- Kannada News Photo gallery Cricket photos faf du plessis in post match presentation after RR vs RCB IPL 2023 Match he said Really good for our NRR
Faf Duplessis: 112 ರನ್ಗಳ ಗೆಲುವಿನ ಬಳಿಕ ಆರ್ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಹೇಳಿದ್ದೇನು ನೋಡಿ
RR vs RCB, IPL 2023: ರಾಜಸ್ಥಾನ್ ವಿರುದ್ಧ ಭರ್ಜರಿ ಗೆಲುವು ಸಾಧಿಸುವ ಮೂಲಕ ಆರ್ಸಿಬಿ ತಂಡ ಐಪಿಎಲ್ 2023 ರಲ್ಲಿ ತನ್ನ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿದೆ. ಪಂದ್ಯ ಮುಗಿದ ಬಳಿಕ ಮಾತನಾಡಿದ ಆರ್ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಖುಷಿ ಹಂಚಿಕೊಂಡಿದ್ದಾರೆ.
Updated on: May 15, 2023 | 7:39 AM

ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆಟಗಾರರ ಪ್ರದರ್ಶನ ಪಂದ್ಯದಿಂದ ಪಂದ್ಯಕ್ಕೆ ಹೇಗಿರುತ್ತೆ ಎಂದು ಊಹಿಸಲೂ ಸಾಧ್ಯವಿಲ್ಲ. ಇದಕ್ಕೆ ಉತ್ತಮ ಉದಾಹರಣೆ ಐಪಿಎಲ್ 2023 ರಲ್ಲಿ ಭಾನುವಾರ ನಡೆದ ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಣ ಪಂದ್ಯ.

ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದ ಆರ್ಆರ್-ಆರ್ಸಿಬಿ ನಡುವಣ ಪಂದ್ಯದಲ್ಲಿ ಫಾಫ್ ಡುಪ್ಲೆಸಿಸ್ ಪಡೆ ಬೌಲಿಂಗ್ನಲ್ಲಿ ಊಹಿಸಲಾಗದ ರೀತಿಯ ಪ್ರದರ್ಶನ ತೋರಿತು. ಸ್ಯಾಮ್ಸನ್ ಪಡೆಯನ್ನು ಕೇವಲ 59 ರನ್ಗೆ ಆಲೌಟ್ ಮಾಡಿ ಬರೋಬ್ಬರಿ112 ರನ್ಗಳ ಜಯ ಸಾಧಿಸಿತು.

ಈ ಗೆಲುವಿನ ಮೂಲಕ ಬೆಂಗಳೂರು ತಂಡ ಐಪಿಎಲ್ 2023 ರಲ್ಲಿ ತನ್ನ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿದೆ. ಪಂದ್ಯ ಮುಗಿದ ಬಳಿಕ ಮಾತನಾಡಿದ ಆರ್ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಖುಷಿ ಹಂಚಿಕೊಂಡಿದ್ದಾರೆ.

ನಮ್ಮ ನೆಟ್ರನ್ರೇಟ್ ಹೆಚ್ಚಳ ಆಗಿರುವುದು ಒಳ್ಳೆಯ ವಿಷಯ. ಈ ಪಿಚ್ ತುಂಬಾ ಕಷ್ಟಕರವಾಗಿತ್ತು. ನಾವು ಮೊದಲು ಬ್ಯಾಟಿಂಗ್ ಮಾಡಿ ಪಿಚ್ ಹೇಗೆ ವರ್ತಿಸುತ್ತದೆ ಎಂಬುದನ್ನು ಅರಿತೆವು. ಪವರ್ ಪ್ಲೇನಲ್ಲಿ ರನ್ ಕಲೆಹಾಕುವಾಗ ನಾವು ಇಲ್ಲಿ 160 ಉತ್ತಮ ಸ್ಕೋರ್ ಎಂದು ಭಾವಿಸಿದೆವು - ಫಾಫ್ ಡುಪ್ಲೆಸಿಸ್.

ನಾವು 15 ಓವರ್ ತನಕ ಉತ್ತಮ ಅಡಿಪಾಯ ಹಾಕಿಕೊಟ್ಟೆವು. ಅಂತಿಮ ಹಂತದಲ್ಲೂ ಪಂದ್ಯದ ಸ್ಥಿತಿಯನ್ನು ನಮ್ಮ ಕಡೆ ಮಾಡಿದೆವು. ಎಲ್ಲ ಆಟಗಾರರು ಉತ್ತಮ ಪ್ರದರ್ಶನ ತೋರಿದ್ದಾರೆ. ಬ್ರೇಸ್ವೆಲ್ ಪ್ರತಿ ಬಾರಿ ನೆಟ್ನಲ್ಲಿ ಬೌಲಿಂಗ್ ಮಾಡುತ್ತಾರೆ. ನಮಗೆ ಲೆಫ್ಟ್ ಆರ್ಮ್ ಸ್ಪಿನ್ನರ್ನ ಅವಶ್ಯಕತೆಯಿತ್ತು. ಶಹ್ಬಾಜ್ ಮುಂದಿನ ಪಂದ್ಯದಲ್ಲಿ ಆಡುತ್ತಾರೆ ಎಂದು ಫಾಫ್ ಹೇಳಿದ್ದಾರೆ.

ಈ ಗೆಲುವು ನಮಗೆ ತುಂಬಾ ಮುಖ್ಯವಾಗಿತ್ತು. ನಮ್ಮ ಆಟಗಾರರಲ್ಲಿ ಈ ಜಯ ಆತ್ಮವಿಶ್ವಾಸ ತುಂಬಿದೆ. ಮುಂದಿನ ಎರಡು ಪಂದ್ಯಗಳಿಗೆ ಇದು ತುಂಬಾ ಸಹಕಾರಿ ಆಗಲಿದೆ ಎಂಬುದು ಫಾಫ್ ಡುಪ್ಲೆಸಿಸ್ ಮಾತು.

ಸೋತ ತಂಡದ ನಾಯಕ ಸಂಜು ಸ್ಯಾಮ್ಸನ್ ಮಾತನಾಡಿ, ಪ್ರತಿ ಪಂದ್ಯದಲ್ಲಿ ನಾವು ಪವರ್ ಪ್ಲೇಯಲ್ಲಿ ಉತ್ತಮ ಆರಂಭ ಪಡೆದುಕೊಳ್ಳುತ್ತಿದ್ದೆವು. ಆದರೆ, ಅದು ಈ ಬಾರಿ ಬರಲಿಲ್ಲ. ಆರ್ಸಿಬಿ ಬೌಲರ್ಗಳಿಗೆ ಕ್ರೆಡಿಟ್ ಸಲ್ಲಬೇಕು ಎಂದು ಸ್ಯಾಮ್ಸನ್ ಹೇಳಿದ್ದಾರೆ.
