ಪಂದ್ಯ ಮುಗಿದ ಬಳಿಕ ಹಾರ್ದಿಕ್ ಪಾಂಡ್ಯ ಆಡಿದ ಮಾತು ವೈರಲ್: ಯಾರ ಬಗ್ಗೆ ಏನಂದ್ರು ನೋಡಿ
Hardik Pandya Post Match presentation, IND vs WI 4th T20I: ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ಶುಭ್ಮನ್ ಗಿಲ್ ಸ್ಫೋಟಕ ಬ್ಯಾಟಿಂಗ್ ನಡೆಸಿ ಭಾರತಕ್ಕೆ 9 ವಿಕೆಟ್ಗಳ ಜಯ ತಂದುಕೊಟ್ಟರು. ಪಂದ್ಯ ಮುಗಿದ ಬಳಿಕ ನಾಯಕ ಹಾರ್ದಿಕ್ ಪಾಂಡ್ಯ ಏನು ಹೇಳಿದ್ದಾರೆ ನೋಡಿ.
1 / 8
ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತ ಬ್ಯಾಟಿಂಗ್ನಲ್ಲಿ ಭರ್ಜರಿ ಪ್ರದರ್ಶನ ತೋರಿ ಸರಣಿ ಸಮಬಲ ಸಾಧಿಸಿದೆ. ಫ್ಲೋರಿಡಾದ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂ ಟರ್ಫ್ ಗ್ರೌಂಡ್ನಲ್ಲಿ ನಡೆದ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ಶುಭ್ಮನ್ ಗಿಲ್ ಸ್ಫೋಟಕ ಬ್ಯಾಟಿಂಗ್ ನಡೆಸಿ ತಂಡಕ್ಕೆ 9 ವಿಕೆಟ್ಗಳ ಜಯ ತಂದುಕೊಟ್ಟರು.
2 / 8
ಜೈಸ್ವಾಲ್ 51 ಎಸೆತಗಳಲ್ಲಿ ಅಜೇಯ 84 ರನ್ ಸಿಡಿಸಿದರೆ, ಗಿಲ್ 47 ಎಸೆತಗಳಲ್ಲಿ 77 ರನ್ ಬಾರಿಸಿದರು. ಇದೀಗ 9 ವಿಕೆಟ್ಗಳ ಜಯದೊಂದಿಗೆ ಐದು ಪಂದ್ಯಗಳ ಟಿ20 ಸರಣಿ 2-2 ಅಂತರದಿಂದ ಸಮಬಲಗೊಂಡಿದೆ. ಪಂದ್ಯ ಮುಗಿದ ಬಳಿಕ ಮಾತನಾಡಿದ ಟೀಮ್ ಇಂಡಿಯಾ ನಾಯಕ ಹಾರ್ದಿಕ್ ಪಾಂಡ್ಯ ಏನಂದ್ರು ನೋಡಿ.
3 / 8
ಈ ಪಂದ್ಯ ವೀಕ್ಷಿಸಲು ಅನೇಕ ಭಾರತೀಯ ಅಭಿಮಾನಿಗಳು ಬಂದಿದ್ದಾರೆ. ಅವರು ನಮಗೆ ಬೆಂಬಲ ನೀಡಿದ ರೀತಿ ಅದ್ಭುತವಾಗಿತ್ತು. ಅವರಿಗಾಗಿ ನಾವು ಮನೋರಂಜನೆ ನೀಡಬೇಕು ಎಂದು ಬಂದ ಅಭಿಮಾನಿಗಳಿಗೆ ಹಾರ್ದಿಕ್ ಅಭಿನಂದನೆ ಸಲ್ಲಿಸಿದ್ದಾರೆ. ಗಿಲ್ ಮತ್ತು ಜೈಸ್ವಾಲ್ ಅವರಲ್ಲಿರುವ ಕೌಶಲ್ಯದ ಬಗ್ಗೆ ಯಾವುದೇ ಅನುಮಾನವಿಲ್ಲ ಎಂದು ಹಾರ್ದಿಕ್ ಹೇಳಿದ್ದಾರೆ.
4 / 8
ಮುಂದಿನ ಪಂದ್ಯದಲ್ಲಿ ನಾವು ಬ್ಯಾಟಿಂಗ್ ವಿಭಾಗದಲ್ಲಿ ಇನ್ನಷ್ಟು ಜವಾಬ್ದಾರಿ ವಹಿಸಿ ಬೌಲರ್ಗಳಿಗೆ ಸಹಾಯ ಮಾಡುತ್ತೇವೆ. ಬೌಲರ್ಗಳು ಪಂದ್ಯವನ್ನು ಗೆಲ್ಲಿಸಿಕೊಡುತ್ತಾರೆ. ಅವರು ನಮಗೆ ಕೆಲ ವಿಕೆಟ್ಗಳನ್ನು ತೆಗೆದುಕೊಟ್ಟರೆ ನಾವು ಪಂದ್ಯದಲ್ಲಿ ನಿಯಂತ್ರಣ ಸಾಧಿಸುತ್ತೇವೆ ಎಂಬುದು ಹಾರ್ದಿಕ್ ಪಾಂಡ್ಯ ಮಾತಾಗಿತ್ತು.
