯುವರಾಜ್ ಸಿಂಗ್..!
Yuvraj Singh: ಟೀಂ ಇಂಡಿಯಾ 2007 ರ ಟಿ20 ವಿಶ್ವಕಪ್ ಹಾಗೂ 2011 ರ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಆಲ್ರೌಂಡರ್ ಯುವರಾಜ್ ಸಿಂಗ್ ಕ್ರಿಕೆಟ್‌ಗೆ ವಿದಾಯ ಹೇಳಿ ವರ್ಷಗಳೇ ಕಳೆದಿವೆ. ಆದರೀಗ ಟೀಂ ಇಂಡಿಯಾದ ಭವಿಷ್ಯದ ದೃಷ್ಟಿಯಿಂದ ಮತ್ತೆ ತಂಡ ಸೇರಿಕೊಳ್ಳುವ ಇಂಗಿತವನ್ನು ಸಿಕ್ಸರ್ ಕಿಂಗ್ ಯುವರಾಜ್ ವ್ಯಕ್ತಪಡಿಸಿದ್ದಾರೆ.
1 / 8
ಟೀಂ ಇಂಡಿಯಾ 2007 ರ ಟಿ20 ವಿಶ್ವಕಪ್ ಹಾಗೂ 2011 ರ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಆಲ್ರೌಂಡರ್ ಯುವರಾಜ್ ಸಿಂಗ್ ಕ್ರಿಕೆಟ್‌ಗೆ ವಿದಾಯ ಹೇಳಿ ವರ್ಷಗಳೇ ಕಳೆದಿವೆ. ಆದರೀಗ ಟೀಂ ಇಂಡಿಯಾದ ಭವಿಷ್ಯದ ದೃಷ್ಟಿಯಿಂದ ಮತ್ತೆ ತಂಡ ಸೇರಿಕೊಳ್ಳುವ ಇಂಗಿತವನ್ನು ಸಿಕ್ಸರ್ ಕಿಂಗ್ ಯುವರಾಜ್ ವ್ಯಕ್ತಪಡಿಸಿದ್ದಾರೆ.
2 / 8
ಯುವರಾಜ್ ಸೆಂಟರ್ ಆಫ್ ಎಕ್ಸಲೆನ್ಸ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಯುವರಾಜ್ ಸಿಂಗ್ ಟೀಂ ಇಂಡಿಯಾದ ಕಳೆದ ಕೆಲವು ವರ್ಷಗಳ ಪ್ರದರ್ಶನ, ಐಸಿಸಿ ಈವೆಂಟ್ಗಳ ಫೈನಲ್ ಪಂದ್ಯಗಳಲ್ಲಿ ತಂಡದ ಸೋಲು ಇದೆಲ್ಲವನ್ನು ಮನನ ಮಾಡಿಕೊಂಡರು. ಹಾಗೆಯೇ ಕೊನೆಯ ಹಂತದಲ್ಲಿ ತಂಡ ಎಡವುತ್ತಿರುವುದಕ್ಕೆ ಕಾರಣ ಏನು ಎಂಬುದನ್ನು ಬಹಿರಂಗಪಡಿಸಿದರು.
3 / 8
ಈ ಬಗ್ಗೆ ಮಾತನಾಡಿದ ಯುವರಾಜ್, ನಾವು (ಟೀಂ ಇಂಡಿಯಾ) ಕಳೆದ ಕೆಲವು ವರ್ಷಗಳಿಂದ ಸಾಕಷ್ಟು ಐಸಿಸಿ ಈವೆಂಟ್ಗಳ ಫೈನಲ್‌ಗಳನ್ನು ಆಡಿದ್ದೇವೆ ಆದರೆ ಒಂದನ್ನು ಸಹ ಗೆಲ್ಲಲಿಲ್ಲ. 2017 ರಲ್ಲಿ, ನಾವು ಪಾಕಿಸ್ತಾನದ ವಿರುದ್ಧ ಸೋತ ಫೈನಲ್‌ನಲ್ಲಿ ನಾನು ಭಾಗವಾಗಿದ್ದೆ. ಮುಂಬರುವ ವರ್ಷಗಳಲ್ಲಿ ನಾವು ಖಂಡಿತವಾಗಿಯೂ ಈ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗುತ್ತದೆ.
