‘ಅದೊಂದು ಅಚಾತುರ್ಯದಿಂದಾಗಿ ನಾನು ಕ್ರಿಕೆಟ್​ಗೆ ವಿದಾಯ ಹೇಳಿಬೇಕಾಯ್ತು’; ಎಬಿ ಡಿವಿಲಿಯರ್ಸ್

|

Updated on: Dec 09, 2023 | 9:09 AM

AB de Villiers: ಡಿವಿಲಿರ್ಸ್​ ಅವರ ನಿವೃತ್ತಿ ನಿರ್ಧಾರದ ಹಿಂದಿನ ನಿಜವಾದ ಕಾರಣ ಯಾರಿಗೂ ತಿಳಿದಿರಲಿಲ್ಲ. ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಐದು ವರ್ಷಗಳ ನಂತರ ಕೊನೆಗೂ ಅವರು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

1 / 9
ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಕ್ರಿಕೆಟ್ ಲೋಕದಲ್ಲಿ ಮಿಸ್ಟರ್ 360 ಎಂದೇ ಖ್ಯಾತರಾಗಿದ್ದಾರೆ. ಅವರ ಬ್ಯಾಟಿಂಗ್‌ಗೆ ಕ್ರೀಡಾ ಜಗತ್ತಿನಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ. 2004 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಎಬಿಡಿ 2018 ರಲ್ಲಿ ನಿವೃತ್ತಿ ಘೋಷಿಸಿದರು.

2 / 9
ಆಟದ ಉತ್ತುಂಗದಲ್ಲಿದ್ದ ಎಬಿಡಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ ಬಳಿಕ ಐಪಿಎಲ್ ಸೇರಿದಂತೆ ಇತರೆ ಟಿ20 ಲೀಗ್​ಗಳಲ್ಲಿ ಆಡುತ್ತಿದ್ದರು. ಇಲ್ಲೂ ಸಹ ಡಿವಿಲಿಯರ್ಸ್​ ಅವರ ಫಾರ್ಮ್​ ಅದ್ಭುತವಾಗಿತ್ತು. ಆದರೆ ಇದಕ್ಕಿದ್ದಂತೆ ಅವರು ಈ ಟಿ20 ಲೀಗ್​ನಿಂದಲೂ ನಿವೃತ್ತಿ ಪಡೆದರು.

3 / 9
ಅದ್ಭುತ ಫಾರ್ಮ್​ನಲ್ಲಿದ್ದ ಡಿವಿಲಿಯರ್ಸ್​ ಅವರ ನಿರ್ಧಾರ ಅಭಿಮಾನಿಗಳಿಗೆ ಆಘಾತ ನೀಡಿತ್ತು. ಆದರೆ ತಮ್ಮ ನಿರ್ಧಾರದ ಹಿಂದಿದ್ದ ನಿಜವಾದ ಕಾರಣವೇನು ಎಂಬುದನ್ನು ಡಿವಿಲಿಯರ್ಸ್​ ಈಗ ಬಹಿರಂಗ ಪಡಿಸಿದ್ದಾರೆ.

4 / 9
ದಕ್ಷಿಣ ಆಫ್ರಿಕಾ ಒರ 114 ಟೆಸ್ಟ್, 228 ಏಕದಿನ ಮತ್ತು 78 ಟಿ20 ಪಂದ್ಯಗಳನ್ನು ಆಡಿರುವ ಡಿವಿಲಿಯರ್ಸ್, ಎಲ್ಲಾ ಮೂರು ಸ್ವರೂಪಗಳಲ್ಲಿ 20014 ರನ್ ಕಲೆಹಾಕಿದ್ದಾರೆ. ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದ ಎಬಿಡಿ ಕ್ರಿಕೆಟ್ ವೃತ್ತಿಜೀವನದ ಉತ್ತುಂಗದಲ್ಲಿರುವಾಗಲೇ ಅಂದರೆ 2018 ರಲ್ಲಿ ಅಂತರಾಷ್ಟ್ರೀಯ ಮತ್ತು 2021 ರಲ್ಲಿ ಐಪಿಎಲ್​ಗೆ ನಿವೃತ್ತಿ ಘೋಷಿಸಿದರು.

