ಏಕೆಂದರೆ ಲಕ್ನೋ ತಂಡವು ಪ್ರಸ್ತುತ 13 ಪಾಯಿಂಟ್ಸ್ ಹೊಂದಿದ್ದು, ಮುಂದಿನ 2 ಪಂದ್ಯಗಳಲ್ಲಿ 1 ರಲ್ಲಿ ಸೋತು, 1 ರಲ್ಲಿ ಗೆದ್ದರೂ ಒಟ್ಟು ಪಾಯಿಂಟ್ಸ್ 15 ಆಗಲಿದೆ. ಇತ್ತ 16 ಅಂಕಗಳಿಸಲು ಆರ್ಸಿಬಿ ಹಾಗೂ ಪಂಜಾಬ್ ಕಿಂಗ್ಸ್ಗೆ ಉತ್ತಮ ಅವಕಾಶವಿದೆ. ಹೀಗಾಗಿ ಲಕ್ನೋ ತಂಡದ ಮುಂದಿನ ಪಂದ್ಯಗಳ ಫಲಿತಾಂಶವು ಆರ್ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳ ಪ್ಲೇಆಫ್ ಹಾದಿಯನ್ನು ಮತ್ತಷ್ಟು ಸುಗಮಗೊಳಿಸಲಿದೆ.