4 / 8
ಒಂದು ದೇಶವಾಗಿ ಮತ್ತು ಭಾರತೀಯ ತಂಡವಾಗಿ, ನಾವು ಒತ್ತಡದಲ್ಲಿ ಉತ್ತಮ ಪ್ರದರ್ಶನ ನೀಡಬೇಕಾಗಿದೆ. ನನ್ನ ಪ್ರಕಾರ ಏನೋ ತಪ್ಪಿದೆ, ದೊಡ್ಡ ಮ್ಯಾಚ್ ಇದ್ದಾಗ ನಾವು ದೈಹಿಕವಾಗಿ ಸಿದ್ಧರಾಗಿದ್ದೇವೆ ಆದರೆ ಮಾನಸಿಕವಾಗಿಯೂ ನಾವು ಬಲವಾಗಿರಬೇಕು. ಆಗ ಮಾತ್ರ ನಮಗೆ ಜಯ ದೊರೆಯುತ್ತದೆ.
5 / 8
ಮುಂದುವರೆದು ಮಾತನಾಡಿದ ಯುವಿ, ಯುವ ಆಟಗಾರರಿಗೆ ಸ್ಫೂರ್ತಿ ನೀಡುವುದು, ಒತ್ತಡವನ್ನು ನಿಭಾಯಿಸುವುದು ಮತ್ತು ಅವರ ಆಟವನ್ನು ಹೇಗೆ ಸುಧಾರಿಸಬೇಕು ಎಂಬುದನ್ನು ಕಲಿಸುವುದು ಮುಖ್ಯ ಎಂದು ನಾನು ಭಾವಿಸುತ್ತೇನೆ. ಇದೊಂದು ಸವಾಲಾಗಿ ಪರಿಣಮಿಸಿದೆ. ನಮ್ಮಲ್ಲಿ ಪಂದ್ಯಗಳು ಮತ್ತು ಒತ್ತಡದಲ್ಲಿ ಬ್ಯಾಟಿಂಗ್ ಮಾಡುವ ಆಟಗಾರರಿದ್ದಾರೆ ಆದರೆ ಇಡೀ ತಂಡ ಇದನ್ನು ಮಾಡಬೇಕು, ಒಬ್ಬ ಅಥವಾ ಇಬ್ಬರು ಆಟಗಾರಿಂದ ಈ ರೀತಿಯ ಪ್ರದರ್ಶನ ಬಂದರೆ ಸಾಲದು.
6 / 8
ಹೀಗಾಗಿ ತಂಡದ ಭವಿಷ್ಯದ ದೃಷ್ಟಿಯಿಂದ ನಾನು ಟೀಂ ಇಂಡಿಯಾಕ್ಕೆ ಮಾರ್ಗದರ್ಶನ ಮಾಡಲು ಇಷ್ಟಪಡುತ್ತೇನೆ. ಮುಂಬರುವ ವರ್ಷಗಳಲ್ಲಿ ನಾನು ಕ್ರಿಕೆಟ್‌ಗೆ ಹಿಂತಿರುಗಲು ಬಯಸುತ್ತೇನೆ. ಯುವ ಆಟಗಾರರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತೇನೆ.
7 / 8
ದೊಡ್ಡ ಪಂದ್ಯಾವಳಿಗಳಲ್ಲಿ ನಾವು ಸಾಕಷ್ಟು ಮಾನಸಿಕ ಸವಾಲುಗಳನ್ನು ಎದುರಿಸುತ್ತೇವೆ ಎಂದು ನಾನು ಭಾವಿಸುತ್ತೇನೆ. ಮಾನಸಿಕ ಅಂಶದಲ್ಲಿ ನಾನು ಭವಿಷ್ಯದಲ್ಲಿ ಈ ಆಟಗಾರರೊಂದಿಗೆ ಕೆಲಸ ಮಾಡಬಹುದು ಎಂದು ನಾನು ನಂಬುತ್ತೇನೆ. ವಿಶೇಷವಾಗಿ ಮಧ್ಯಮ ಕ್ರಮಾಂಕದಲ್ಲಿ ನಾನು ಕೊಡುಗೆ ನೀಡಬಹುದೆಂದು ನಾನು ಭಾವಿಸುತ್ತೇನೆ ಎಂದು ಯುವಿ ಹೇಳಿದ್ದಾರೆ.
8 / 8
ಭಾರತ ತಂಡ ಕೊನೆಯದಾಗಿ 2013ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದಿತ್ತು. ಅಂದಿನಿಂದ ಟೀಂ ಇಂಡಿಯಾ ಐಸಿಸಿ ಪ್ರಶಸ್ತಿ ಗೆದ್ದಿಲ್ಲ. 2023ರ ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ ಭಾರತ ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧ ಸೋಲನುಭವಿಸಿತ್ತು. ಇದರಿಂದಾಗಿ ಟೀಂ ಇಂಡಿಯಾದ ಐಸಿಸಿ ಪ್ರಶಸ್ತಿ ಬರ 11 ವರ್ಷಗಳಿಂದ ಮುಂದುವರೆದಿದೆ.