5 / 8
ಶುಭ್ಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ತಮ್ಮ ಕೆಲಸವನ್ನು ಅವರಿಬ್ಬರು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಇದನ್ನು ನೋಡಲು ತುಂಬಾ ಸಂತಸವಾಗುತ್ತಿದೆ. ನಾಯಕನಾಗಿ ಈ ಪಂದ್ಯವನ್ನು ಹೀಗೆ ನೋಡಲು ಖುಷಿಯಾಗುತ್ತದೆ. ನಾವು ಸತತವಾಗಿ ಎರಡು ಪಂದ್ಯದಲ್ಲಿ ಸೋತಿದ್ದೆವು. ಮೊದಲ ಪಂದ್ಯದಲ್ಲಿ ನಾವೇ ಮಾಡಿದ ತಪ್ಪಿನಿಂದ ಸೋತೆವು. ಕೊನೆಯ ನಾಲ್ಕು ಓವರ್ಗಳಲ್ಲಿ ಗೊಂದಲದಲ್ಲಿದ್ದೆವು ಎಂದು ಹಾರ್ದಿಕ್ ಹೇಳಿದ್ದಾರೆ.
6 / 8
ನಾವು ಮೂರನೇ ಮತ್ತು ನಾಲ್ಕನೇ ಪಂದ್ಯದಲ್ಲಿ ಹೆಚ್ಚಿನ ಬದಲಾವಣೆ ಮಾಡಲಿಲ್ಲ. ಈ ಎಲ್ಲ ಪಂದ್ಯಗಳು ನಮಗೆ ಹೆಚ್ಚಿನ ಆತ್ಮವಿಶ್ವಾಸ ನೀಡಿದೆ. ಉತ್ತಮ ಕ್ರಿಕೆಟ್ ಆಡಲು ಪ್ರೋತ್ಸಾಹ ಸಿಕ್ಕಂತಾಗಿದೆ. ಅದನ್ನೇ ನಮ್ಮ ಹುಡಗರು ಮಾಡಿದ್ದಾರೆ. ಟಿ20 ಕ್ರಿಕೆಟ್ನಲ್ಲಿ ಫೆವರಿಟ್ ಎಂದು ಯಾರೂ ಇಲ್ಲ. ಇಲ್ಲ ಉತ್ತಮ ಕ್ರಿಕೆಟ್ ಆಡುವ ತಂಡ ಗೆಲ್ಲುತ್ತದಷ್ಟೆ ಎಂಬುದು ಹಾರ್ದಿಕ್ ಪಾಂಡ್ಯ ಮಾತು.
7 / 8
ವೆಸ್ಟ್ ಇಂಡೀಸ್ ತಂಡ ಆರಂಭದಲ್ಲಿ 2-0 ಅಂಕಗಳ ಅಂತರದಿಂದ ಮುನ್ನಡೆ ಪಡೆದುಕೊಂಡಿತ್ತು. ಯಾಕೆಂದರೆ ಅವರು ನಮಗಿಂತ ಉತ್ತಮ ಕ್ರಿಕೆಟ್ ಆಡಿದ್ದರು. ಐದನೇ ಟಿ20 ಪಂದ್ಯ ಮಹತ್ವದ್ದಾಗಿದೆ. ಈ ಪಂದ್ಯದಲ್ಲಿ ನೀಡಿದ ಪ್ರದರ್ಶನವನ್ನೇ ಮುಂದಿನ ಪಂದ್ಯದಲ್ಲೂ ಮುಂದುವರೆಸುತ್ತೇವೆ. ಅಲ್ಲೂ ಗೆಲ್ಲುವ ವಿಶ್ವಾಸವಿದೆ - ಹಾರ್ದಿಕ್ ಪಾಂಡ್ಯ.
8 / 8
ಬಹಳಷ್ಟು ರೋಚಕತೆ ಸೃಷ್ಟಿಸಿರುವ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಟಿ20 ಸರಣಿಯ ಅಂತಿಮ ಐದನೇ ಪಂದ್ಯ ಇಂದು ನಡೆಯಲಿದೆ. ನಾಲ್ಕನೇ ಟಿ20 ಪಂದ್ಯ ನಡೆದ ಫ್ಲೋರಿಡಾದ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂ ಟರ್ಫ್ ಗ್ರೌಂಡ್ನಲ್ಲಿಯೇ ಈ ಪಂದ್ಯ ಕೂಡ ಆಯೋಜಿಸಲಾಗಿದೆ.