5 / 9
ಆದರೆ ಈ ನಿವೃತ್ತಿಯ ಹಿಂದಿನ ನಿಜವಾದ ಕಾರಣ ಯಾರಿಗೂ ತಿಳಿದಿರಲಿಲ್ಲ. ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಐದು ವರ್ಷಗಳ ನಂತರ ಕೊನೆಗೂ ಅವರು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ವೆಬ್‌ಸೈಟ್‌ಗೆ ನೀಡಿದ ಸಂದರ್ಶನದಲ್ಲಿ ಅವರು ತಮ್ಮ ಆತುರದ ನಿವೃತ್ತಿಯ ಹಿಂದಿನ ನಿಜವಾದ ಕಾರಣವನ್ನು ಬಹಿರಂಗಪಡಿಸಿದ್ದಾರೆ.

6 / 9
ಡಿವಿಲಿಯರ್ಸ್​ ಹೇಳಿಕೊಂಡಿರುವಂತೆ, ನನ್ನ ಮಗ ಆಕಸ್ಮಿಕವಾಗಿ ನನ್ನ ಕಣ್ಣಿಗೆ ಒದ್ದ. ಪರಿಣಾಮವಾಗಿ, ನನ್ನ ಬಲಗಣ್ಣಿನ ದೃಷ್ಟಿ ಕ್ಷೀಣಿಸಲು ಪ್ರಾರಂಭಿಸಿತು. ಹೀಗಾಗಿ ಶಸ್ತ್ರಚಿಕಿತ್ಸೆಗೆ ಒಳಾಗದೆ. ನನ್ನ ಸರ್ಜರಿ ಆದಾಗ ಡಾಕ್ಟರ್ ಕೂಡ ಕೇಳಿದರು, ಈ ಸ್ಥಿತಿಯಲ್ಲಿ ನೀನು ಹೇಗೆ ಕ್ರಿಕೆಟ್ ಆಡುತ್ತೀಯ, ಹೇಗೆ ಸಾಧ್ಯ? ಎಂದು.

7 / 9
ಅದೃಷ್ಟವಶಾತ್, ನನ್ನ ವೃತ್ತಿಜೀವನದ ಕೊನೆಯ ಎರಡು ವರ್ಷಗಳಲ್ಲಿ ನನ್ನ ಎಡಗಣ್ಣು ಉತ್ತಮವಾಗಿ ಕಾರ್ಯನಿರ್ವಹಿಸಿತು. ಹೀಗಾಗಿ ನಾನು ಮುಂದಿನ 2 ವರ್ಷ ಕ್ರಿಕೆಟ್ ಆಡಲು ಸಾಧ್ಯವಾಯಿತು ಎಂದಿದ್ದಾರೆ.

8 / 9
ಆ ಬಳಿಕ ಕೊರೊನಾ ನಾನು ನನ್ನ ವೃತ್ತಿಜೀವನಕ್ಕೆ ವಿದಾಯ ಹೇಳುವುದರ ಮೇಲೆ ಸಾಕಷ್ಟು ಪ್ರಭಾವ ಬೀರಿತು. ಆ ಬಳಿಕವೂ ನಾನು ಐಪಿಎಲ್ ಅಥವಾ ಇತರ ಪಂದ್ಯಾವಳಿಗಳನ್ನು ಆಡಬೇಕೇ ಅಥವಾ ಬೇಡವೇ? ಎಂದು ಯೋಚಿಸಿದೆ.

9 / 9
ಆದರೆ ಅಂತಿಮವಾಗಿ 2018 ರಲ್ಲಿ ಐಪಿಎಲ್ ಆಡುವುದನ್ನು ನಿಲ್ಲಿಸಿದೆ. ನಂತರ ಟೆಸ್ಟ್‌ನಲ್ಲಿ ಆಡಲು ಪ್ರಯತ್ನಿಸಿದೆ. ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧ ಆಡಿದ ನಂತರ ನಾನು ವಿದಾಯ ಹೇಳಲು ನಿರ್ಧರಿಸಿದೆ ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.

Published On - 9:07 am, Sat, 9 December 23