Finn Allen: ಬರೋಬ್ಬರಿ 16 ಸಿಕ್ಸ್​: ತೂಫಾನ್ ಶತಕ ಸಿಡಿಸಿದ ಫಿನ್ ಅಲೆನ್

| Updated By: ಝಾಹಿರ್ ಯೂಸುಫ್

Updated on: Jan 17, 2024 | 8:32 AM

Finn Allen Century: ಈ ಬಾರಿಯ ಐಪಿಎಲ್ ಹರಾಜಿನಲ್ಲಿ 75 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಯುವ ಆಟಗಾರನನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ. ಇದರ ಬೆನ್ನಲ್ಲೇ ಟಿ20 ಲೀಗ್​ಗಳಲ್ಲಿ ಅಬ್ಬರಿಸಲಾರಂಭಿಸಿದ ಫಿನ್ ಅಲೆನ್ ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲೂ ತನ್ನ ಆರ್ಭಟ ಮುಂದುವರೆಸಿದ್ದಾರೆ.

1 / 6
ಡ್ಯುನೆಡಿನ್​ನ ಯೂನಿವರ್ಸಿಟಿ ಓವಲ್​ ಮೈದಾನದಲ್ಲಿ ನಡೆದ ಪಾಕಿಸ್ತಾನ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ನ್ಯೂಝಿಲೆಂಡ್​ನ ಫಿನ್​ ಅಲೆನ್ (Finn Allen) ಸ್ಪೋಟಕ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ್ ತಂಡ ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಕಿವೀಸ್ ಪಡೆಗೆ ಫಿನ್ ಅಲೆನ್ ಸಿಡಿಲಬ್ಬರದ ಆರಂಭ ಒದಗಿಸಿದರು.

2 / 6
ಆರಂಭಿಕನಾಗಿ ಕಣಕ್ಕಿಳಿದ ಫಿನ್ ಅಲೆನ್ ಆರಂಭದಿಂದಲೇ ಪಾಕ್​ ಬೌಲರ್​ಗಳನ್ನು ದಂಡಿಸಲಾರಂಭಿಸಿದರು. ಪರಿಣಾಮ ಮೈದಾನದ ಮೂಲೆ-ಮೂಲೆಗೂ ಸಿಕ್ಸ್​-ಫೋರ್​ಗಳ ಸುರಿಮಳೆಯಾಯಿತು. ಅಲ್ಲದೆ 26 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

3 / 6
ಅರ್ಧಶತಕದ ಬಳಿಕ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದ ಅಲೆನ್ ಪಾಕ್ ಬೌಲರ್​ಗಳ ಬೆಂಡೆತ್ತಿದರು. ಪರಿಣಾಮ ಕೇವಲ 48 ಎಸೆತಗಳಲ್ಲಿ ಭರ್ಜರಿ ಶತಕ ಮೂಡಿಬಂತು. ಅಂದರೆ ಮೊದಲ ಅರ್ಧಶತಕ ಪೂರೈಸಲು 26 ಎಸೆತಗಳನ್ನು ತೆಗೆದುಕೊಂಡಿದ್ದ ಅಲೆನ್ ಆ ಬಳಿಕ ಕೇವಲ 22 ಎಸೆತಗಳಲ್ಲಿ ಶತಕದ ಗಡಿದಾಟಿದರು.

4 / 6
ಇನ್ನು ಶತಕದ ಬಳಿಕ ಕೂಡ ಅಲೆನ್ ಅಬ್ಬರಕ್ಕೆ ಪಾಕ್ ಬೌಲರ್​ಗಳು ಹೈರಾಣರಾದರು. ಅಂತಿಮವಾಗಿ 62 ಎಸೆತಗಳಲ್ಲಿ 16 ಸಿಕ್ಸ್​ ಹಾಗೂ 5 ಫೋರ್​ಗಳೊಂದಿಗೆ 137 ರನ್ ಬಾರಿಸಿ ಫಿನ್ ಅಲೆನ್ ವಿಕೆಟ್ ಒಪ್ಪಿಸಿದರು. ಯುವ ದಾಂಡಿಗನ ಈ ಸಿಡಿಲಬ್ಬರದ ಶತಕದ ನೆರವಿನಿಂದ ನ್ಯೂಝಿಲೆಂಡ್ ತಂಡವು 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 224 ರನ್ ಕಲೆಹಾಕಿದೆ.

5 / 6
ವಿಶೇಷ ಎಂದರೆ ಇದೇ ಫಿನ್ ಅಲೆನ್ ಕಳೆದ ಮೂರು ಸೀಸನ್​ಗಳಲ್ಲಿ ಆರ್​ಸಿಬಿ ತಂಡದಲ್ಲಿದ್ದರು. ಮೂರು ವರ್ಷಗಳ ಕಾಲ ತಂಡದಲ್ಲಿದ್ದರೂ ಅಲೆನ್ ಅವರಿಗೆ ಒಂದೇ ಒಂದು ಪಂದ್ಯವಾಡಲು ಆರ್​ಸಿಬಿ ಅವಕಾಶ ನೀಡಿರಲಿಲ್ಲ. ಅಲ್ಲದೆ ಈ ಬಾರಿಯ ಐಪಿಎಲ್​ಗೂ ಮುನ್ನ ಯುವ ಆಟಗಾರನನ್ನು ತಂಡದಿಂದ ಕೈ ಬಿಡಲಾಗಿತ್ತು.

6 / 6
ಹಾಗೆಯೇ ಈ ಬಾರಿಯ ಐಪಿಎಲ್ ಹರಾಜಿನಲ್ಲಿ 75 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಯುವ ಆಟಗಾರನನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ. ಇದರ ಬೆನ್ನಲ್ಲೇ ಟಿ20 ಲೀಗ್​ಗಳಲ್ಲಿ ಅಬ್ಬರಿಸಲಾರಂಭಿಸಿದ ಫಿನ್ ಅಲೆನ್ ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲೂ ತನ್ನ ಆರ್ಭಟ ಮುಂದುವರೆಸಿದ್ದಾರೆ.