
ಗುಜರಾತ್ ಟೈಟಾನ್ಸ್ ತಂಡವನ್ನು ಮೊದಲ ಬಾರಿಗೆ ಐಪಿಎಲ್ ಚಾಂಪಿಯನ್ ಮಾಡಿದ ಹಾರ್ದಿಕ್ ಪಾಂಡ್ಯ ಈ ದಿನಗಳಲ್ಲಿ ವಿಶೇಷ ಗೆಲುವಿನ ಸಂಭ್ರಮದಲ್ಲಿದ್ದಾರೆ. ಐಪಿಎಲ್‌ಗೂ ಮುನ್ನ ನಿರಂತರವಾಗಿ ಪ್ರಶ್ನೆಗೆ ಒಳಗಾಗಿದ್ದ ಹಾರ್ದಿಕ್, ಆಲ್‌ರೌಂಡರ್ ಮಾತ್ರವಲ್ಲದೆ ನಾಯಕನಾಗಿಯೂ ತನ್ನನ್ನು ತಾನು ಸಾಬೀತುಪಡಿಸಿದ್ದರು.

ಈ ಗೆಲುವಿಗೆ ಪ್ರತಿಯಾಗಿ ಹಾರ್ದಿಕ್‌ಗೆ ವಿಶೇಷ ಉಡುಗೊರೆ ಸಿಕ್ಕಿದೆ. ವೀರ್ ಪಹಾಡಿಯಾ ಮಾಜಿ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗ ಮತ್ತು ಉದ್ಯಮಿ. ಅವರು ಹಾರ್ದಿಕ್‌ಗೆ ಗುಜರಾತ್ ಟೈಟಾನ್ಸ್‌ನ ಲಾಂಛನದ ವಿನ್ಯಾಸದಲ್ಲಿ ಮಾಡಿದ ಲಾಕೆಟ್ ಅನ್ನು ಉಡುಗೊರೆಯಾಗಿ ನೀಡಿದರು.



Published On - 3:30 pm, Sun, 5 June 22