- Kannada News Photo gallery Cricket photos GT New Jersey 2023 Why Are Gujarat Titans Wearing Pink Jersey Today
IPL 2023: ಪಿಂಕ್ ಜೆರ್ಸಿ ತೊಟ್ಟು ಹೈದರಾಬಾದ್ ವಿರುದ್ಧ ಕಣಕ್ಕಿಳಿಯಲಿದೆ ಗುಜರಾತ್; ಕಾರಣವೇನು ಗೊತ್ತಾ?
GT New Jersey 2023: ಸಾಮಾನ್ಯವಾಗಿ ಪ್ರತಿ ಪಂದ್ಯದಲ್ಲಿ ಬೂದು ಬಣ್ಣದ ಜರ್ಸಿಯನ್ನು ಧರಿಸಿ ಕಣಕ್ಕಿಳಿಯುವ ಗುಜರಾತ್ ತಂಡ ಇಂದು ರಾತ್ರಿ ಪಿಂಕ್ (ಲ್ಯಾವೆಂಡರ್) ಬಣ್ಣದ ಜೆರ್ಸಿ ತೊಟ್ಟು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲಿದೆ.
Updated on:May 15, 2023 | 4:51 PM

ಇಂದು ತನ್ನ ತವರಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ವಿರುದ್ಧ ಕಣಕ್ಕಿಳಿಯುತ್ತಿರುವ ಗುಜರಾತ್ ಟೈಟಾನ್ಸ್ ತಂಡಕ್ಕೆ ಇಂದಿನ ಪಂದ್ಯ ಬಹಳ ಮಹತ್ವದ್ದಾಗಿದೆ. ಈ ಪಂದ್ಯದಲ್ಲಿ ಗೆದ್ದರೆ ಹಾರ್ದಿಕ್ ಪಾಂಡ್ಯ ಪಡೆ ನೇರವಾಗಿ ಪ್ಲೇ ಆಫ್ಗೆ ಎಂಟ್ರಿಕೊಡಲಿದೆ. ಸೋತರೆ ಇನ್ನೂ ಒಂದು ಪಂದ್ಯಕ್ಕಾಗಿ ಕಾಯಬೇಕಾಗುತ್ತದೆ.

ಹೀಗಾಗಿ ಇಂದಿನ ಪಂದ್ಯವನ್ನು ಗೆಲ್ಲಲೇಬೇಕಾದ ಹುಮ್ಮಸಿನ್ನೊಂದಿಗೆ ಕಣಕ್ಕಿಳಿಯುತ್ತಿರುವ ಗುಜರಾತ್ ಟೈಟಾನ್ಸ್ ತಂಡ ಇಂದಿನ ಪಂದ್ಯದಲ್ಲಿ ವಿಶೇಷ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದೆ.

ಸಾಮಾನ್ಯವಾಗಿ ಪ್ರತಿ ಪಂದ್ಯದಲ್ಲಿ ಬೂದು ಬಣ್ಣದ ಜರ್ಸಿಯನ್ನು ಧರಿಸಿ ಕಣಕ್ಕಿಳಿಯುವ ಗುಜರಾತ್ ತಂಡ ಇಂದು ರಾತ್ರಿ ಪಿಂಕ್ (ಲ್ಯಾವೆಂಡರ್) ಬಣ್ಣದ ಜೆರ್ಸಿ ತೊಟ್ಟು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲಿದೆ.

ಈ ವಿಚಾರವನ್ನು ಫ್ರಾಂಚೈಸಿಯೇ ದೃಢಪಡಿಸಿದ್ದು, ನಾಯಕ ಹಾರ್ದಿಕ್ ಪಾಂಡ್ಯ, ಉಪನಾಯಕ ರಶೀದ್ ಖಾನ್, ಶುಬ್ಮನ್ ಗಿಲ್ ಮತ್ತು ಅಲ್ಜಾರಿ ಜೋಸೆಫ್ ಮತ್ತು ಶಿವಂ ಮಾವಿ ಲ್ಯಾವೆಂಡರ್ ಜೆರ್ಸಿ ಧರಿಸಿ ಫೋಸ್ ಕೊಟ್ಟಿರುವ ಫೋಟೋವನ್ನು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ.

ಗುಜರಾತ್ ತಂಡ ಈ ಲ್ಯಾವೆಂಡರ್ ಬಣ್ಣದ ಜೆರ್ಸಿ ಧರಿಸುವ ಹಿಂದೆ ಒಂದು ಸದುದ್ದೇಶವೂ ಇದ್ದು, ಇದರ ಮೂಲಕ ಕ್ಯಾನ್ಸರ್ ವಿರುದ್ಧದ ಹೋರಾಟವನ್ನು ಬೆಂಬಲಿಸಲು ಫ್ರಾಂಚೈಸಿ ಮುಂದಾಗಿದೆ. ಈ ಉಪಕ್ರಮದ ಮೂಲಕ, ಕ್ಯಾನ್ಸರ್ ವಿರುದ್ಧದ ಹೋರಾಟ, ಸಾಮಾನ್ಯ ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ಫ್ರಾಂಚೈಸಿಯ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿದ ಪ್ರತ್ಯೇಕ ವೀಡಿಯೊದಲ್ಲಿ ಪಾಂಡ್ಯ ಹೇಳಿದ್ದಾರೆ.

ಇನ್ನು ಮೊದಲ ಬಾರಿಗೆ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿರುವ ಗುಜರಾತ್ ಕೇವಲ ಈ ಸೀಸನ್ಗೆ ಮಾತ್ರ ಇದನ್ನು ಸೀಮಿತಗೊಳಿಸುತ್ತದೋ ಅಥವಾ ಪ್ರತಿ ಆವೃತ್ತಿಯ ಕೊನೆಯ ಹೋಮ್ ಲೀಗ್ ಪಂದ್ಯದಲ್ಲಿ ಈ ರೀತಿಯ ಜಾಗೃತಿ ಕೆಲಸವನ್ನು ಮುಂದುವರೆಸುತ್ತದೋ ಎಂಬುದು ಅಸ್ಪಷ್ಟವಾಗಿ ಉಳಿದಿದೆ.

ಇನ್ನು ಐಪಿಎಲ್ನಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಆರ್‌ಸಿಬಿ ಬಹಳ ಹಿಂದಿನಿಂದಲೇ ಮಾಡಿಕೊಂಡು ಬಂದಿದ್ದು, 2011 ರ ಐಪಿಎಲ್ನಿಂದ ಆರ್‌ಸಿಬಿ ಒಂದು ಪಂದ್ಯದಲ್ಲಿ ಗ್ರೀನ್ ಜೆರ್ಸಿ ತೊಟ್ಟು ಪಂದ್ಯವನ್ನಾಡಲು ಆರಂಭಿಸಿದೆ. ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಕಾರಣದಿಂದ ಆರ್‌ಸಿಬಿ ತಂಡ ಈ ವಿಭಿನ್ನ ಹಾದಿಯನ್ನು ಹಿಡಿದಿದೆ. ಈ ಹಸಿರು ಜರ್ಸಿಯ ವಿಶೇಷತೆಯೆಂದರೆ 100 ಪ್ರತಿಶತ ಮರುಬಳಕೆಯ ವಸ್ತುಗಳಿಂದ ಈ ಜರ್ಸಿಯನ್ನು ತಯಾರಿಸಲಾಗಿರುತ್ತದೆ.
Published On - 4:49 pm, Mon, 15 May 23



















