RCB vs KKR, IPL 2024: ಕೊಹ್ಲಿ ಆಡಲು ಕಷ್ಟಪಟ್ಟರು: ಸೋಲಿಗೆ ಫಾಫ್ ಡುಪ್ಲೆಸಿಸ್ ನೀಡಿದ ಕಾರಣ ಏನು ನೋಡಿ

Updated on: Mar 30, 2024 | 7:38 AM

faf du plessis post match presentation: ಆರ್​ಸಿಬಿ, ವಿರಾಟ್ ಕೊಹ್ಲಿ ಅವರ ಅಜೇಯ 83 ರನ್​ಗಳ ನೆರವಿನಿಂದ 182 ರನ್ ಗಳಿಸಿದರೆ, ಈ ಟಾರ್ಗೆಟ್ ಅನ್ನು ಕೆಕೆಆರ್ ಕೇವಲ 16.5 ಓವರ್​ನಲ್ಲಿ ತಲುಪಿತು. ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್​ನಲ್ಲಿ ಮಾತನಾಡಿದ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಸೋಲಿಗೆ ಕಾರಣ ತಿಳಿಸಿದ್ದಾರೆ.

1 / 6
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೀನಾಯವಾಗಿ ಸೋತಿತು. ಬೌಲಿಂಗ್​ನಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದ ಆರ್​ಸಿಬಿ ತವರಿನಲ್ಲೇ ಸೋಲುಂಡರೆ, ಕೆಕೆಆರ್ 7 ವಿಕೆಟ್​ಗಳಿಂದ ಗೆದ್ದು ಬೀಗಿತು.

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೀನಾಯವಾಗಿ ಸೋತಿತು. ಬೌಲಿಂಗ್​ನಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದ ಆರ್​ಸಿಬಿ ತವರಿನಲ್ಲೇ ಸೋಲುಂಡರೆ, ಕೆಕೆಆರ್ 7 ವಿಕೆಟ್​ಗಳಿಂದ ಗೆದ್ದು ಬೀಗಿತು.

2 / 6

ಮೊದಲಿಗೆ ಆರ್​ಸಿಬಿ, ವಿರಾಟ್ ಕೊಹ್ಲಿ ಅವರ ಅಜೇಯ 83 ರನ್​ಗಳ ನೆರವಿನಿಂದ 182 ರನ್ ಗಳಿಸಿದರೆ, ಈ ಟಾರ್ಗೆಟ್ ಅನ್ನು ಕೆಕೆಆರ್ ಕೇವಲ 16.5 ಓವರ್​ನಲ್ಲಿ ತಲುಪಿತು. ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್​ನಲ್ಲಿ ಮಾತನಾಡಿದ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಸೋಲಿಗೆ ಕಾರಣ ತಿಳಿಸಿದ್ದಾರೆ.

3 / 6

ಮೊದಲ ಇನಿಂಗ್ಸ್‌ನಲ್ಲಿ ನಾವು ವಿಕೆಟ್ ಎರಡೂ ಕಡೆ ಇದೆ ಎಂದು ಭಾವಿಸಿದ್ದೇವೆ. ಬೌಲರ್​ಗಳು ಕಟ್ಟರ್‌, ಬ್ಯಾಕ್ ಆಫ್ ಲೆಂತ್ ಮೂಲಕ ಬೌಲಿಂಗ್ ಮಾಡಿದಾಗ ಅದನ್ನು ನೋಡಬಹುದು. ನಮ್ಮ ಆಟಗಾರರು ನಿಜವಾಗಿಯೂ ಕಷ್ಟಪಟ್ಟರು. ಆದರೆ, ಇದು ಉತ್ತಮ ಸ್ಕೋರ್ ಎಂದುಕೊಂಡೆವು, ಸ್ವಲ್ಪ ಇಬ್ಬನಿ ಕೂಡ ಬಂದಿತ್ತು ಎಂದು ಫಾಫ್ ಡುಪ್ಲೆಸಿಸ್ ಹೇಳಿದ್ದಾರೆ.

