ಬರೋಬ್ಬರಿ 13 ಭರ್ಜರಿ ಸಿಕ್ಸ್​… ಮ್ಯಾಕ್ಸ್​ವೆಲ್​ ಬ್ಯಾಟ್​ನಿಂದ ತೂಫಾನ್ ಸೆಂಚುರಿ

Updated on: Jun 18, 2025 | 8:24 AM

Glenn Maxwell: ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದ ಗ್ಲೆನ್ ಮ್ಯಾಕ್ಸ್​ವೆಲ್ ಮತ್ತೆ ಸಿಡಿಲಬ್ಬರ ಶುರು ಮಾಡಿದ್ದಾರೆ. ಈ ಬಾರಿ ಅವರ ಸಿಡಿಲಬ್ಬರಕ್ಕೆ ಸಾಕ್ಷಿಯಾಗಿದ್ದು ಕ್ಯಾಲಿಫೋರ್ನಿಯಾದ ಒಕ್​ಲ್ಯಾಂಡ್ ಕೊಲಿಸಿಯಾ ಸ್ಟೇಡಿಯಂನಲ್ಲಿ. ಅಮೆರಿಕದಲ್ಲಿ ನಡೆಯುತ್ತಿರುವ ಎಂಎಲ್​ಸಿ ಲೀಗ್​ನಲ್ಲಿ ಭರ್ಜರಿ ಸೆಂಚುರಿ ಸಿಡಿಸುವ ಮೂಲಕ ಮ್ಯಾಕ್ಸ್​ವೆಲ್ ಮತ್ತೆ ಫಾರ್ಮ್​ಗೆ ಮರಳಿದ್ದಾರೆ.

1 / 5
ಅಮೆರಿಕದಲ್ಲಿ ನಡೆಯುತ್ತಿರುವ ಮೇಜರ್ ಪ್ರೀಮಿಯರ್ ಲೀಗ್​ನ (MLC 2025) 8ನೇ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್ (Glenn Maxwell) ವಿಸ್ಫೋಟಕ ಸೆಂಚುರಿ ಸಿಡಿಸಿದ್ದಾರೆ.  ಕ್ಯಾಲಿಫೋರ್ನಿಯಾದ ಒಕ್​ಲ್ಯಾಂಡ್ ಕೊಲಿಸಿಯಾ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ವಾಷಿಂಗ್ಟನ್ ಫ್ರೀಡಂ ಹಾಗೂ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಿದ್ದವು.

2 / 5
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ವಾಷಿಂಗ್ಟನ್ ಫ್ರೀಡಂ ಉತ್ತಮ ಆರಂಭ ಪಡೆದಿರಲಿಲ್ಲ. ಅಲ್ಲದೆ 64 ರನ್​ಗಳಿಸುವಷ್ಟರಲ್ಲಿ ಅಗ್ರ ಕ್ರಮಾಂಕದ ನಾಲ್ವರು ಪೆವಿಲಿಯನ್ ಸೇರಿದ್ದರು. ಈ ಹಂತದಲ್ಲಿ ಕಣಕ್ಕಿಳಿದ ಗ್ಲೆನ್ ಮ್ಯಾಕ್ಸ್​ವೆಲ್ ಅಕ್ಷರಶಃ ಅಬ್ಬರಿಸಿದರು. ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್​ಗೆ ಒತ್ತು ನೀಡಿದ ಮ್ಯಾಕ್ಸಿ 15 ಓವರ್​ಗಳು ಕಳೆಯುತ್ತಿದ್ದಂತೆ ಸಿಡಿಲಬ್ಬರವನ್ನು ಶುರು ಮಾಡಿದ್ದರು.

