Faf Duplessis: ತನ್ನ ಆಟಗಾರರನ್ನು ಬಿಟ್ಟುಕೊಡದ ಫಾಫ್: ಪಂದ್ಯದ ಬಳಿಕ ಡುಪ್ಲೆಸಿಸ್ ಏನು ಹೇಳಿದ್ರು ನೋಡಿ
RCB vs CSK, IPL 2023: ಸಿಎಸ್‌ಕೆ ವಿರುದ್ಧದ ಪಂದ್ಯ ಮುಗಿದ ಬಳಿಕ ಮಾತನಾಡಿದ ಆರ್ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ತನ್ನ ತಂಡದ ಪರವಾಗಿ ನಿಂತು ಆಟಗಾರರು ನೀಡಿದ ಪ್ರದರ್ಶನವನ್ನು ಕೊಂಡಾಡಿದ್ದಾರೆ.
1 / 8
ಇಂಡಿಯನ್ ಪ್ರೀಮಿಯರ್ ಲೀಗ್ನ ಬದ್ಧವೈರಿಗಳು ಎಂದೇ ಹೇಳಲಾಗುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವಣ ಕಾಳಗಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಸೋಮವಾರ ಸಾಕ್ಷಿಯಾಯಿತು. ಅಂದುಕೊಂಡಂತೆ ಈ ಮ್ಯಾಚ್ ಹೈವೋಲ್ಟೇಜ್ ಆಗಿತ್ತು.
2 / 8
ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿದ್ದ ಈ ರಣರೋಚಕ ಕದನದಲ್ಲಿ ಸಿಎಸ್‌ಕೆ 8 ವಿಕೆಟ್ಗಳ ಜಯ ಸಾಧಿಸಿತು. ಉಭಯ ತಂಡಗಳ ಮೊತ್ತ 200ರ ಗಾಡಿ ದಾಟಿತು. ಆರ್ಸಿಬಿ ಕೊನೆಯ ಓವರ್ ವರೆಗೂ ಹೋರಾಡಿ ಸೋಲು ಕಂಡಿತು.
3 / 8
ಪಂದ್ಯ ಮುಗಿದ ಬಳಿಕ ಮಾತನಾಡಿದ ಆರ್ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ತನ್ನ ತಂಡದ ಪರವಾಗಿ ನಿಂತು ಆಟಗಾರರು ನೀಡಿದ ಪ್ರದರ್ಶನವನ್ನು ಕೊಂಡಾಡಿದ್ದಾರೆ. ಮುಖ್ಯವಾಗಿ ಮೊಹಮ್ಮದ್ ಸಿರಾಜ್ ಅವರನ್ನು ಹಾಡಿಹೊಗಳಿದ್ದಾರೆ.
4 / 8
ಚಿನ್ನಸ್ವಾಮಿ ಕ್ರೀಡಾಂಗಣ ಬ್ಯಾಟ್ಸ್‌ಮನ್‌ಗಳಿಗೆ ಹೇಳಿ ಮಾಡಿಸಿದ ಪಿಚ್. ಇಂಥಹ ವಿಕೆಟ್‌ನಲ್ಲಿ ನೀವು ಬೌಲ್ ಮಾಡಬೇಕೆಂದರೆ, ಕೌಶಲ್ಯ ಇರಬೇಕು. ಇದನ್ನು ಮೊಹಮ್ಮದ್ ಸಿರಾಜ್ ಸಾಬೀತುಪಡಿಸಿದ್ದಾರೆ ಎಂದು ಹೇಳಿದ್ದಾರೆ. ಸಿರಾಜ್ 4 ಓವರ್ ಬೌಲಿಂಗ್ ಮಾಡಿ ಕೇವಲ 30 ರನ್ ನೀಡಿ 1 ವಿಕೆಟ್ ಪಡೆದಿದ್ದರು.
