- Kannada News Photo gallery Cricket photos RR vs RCB IPL 2023 Here is the Photos of Rajasthan Royals vs Royal Challengers Bangalore Match Kannada News
RR vs RCB, IPL 2023: ರಾಜಸ್ಥಾನ್ vs ಆರ್ಸಿಬಿ ರೋಚಕ ಪಂದ್ಯದ ಫೋಟೋ ನೋಡಿ
Rajasthan vs Bangalore: ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿಗೆ ನಾಯಕ ಫಾಫ್ ಡುಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ (18) ಅರ್ಧಶತಕದ ಜೊತೆಯಾಟ ನೀಡಿದರು. ಬಳಿಕ ಗ್ಲೆನ್ ಮ್ಯಾಕ್ಸ್ವೆಲ್ ಜೊತೆಯಾದ ಫಾಫ್ ಬೊಂಬಾಟ್ ಆಟ ಪ್ರದರ್ಶಿಸಿದರು.
Updated on:May 15, 2023 | 11:15 AM

ಐಪಿಎಲ್ 2023 ರಲ್ಲಿ ಭಾನುವಾರ ನಡೆದ ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಣ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿತ್ತು. ಸ್ಯಾಮ್ಸನ್ ಪಡೆಯನ್ನು ಕೇವಲ 59 ರನ್ಗೆ ಆಲೌಟ್ ಮಾಡಿ 112 ರನ್ಗಳ ಜಯ ಸಾಧಿಸಿದ ಬೆಂಗಳೂರು ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿದೆ.

ಬೌಲಿಂಗ್ನಲ್ಲಿ ಸತತ ಕಳಪೆ ಪ್ರದರ್ಶನ ತೋರುತ್ತಿದ್ದ ಆರ್ಸಿಬಿ ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದ ಆರ್ಆರ್ ವಿರುದ್ಧದ ಈ ಪಂದ್ಯದಲ್ಲಿ ಊಹಿಸಲಾಗದ ರೀತಿಯ ಪ್ರದರ್ಶನ ತೋರಿತು.

ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿಗೆ ನಾಯಕ ಫಾಫ್ ಡುಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ (18) ಅರ್ಧಶತಕದ ಜೊತೆಯಾಟ ನೀಡಿದರು.

ಬಳಿಕ ಗ್ಲೆನ್ ಮ್ಯಾಕ್ಸ್ವೆಲ್ ಜೊತೆಯಾದ ಫಾಫ್ ಬೊಂಬಾಟ್ ಆಟ ಪ್ರದರ್ಶಿಸಿದರು. ಡುಪ್ಲೆಸಿಸ್ 44 ಎಸೆತಗಳಲ್ಲಿ 55 ರನ್ ಗಳಿಸಿದರೆ, ಮ್ಯಾಕ್ಸ್ವೆಲ್ 54 ರನ್ ಚಚ್ಚಿದರು.

ಕೊನೆಯಲ್ಲಿ ಅನುಜ್ ರಾವತ್ 11 ಎಸೆತಗಳಲ್ಲಿ 29 ರನ್ ಸಿಡಿಸಿದ ಪರಿಣಾಮ ಆರ್ಸಿಬಿ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 171 ರನ್ ಕಲೆಹಾಕಿತು.

ಟಾರ್ಗೆಟ್ ಬೆನ್ನಟ್ಟಿದ ರಾಜಸ್ಥಾನ್ ಮೊದಲ ಓವರ್ನಿಂದಲೇ ವಿಕೆಟ್ ಕಳೆದುಕೊಂಡು ಸಾಗಿ ಕೇವಲ 59 ರನ್ಗೆ ಸರ್ವಪತನ ಕಂಡಿತು. ತಂಡದ ಪರ ಹೆಟ್ಮೇರ್ (35) ಅತಿ ಹೆಚ್ಚು ಕಲೆಹಾಕಿದರು.

ಆರ್ಸಿಬಿ ಪರ ವೇಯ್ನ್ ಪಾರ್ನೆಲ್ 3 ವಿಕೆಟ್ ಕಿತ್ತು ಮಿಂಚಿದರೆ ಮಿಚೆಲ್ ಬ್ರೆಸ್ವೆಲ್ ಹಾಗೂ ಕರ್ಣ್ ಶರ್ಮಾ ತಲಾ 2 ವಿಕೆಟ್ ಪಡೆದರು.
Published On - 11:12 am, Mon, 15 May 23
