
ಆಸ್ಟ್ರೇಲಿಯಾದ ಸ್ಟಾರ್ ಆಲ್-ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ (Glenn Maxwell) ಪಾಕಿಸ್ತಾನ್ ಸೂಪರ್ ಲೀಗ್ಗೆ (PSL 2026) ಎಂಟ್ರಿ ಕೊಟ್ಟಿದ್ದಾರೆ. ಅದು ಸಹ ನೇರ ಆಯ್ಕೆಯ ಮೂಲಕ. ಅಂದರೆ ಈ ಬಾರಿಯ ಪಿಎಸ್ಎಲ್ ಹರಾಜಿನಲ್ಲಿ ಮ್ಯಾಕ್ಸ್ವೆಲ್ ಹೆಸರು ಕಾಣಿಸಿಕೊಂಡಿರಲಿಲ್ಲ. ಇದೀಗ ನೇರ ಸೈನಿಂಗ್ ಮೂಲಕ ಮ್ಯಾಕ್ಸಿ ಹೈದರಾಬಾದ್ ಕಿಂಗ್ಸ್‌ಮೆನ್ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ.

ಇದಕ್ಕೂ ಮುನ್ನ ಮ್ಯಾಕ್ಸ್ವೆಲ್ ಪೇಶಾವರ್ ಝಲ್ಮಿ ತಂಡದ ಪರ ಆಡಲಿದ್ದಾರೆ ಎಂಬ ಸುದ್ದಿ ಹರಿದಾಡಿದ್ದವು. ಆದರೆ ಕಾರಣಾಂತರಗಳಿಂದ ಝಲ್ಮಿ ಹಾಗೂ ಮ್ಯಾಕ್ಸಿ ನಡುವೆ ಡೀಲ್ ಕುದುರಿರಲಿಲ್ಲ. ಇದೀಗ ಪಿಎಸ್ಎಲ್ನ ಹೊಸ ಫ್ರಾಂಚೈಸಿ ಹೈದರಾಬಾದ್ ಕಿಂಗ್ಸ್‌ಮೆನ್ ಪರ ಕಣಕ್ಕಿಳಿಯಲು ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಇನ್ನು ಹೈದರಾಬಾದ್ ಕಿಂಗ್ಸ್‌ಮೆನ್ ಫ್ರಾಂಚೈಸಿಯು ಗ್ಲೆನ್ ಮ್ಯಾಕ್ಸ್ವೆಲ್ ಜೊತೆ ಸುಮಾರು 4.5 ಕೋಟಿ ಪಾಕಿಸ್ತಾನಿ ರೂಪಾಯಿಗಳಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಅಂದರೆ ಭಾರತೀಯ ರೂಪಾಯಿ ಮೌಲ್ಯ 1.47 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ.

ಈ ಮೊತ್ತವು ಗ್ಲೆನ್ ಮ್ಯಾಕ್ಸ್ವೆಲ್ ಈ ಹಿಂದೆ ಐಪಿಎಲ್ನಲ್ಲಿ ಪಡೆದಿದ್ದ ಸಂಭಾವನೆಗಿಂತ ಕಡಿಮೆ ಎಂಬುದು ವಿಶೇಷ. ಏಕೆಂದರೆ ಕಳೆದ ಸೀಸನ್ನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕಣಕ್ಕಿಳಿದಿದ್ದ ಗ್ಲೆನ್ ಮ್ಯಾಕ್ಸ್ವೆಲ್ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯಿಂದ ಪಡೆದ ಮೊತ್ತ 4.20 ಕೋಟಿ ರೂ.

ಐಪಿಎಲ್ನಲ್ಲಿ ಸಿಕ್ಕ ಮೊತ್ತಕ್ಕೆ ಹೋಲಿಸಿದರೆ ಪಿಎಸ್ಎಲ್ನಲ್ಲಿ ಮ್ಯಾಕ್ಸ್ವೆಲ್ಗೆ ಸಿಗುತ್ತಿರುವುದು ಕಡಿಮೆ ಸಂಭಾವನೆ. ಇದಾಗ್ಯೂ ಅವರು ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಅದರಂತೆ 11ನೇ ಆವೃತ್ತಿಯ ಪಿಎಸ್ಎಲ್ನಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಹೈದರಾಬಾದ್ ಕಿಂಗ್ಸ್‌ಮೆನ್ ಪರ ಕಣಕ್ಕಿಳಿಯಲಿದ್ದಾರೆ.