3 / 5
ಪರಿಣಾಮ 29 ಎಸೆತಗಳಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್ ಬ್ಯಾಟ್​ನಿಂದ ಅರ್ಧಶತಕ ಮೂಡಿಬಂತು. ಹಾಫ್ ಸೆಂಚುರಿ ಬಳಿಕ ಆಕ್ರಮಣಕಾರಿ ಬ್ಯಾಟಿಂಗ್ ಮುಂದುವರೆಸಿದ ಮ್ಯಾಕ್ಸಿ ಮೈದಾನದ ಮೂಲೆ ಮೂಲೆಗೆ ಸಿಕ್ಸ್-ಫೋರ್​ಗಳ ಸುರಿಮಳೆಗೈದರು. ಇದರಿಂದಾಗಿ 19 ಎಸೆತಗಳಲ್ಲಿ ಮತ್ತೊಂದು 50 ರನ್​ ಮೂಡಿಬಂತು. ಈ ಮೂಲಕ ಗ್ಲೆನ್ ಮ್ಯಾಕ್ಸ್​ವೆಲ್ ಕೇವಲ 48 ಎಸೆತಗಳಲ್ಲಿ ಶತಕ ಪೂರೈಸಿದರು.

4 / 5
ಅಲ್ಲದೆ 49 ಎಸೆತಗಳಲ್ಲಿ 13 ಭರ್ಜರಿ ಸಿಕ್ಸ್ ಹಾಗೂ 2 ಫೋರ್​ಗಳೊಂದಿಗೆ 106 ರನ್​ ಬಾರಿಸುವ ಮೂಲಕ ಅಜೇಯರಾಗಿ ಉಳಿದರು. ಮ್ಯಾಕ್ಸ್​ವೆಲ್ ಅವರ ಈ ಸಿಡಿಲಬ್ಬರದ ಸೆಂಚುರಿ ನೆರವಿನಿಂದ ವಾಷಿಂಗ್ಟನ್ ಫ್ರೀಡಂ ತಂಡವು 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 208 ರನ್ ಕಲೆಹಾಕಿದೆ. ಈ ಮೂಲಕ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ತಂಡಕ್ಕೆ 209 ರನ್​ಗಳ ಗುರಿ ನೀಡಿದೆ.

5 / 5
ಅಂದಹಾಗೆ ಈ ಬಾರಿಯ ಐಪಿಎಲ್​ನಲ್ಲಿ ಪಂಜಾಬ್ ಕಿಂಗ್ಸ್ ಪರ ಕಣಕ್ಕಿಳಿದಿದ್ದ ಗ್ಲೆನ್ ಮ್ಯಾಕ್ಸ್​ವೆಲ್ 7 ಪಂದ್ಯಗಳಿಂದ ಕಲೆಹಾಕಿದ್ದು ಕೇವಲ 48 ರನ್​ಗಳು ಮಾತ್ರ. ಈ ವೇಳೆ ಅವರ ಬ್ಯಾಟ್​ನಿಂದ ಮೂಡಿಬಂದ ಸಿಕ್ಸರ್​ಗಳ ಸಂಖ್ಯೆ ಕೇವಲ ಒಂದು. ಇನ್ನು 2024 ರಲ್ಲಿ ಆರ್​ಸಿಬಿ ಪರ 10 ಪಂದ್ಯವಾಡಿದ್ದ ಮ್ಯಾಕ್ಸ್​ವೆಲ್ 2 ಸಿಕ್ಸರ್​ಗಳೊಂದಿಗೆ ಒಟ್ಟು 52 ರನ್ ಮಾತ್ರ ಕಲೆಹಾಕಿದ್ದರು. ಆದರೀಗ ಮೇಜರ್ ಲೀಗ್​ ಟಿ20 ಟೂರ್ನಿಯ ಒಂದೇ ಪಂದ್ಯದಲ್ಲೇ 13 ಸಿಕ್ಸ್​ ಸಿಡಿಸಿ ಸ್ಫೋಟಕ ಸೆಂಚುರಿ ಸಿಡಿಸಿ ಅಬ್ಬರಿಸಿದ್ದಾರೆ.