5 / 8
ಪಂದ್ಯದ ಆರಂಭವಾದಾದ ಫೀಲ್ಡಿಂಗ್ ಮಧ್ಯೆ ನನ್ನ ಪಕ್ಕೆಲುಬಿಗೆ ಪಟ್ಟಾಯಿತು. ಇದರಿಂದ ನನಗೆ ಸ್ವಲ್ಪ ಹಿನ್ನಡೆಯಾಯಿತು. ಕೊನೆಯಲ್ಲಿ ನನಗೆ ಸ್ವಲ್ಪ ಶಕ್ತಿ ಕಡಿಮೆಯಾಯಿತು, ಇದರಿಂದ ನನಗೆ ತುಂಬಾ ಬೇಸರವಾಯಿತು. ಮಧ್ಯಮ ಓವರ್‌ಗಳಲ್ಲಿ ಸ್ಪಿನ್ನರ್‌ಗಳ ಎದುರು ಇನ್ನೂ ಸ್ವಲ್ಪ ಬಿರುಸಾಗಿ ಆಡಬೇಕಾಗಿದೆ - ಫಾಫ್ ಡುಪ್ಲೆಸಿಸ್.
6 / 8
ನಾವು ಪಂದ್ಯವನ್ನು ಗೆಲುವಿನ ಮೂಲಕ ಮುಗಿಸಲು ಸಾಧ್ಯವಾಗಿಲ್ಲ, ಆದರೆ ಮುಂದೆ ಸಾಗುತ್ತೇವೆ. ನಾವು ಪರಿಪೂರ್ಣವಾಗಿ ಆಡಿದ್ದೇವೆಂದು ನನಗೆ ಅನಿಸುತ್ತಿದೆ. ಕೊನೆಯ 5 ಓವರ್‌ಗಳಲ್ಲಿ ಪಂದ್ಯ ಮುಗಿಸಲು ಅತ್ಯುತ್ತಮ ವೇದಿಕೆ ರೂಪಿಸಲಾಗಿತ್ತು ಹಾಗೂ ದಿನೇಶ್ ಕಾರ್ತಿಕ್ ಪಂದ್ಯ ಮುಗಿಸಬೇಕಿತ್ತು. ಆದರೆ, ಸಿಎಸ್‌ಕೆ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿದ ಇದಕ್ಕೆ ಅವಕಾಶ ಮಾಡಿಕೊಡಲಿಲ್ಲ ಎಂದು ಡುಪ್ಲೆಸಿಸ್ ಹೇಳಿದ್ದಾರೆ.
7 / 8
200 ರನ್‌ಗಳಿಗೆ ಎದುರಾಳಿಯನ್ನು ನಿಯಂತ್ರಿಸಿದ್ದರೆ ಚೆನ್ನಾಗಿರುತ್ತಿತ್ತು. ಆದರೆ, ಕೊನೆಯಲ್ಲಿ ನಾವು ಸ್ವಲ್ಪ ಹೆಚ್ಚಿನ ರನ್‌ಗಳನ್ನು ಬಿಟ್ಟುಕೊಟ್ಟೆವು. ಕೊನೆಯ ನಾಲ್ಕು ಓವರ್‌ಗಳಲ್ಲಿ ಪಂದ್ಯವನ್ನು ಮುಗಿಸಲು ಉತ್ತಮ ವೇದಿಕೆ ನಿರ್ಮಿಸಲಾಗಿತ್ತು. ಆದರೆ, ಅಂದುಕೊಮಡ ಯೋಜನೆಯಂತೆ ಪಂದ್ಯ ಮುಗಿಸಲು ಸಾಧ್ಯವಾಗಲಿಲ್ಲ ಎಂಬುದು ಫಾಫ್ ಡುಪ್ಲೆಸಿಸ್ ಮಾತು.
8 / 8
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 226 ರನ್ ಕಲೆಹಾಕಿತು. ಡೆವೋನ್ ಕಾನ್ವೆ 83 ರನ್ ಸಿಡಿಸಿದರು. ಆರ್ಸಿಬಿ 20 ಓವರ್‌ಗಳಲ್ಲಿ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿ ಸೋಲು ಕಂಡಿತು. ಗ್ಲೆನ್ ಮ್ಯಾಕ್ಸ್ವೆಲ್ 76 ರನ್ ಚಚ್ಚಿದರು.