Suryakumar Yadav: ಸೂರ್ಯಕುಮಾರ್ ಯಾದವ್​ಗೆ ಹುಟ್ಟುಹಬ್ಬದ ಸಂಭ್ರಮ: ಮಂಗಳೂರಿನ ಹುಡುಗಿಗೆ ಪ್ರಪೋಸ್ ಮಾಡಿದ್ದರು ಸ್ಕೈ

|

Updated on: Sep 14, 2023 | 11:29 AM

Happy Birthday Suryakumar Yadav: ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್​ಗೆ ಹುಟ್ಟುಹಬ್ಬದ ಸಂಭ್ರಮ. 33ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಸೂರ್ಯನಿಗೆ ಶುಭಾಶಯಗಳ ಮಹಾಪೂರನೇ ಹರಿದುಬರುತ್ತಿದೆ. ಇಲ್ಲಿದೆ ನೋಡಿ ಸೂರ್ಯನ ಕೆಲ ಕುತೂಹಲಕಾರಿ ಮಾಹಿತಿ.

1 / 6
ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಹಾಗೂ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಆಡುವ ಸೂರ್ಯಕುಮಾರ್ ಯಾದವ್ ಇಂದು (ಸೆ. 14) ತಮ್ಮ 33ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಟಿ20ಐ ಕ್ರಿಕೆಟ್​ನಲ್ಲಿ ನಂಬರ್ ಒನ್ ಬ್ಯಾಟರ್ ಆಗಿರುವ ಸೂರ್ಯಕುಮಾರ್ ಜನ್ಮದಿನಕ್ಕೆ ಶುಭಾಶಯಗಳ ಮಹಾಪೂರನೇ ಹರಿದುಬರುತ್ತಿದೆ. ಇಲ್ಲಿದೆ ನೋಡಿ ಸೂರ್ಯನ ಕೆಲ ಕುತೂಹಲಕಾರಿ ಮಾಹಿತಿ.

2 / 6
ಸೂರ್ಯಕುಮಾರ್ ಯಾದವ್ ಇಂಡಿಯನ್ ಪ್ರೀಮಿಯರ್ ಲೀಗ್ ಋತುವಿನಲ್ಲಿ 200-ಪ್ಲಸ್ ಸ್ಟ್ರೈಕ್ ರೇಟ್‌ನೊಂದಿಗೆ ನಾಲ್ಕು ಫಿಫ್ಟಿ ಪ್ಲಸ್ ಸ್ಕೋರ್‌ಗಳನ್ನು ಗಳಿಸಿದ ಏಕೈಕ ಬ್ಯಾಟರ್ ಆಗಿದ್ದಾರೆ. ಅವರು ಮುಂಬೈ ಇಂಡಿಯನ್ಸ್‌ಗಾಗಿ 2023 ರಲ್ಲಿ ಈ ಸಾಧನೆ ಮಾಡಿದ್ದರು.

3 / 6
ಮುಂಬೈ ಇಂಡಿಯನ್ಸ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಐಪಿಎಲ್ 2023 ರ ಸೀಸನ್‌ನಲ್ಲಿ 180 ಪ್ಲಸ್ ಸ್ಟ್ರೈಕ್ ರೇಟ್‌ನೊಂದಿಗೆ 600 ಪ್ಲಸ್ ರನ್ ಗಳಿಸಿದ ಏಕೈಕ ಭಾರತೀಯ ಬ್ಯಾಟರ್ ಆಗಿದ್ದಾರೆ.

4 / 6
ಸೂರ್ಯಕುಮಾರ್ ಯಾದವ್ ಅವರು ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಓಪನರ್ ಆಗಿ ಅಲ್ಲದೆ ಅತಿ ಹೆಚ್ಚು ಶತಕಗಳನ್ನು ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ. 2022 ರಲ್ಲಿ ನಾಟಿಂಗ್‌ಹ್ಯಾಮ್‌ನಲ್ಲಿ ನಡೆದ T20I ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 'SKY' ಅತ್ಯುತ್ತಮ 117 ರನ್ ಗಳಿಸಿದ್ದರು.

5 / 6
ಸೂರ್ಯಕುಮಾರ್ ಯಾದವ್ 2022 ರ ಒಂದು ವರ್ಷದಲ್ಲಿ 1,000 ಪ್ಲಸ್ ಅಂತರರಾಷ್ಟ್ರೀಯ ಟಿ20 ರನ್‌ಗಳನ್ನು ಗಳಿಸಿದ ಏಕೈಕ ಭಾರತೀಯರಾಗಿದ್ದಾರೆ. ಅವರು ಒಂದು ವರ್ಷದಲ್ಲಿ ಹೆಚ್ಚಿನ ಟಿ20 ಅಂತರರಾಷ್ಟ್ರೀಯ ಸಿಕ್ಸರ್‌ಗಳನ್ನು ಸಹ ಸಿಡಿಸಿದ್ದಾರೆ. ಒಟ್ಟು 68 ಸಿಕ್ಸರ್ ಬಾರಿಸಿದ್ದಾರೆ.

6 / 6
ಸೂರ್ಯ ಲವ್​ಸ್ಟೋರಿ ವಿಚಾರಕ್ಕೆ ಬಂದರೆ, ಇವರು ಜುಲೈ 2016 ರಲ್ಲಿ ದೇವಿಶಾ ಶೆಟ್ಟಿ ಅವರನ್ನು ವಿವಾಹವಾದರು. ವಿಶೇಷ ಎಂದರೆ ಇಬ್ಬರೂ ಕಾಲೇಜಿನಲ್ಲಿ ಪ್ರೇಮಿಗಳಾಗಿದ್ದು, ಸೂರ್ಯ ಇವರಿಗೆ ಪ್ರಪೋಸ್ ಮಾಡಿದ್ದರಂತೆ. ಆ ಬಳಿಕ ತನ್ನ ಪ್ರೇಯಸಿಯನ್ನೇ ವಿವಾಹವಾಗಿ ಸೂರ್ಯಕುಮಾರ್ ದಾಂಪತ್ಯ ಜೀವನವನ್ನು ಆರಂಭಿಸಿದ್ದರು. ದೇವಿಶಾ ಮೂಲತಃ ಮಂಗಳೂರಿನವರಾಗಿದ್ದಾರೆ.