4 / 6

ಮೊದಲ ಇನ್ನಿಂಗ್ಸ್‌ನಲ್ಲಿ ನಾವು ಬ್ಯಾಟ್ ಮಾಡಲು ತುಂಬಾ ಕಷ್ಟಪಟ್ಟೆವು. ವಿರಾಟ್ ಕೊಹ್ಲಿಗೆ ಕೂಡ ವೇಗದ ಆಟವಾಡಲು ಸಾಧ್ಯವಾಗಲಿಲ್ಲ. ಅವರೂ ಕಷ್ಟಪಟ್ಟರು. ಆದರೆ, ಕೆಕೆಆರ್ ಪವರ್​ಪ್ಲೇನಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿದರು. ನರೈನ್ ಮತ್ತು ಸ್ಲಾಟ್ ಚೆಂಡನ್ನು ಹೊಡೆದ ರೀತಿ ಉತ್ತಮವಾಗಿತ್ತು. ಅವರು ನಮ್ಮ ಬೌಲರ್‌ಗಳ ಮೇಲೆ ಒತ್ತಡ ಹೇರಿದರು ಎಂಬುದು ಫಾಫ್ ಡುಪ್ಲೆಸಿಸ್ ಮಾತು.

5 / 6

ಕೆಕೆಆರ್ ಓಪನರ್​ಗಳು ಅತ್ಯುತ್ತಮ ಹೊಡೆತಗಳನ್ನು ಹೊಡೆದು ಆಟವನ್ನು ಬಹುಮಟ್ಟಿಗೆ ತೆಗೆದುಕೊಂಡರು. ನರೈನ್​ ಇದ್ದಾಗ ಸ್ಪಿನ್ ಬೌಲಿಂಗ್ ಮಾಡಲು ಸಾಧ್ಯವಿಲ್ಲ. ಮೊದಲ ಆರು ಓವರ್‌ಗಳಲ್ಲಿ ಆಟವನ್ನು ಅವರು ತೆಗೆದುಕೊಂಡರು. ನಾವು ಮ್ಯಾಕ್ಸಿಯೊಂದಿಗೆ ಸ್ಪಿನ್ನಿಂಗ್ ಆಯ್ಕೆಗಳನ್ನು ಪ್ರಯತ್ನಿಸಿದ್ದೇವೆ, ಆದರೆ ರಾತ್ರಿಯಲ್ಲಿ ಹೆಚ್ಚು ಸ್ಪಿನ್ ಇರಲಿಲ್ಲ ಎಂದು ಫಾಫ್ ಹೇಳಿದ್ದಾರೆ.

6 / 6

ನಮಗೆ ಹೆಚ್ಚಿನ ಆಯ್ಕೆ ಇರಲಿಲ್ಲ. ವೈಶಾಕ್‌ ತುಂಬಾ ಚೆನ್ನಾಗಿ ಬೌಲಿಂಗ್ ಮಾಡಿದರು, ಅವರಿಗೆ ಹೆಚ್ಚು ಅವಕಾಶಗಳು ಸಿಕ್ಕಿಲ್ಲ. ನಿಧಾನಗತಿಯ ಚೆಂಡುಗಳನ್ನು ಬೌಲ್ ಮಾಡುವವರನ್ನು ಬಹುಶಃ ಈ ಪಿಚ್‌ನಲ್ಲಿ ಎದುರಿಸಲು ಅತ್ಯಂತ ಕಷ್ಟ ಎಂದು ನಾವು ಭಾವಿಸಿದ್ದೇವೆ. ರಸೆಲ್ ಅವರ 80% ಬಾಲ್ ಕಟ್ಟರ್‌ಗಳ ಮೂಲಕ ಬೌಲ್ ಮಾಡಿದರು. ನಾವು ಅದರಿಂದ ಕಲಿತು ಕೊಂಡಿದ್ದೇವೆ - ಫಾಫ್ ಡುಪ್ಲೆಸಿಸ್.

Loading...
Unable to load recommendations.
Follow Us