IPL 2023: ಪಿಂಕ್ ಜೆರ್ಸಿ ತೊಟ್ಟು ಹೈದರಾಬಾದ್ ವಿರುದ್ಧ ಕಣಕ್ಕಿಳಿಯಲಿದೆ ಗುಜರಾತ್; ಕಾರಣವೇನು ಗೊತ್ತಾ?

|

Updated on: May 15, 2023 | 4:51 PM

GT New Jersey 2023: ಸಾಮಾನ್ಯವಾಗಿ ಪ್ರತಿ ಪಂದ್ಯದಲ್ಲಿ ಬೂದು ಬಣ್ಣದ ಜರ್ಸಿಯನ್ನು ಧರಿಸಿ ಕಣಕ್ಕಿಳಿಯುವ ಗುಜರಾತ್ ತಂಡ ಇಂದು ರಾತ್ರಿ ಪಿಂಕ್ (ಲ್ಯಾವೆಂಡರ್) ಬಣ್ಣದ ಜೆರ್ಸಿ ತೊಟ್ಟು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲಿದೆ.

1 / 7
ಇಂದು ತನ್ನ ತವರಿನಲ್ಲಿ ಸನ್​​ರೈಸರ್ಸ್​ ಹೈದರಾಬಾದ್ ತಂಡ ವಿರುದ್ಧ ಕಣಕ್ಕಿಳಿಯುತ್ತಿರುವ ಗುಜರಾತ್ ಟೈಟಾನ್ಸ್ ತಂಡಕ್ಕೆ ಇಂದಿನ ಪಂದ್ಯ ಬಹಳ ಮಹತ್ವದ್ದಾಗಿದೆ. ಈ ಪಂದ್ಯದಲ್ಲಿ ಗೆದ್ದರೆ ಹಾರ್ದಿಕ್ ಪಾಂಡ್ಯ ಪಡೆ ನೇರವಾಗಿ ಪ್ಲೇ ಆಫ್​ಗೆ ಎಂಟ್ರಿಕೊಡಲಿದೆ. ಸೋತರೆ ಇನ್ನೂ ಒಂದು ಪಂದ್ಯಕ್ಕಾಗಿ ಕಾಯಬೇಕಾಗುತ್ತದೆ.

2 / 7
ಹೀಗಾಗಿ ಇಂದಿನ ಪಂದ್ಯವನ್ನು ಗೆಲ್ಲಲೇಬೇಕಾದ ಹುಮ್ಮಸಿನ್ನೊಂದಿಗೆ ಕಣಕ್ಕಿಳಿಯುತ್ತಿರುವ ಗುಜರಾತ್ ಟೈಟಾನ್ಸ್ ತಂಡ ಇಂದಿನ ಪಂದ್ಯದಲ್ಲಿ ವಿಶೇಷ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದೆ.

3 / 7
ಸಾಮಾನ್ಯವಾಗಿ ಪ್ರತಿ ಪಂದ್ಯದಲ್ಲಿ ಬೂದು ಬಣ್ಣದ ಜರ್ಸಿಯನ್ನು ಧರಿಸಿ ಕಣಕ್ಕಿಳಿಯುವ ಗುಜರಾತ್ ತಂಡ ಇಂದು ರಾತ್ರಿ ಪಿಂಕ್ (ಲ್ಯಾವೆಂಡರ್) ಬಣ್ಣದ ಜೆರ್ಸಿ ತೊಟ್ಟು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲಿದೆ.

4 / 7
ಈ ವಿಚಾರವನ್ನು ಫ್ರಾಂಚೈಸಿಯೇ ದೃಢಪಡಿಸಿದ್ದು, ನಾಯಕ ಹಾರ್ದಿಕ್ ಪಾಂಡ್ಯ, ಉಪನಾಯಕ ರಶೀದ್ ಖಾನ್, ಶುಬ್ಮನ್ ಗಿಲ್ ಮತ್ತು ಅಲ್ಜಾರಿ ಜೋಸೆಫ್ ಮತ್ತು ಶಿವಂ ಮಾವಿ ಲ್ಯಾವೆಂಡರ್ ಜೆರ್ಸಿ ಧರಿಸಿ ಫೋಸ್ ಕೊಟ್ಟಿರುವ ಫೋಟೋವನ್ನು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ.

5 / 7
ಗುಜರಾತ್ ತಂಡ ಈ​ ಲ್ಯಾವೆಂಡರ್ ಬಣ್ಣದ ಜೆರ್ಸಿ ಧರಿಸುವ ಹಿಂದೆ ಒಂದು ಸದುದ್ದೇಶವೂ ಇದ್ದು, ಇದರ ಮೂಲಕ ಕ್ಯಾನ್ಸರ್ ವಿರುದ್ಧದ ಹೋರಾಟವನ್ನು ಬೆಂಬಲಿಸಲು ಫ್ರಾಂಚೈಸಿ ಮುಂದಾಗಿದೆ. ಈ ಉಪಕ್ರಮದ ಮೂಲಕ, ಕ್ಯಾನ್ಸರ್ ವಿರುದ್ಧದ ಹೋರಾಟ, ಸಾಮಾನ್ಯ ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ಫ್ರಾಂಚೈಸಿಯ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿದ ಪ್ರತ್ಯೇಕ ವೀಡಿಯೊದಲ್ಲಿ ಪಾಂಡ್ಯ ಹೇಳಿದ್ದಾರೆ.

6 / 7
ಇನ್ನು ಮೊದಲ ಬಾರಿಗೆ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿರುವ ಗುಜರಾತ್ ಕೇವಲ ಈ ಸೀಸನ್​ಗೆ ಮಾತ್ರ ಇದನ್ನು ಸೀಮಿತಗೊಳಿಸುತ್ತದೋ ಅಥವಾ ಪ್ರತಿ ಆವೃತ್ತಿಯ ಕೊನೆಯ ಹೋಮ್ ಲೀಗ್ ಪಂದ್ಯದಲ್ಲಿ ಈ ರೀತಿಯ ಜಾಗೃತಿ ಕೆಲಸವನ್ನು ಮುಂದುವರೆಸುತ್ತದೋ ಎಂಬುದು ಅಸ್ಪಷ್ಟವಾಗಿ ಉಳಿದಿದೆ.

7 / 7
ಇನ್ನು ಐಪಿಎಲ್​ನಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಆರ್​ಸಿಬಿ ಬಹಳ ಹಿಂದಿನಿಂದಲೇ ಮಾಡಿಕೊಂಡು ಬಂದಿದ್ದು,  2011 ರ ಐಪಿಎಲ್​ನಿಂದ ಆರ್​ಸಿಬಿ ಒಂದು ಪಂದ್ಯದಲ್ಲಿ ಗ್ರೀನ್ ಜೆರ್ಸಿ ತೊಟ್ಟು ಪಂದ್ಯವನ್ನಾಡಲು ಆರಂಭಿಸಿದೆ. ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಕಾರಣದಿಂದ ಆರ್‌ಸಿಬಿ ತಂಡ ಈ ವಿಭಿನ್ನ ಹಾದಿಯನ್ನು ಹಿಡಿದಿದೆ. ಈ ಹಸಿರು ಜರ್ಸಿಯ ವಿಶೇಷತೆಯೆಂದರೆ 100 ಪ್ರತಿಶತ ಮರುಬಳಕೆಯ ವಸ್ತುಗಳಿಂದ ಈ ಜರ್ಸಿಯನ್ನು ತಯಾರಿಸಲಾಗಿರುತ್ತದೆ.

Published On - 4:49 pm, Mon, 15 May 23