IPL 2024 Trade Deal: ಐಪಿಎಲ್ ಇತಿಹಾಸದಲ್ಲೇ ದೊಡ್ಡ ಸುದ್ದಿ: ಗುಜರಾತ್ ಟೈಟಾನ್ಸ್ ತಂಡದಿಂದ ಹೊರಬಂದ ಹಾರ್ದಿಕ್ ಪಾಂಡ್ಯ?
Hardik Pandya likely Join Mumbai Indians: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತ್ಯಂತ ಆಘಾತಕಾರಿ ಟ್ರೇಡ್ ನಡೆಯುತ್ತಿದೆ. ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ತಮ್ಮ ಫ್ರಾಂಚೈಸಿ ಬಿಟ್ಟು ತಮ್ಮ ಹಳೆಯ ತಂಡ ಮುಂಬೈ ಇಂಡಿಯನ್ಸ್‌ಗೆ ಸೇರಲು ಸಿದ್ಧರಾಗಿದ್ದಾರೆ ಎಂದು ಹೇಳಲಾಗಿದೆ.
1 / 7
ಐಸಿಸಿ ಏಕದಿನ ವಿಶ್ವಕಪ್ ಮುಗಿದ ಬೆನ್ನಲ್ಲೇ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಆಡುತ್ತಿದೆ. ಇದರ ನಡುವೆ ಇಂಡಿಯನ್ ಪ್ರೀಮಿಯರ್ ಲೀಗ್ 2024 ಕುರಿತು ಬಹುದೊಡ್ಡ ಸುದ್ದಿ ಹೊರಬಿದ್ದಿದೆ. ಭಾರತೀಯ ಅಭಿಮಾನಿಗಳಿಗೆ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಆಘಾತಕಾರಿ ಟ್ರೇಡ್ ನಡೆಯುತ್ತಿದೆ.
2 / 7
ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಕೇವಲ 2 ಸೀಸನ್‌ಗಳ ನಂತರ ತಂಡವನ್ನು ತೊರೆಯಲು ನಿರ್ಧರಿಸಿದ್ದಾರೆ. ಜಿಟಿ ಬಿಟ್ಟು ಪಾಂಡ್ಯ ಅವರು ಮತ್ತೆ ತಮ್ಮ ಹಳೆಯ ತಂಡ ಮುಂಬೈ ಇಂಡಿಯನ್ಸ್‌ಗೆ ಸೇರಲು ಸಿದ್ಧರಾಗಿದ್ದಾರೆ ಎಂದು ಹೇಳಲಾಗಿದೆ. ಇದು ಕ್ರಿಕೆಟ್ ವಲಯದಲ್ಲಿ ದೊಡ್ಡ ಸದ್ದು ಮಾಡುತ್ತಿದೆ.
3 / 7
ಐಪಿಎಲ್ 2024 ಕ್ಕೆ ಮುಂದಿನ ತಿಂಗಳು ಮಿನಿ ಹರಾಜು ನಡೆಯಲಿದೆ, ಆದರೆ ಇದಕ್ಕೂ ಮೊದಲು, ಪ್ರತಿ ಬಾರಿಯಂತೆ, ಎಲ್ಲಾ 10 ಫ್ರಾಂಚೈಸಿಗಳಿಗೆ ಟ್ರೇಡ್ ವಿಂಡೋ ತೆರೆದಿರುತ್ತದೆ, ಇದರಲ್ಲಿ ಫ್ರಾಂಚೈಸಿ ಪರಸ್ಪರ ಆಟಗಾರರನ್ನು ವಿನಿಮಯ ಮಾಡಿಕೊಳ್ಳಬಹುದು. ಟ್ರೇಡ್ ವಿಂಡೋ ನವೆಂಬರ್ 26 ರಂದು ಕೊನೆಗೊಳ್ಳುತ್ತದೆ.
4 / 7
ವರದಿಗಳ ಪ್ರಕಾರ, ಗುಜರಾತ್ ಟೈಟಾನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಕೇವಲ 2 ಋತುಗಳ ನಂತರ ಗುಜರಾತ್ ಟೈಟಾನ್ಸ್ ಜೊತೆಗಿನ ಸಂಬಂಧವನ್ನು ಮುರಿಯಲು ನಿರ್ಧರಿಸಿದ್ದಾರೆ. ಹಾರ್ದಿಕ್ ಮತ್ತೊಮ್ಮೆ ಮುಂಬೈ ಇಂಡಿಯನ್ಸ್‌ಗೆ ಮರಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಹಾರ್ದಿಕ್ ಅವರ ಐಪಿಎಲ್ ವೃತ್ತಿಜೀವನವು 2014-15ರಲ್ಲಿ ಮುಂಬೈ ಫ್ರಾಂಚೈಸ್‌ನೊಂದಿಗೆ ಪ್ರಾರಂಭವಾಯಿತು.
5 / 7
ಆದರೆ, ಎರಡು ಯಶಸ್ವಿ ಸೀಸನ್‌ಗಳ ನಂತರ ಹಾರ್ದಿಕ್ ಗುಜರಾತ್ ತೊರೆಯಲು ಕಾರಣ ಏನು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಟೈಮ್ಸ್ ಆಫ್ ಇಂಡಿಯಾ ಬಿಸಿಸಿಐ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ, ಹಾರ್ದಿಕ್ ಮತ್ತು ಟೀಮ್ ಮ್ಯಾನೇಜ್‌ಮೆಂಟ್ ನಡುವೆ ಕೆಲಕಾಲಗಳಿಂದ ಭಿನ್ನಾಭಿಪ್ರಾಯವಿತ್ತು, ಹೀಗಾಗಿ ಹಾರ್ದಿಕ್ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.
6 / 7
ಇದರ ನಡುವೆ ಗುಜರಾತ್ ಕೋಚ್ ಆಶೀಶ್ ನೆಹ್ರಾ ಮತ್ತು ಹಾರ್ದಿಕ್ ನಡುವಿನ ಸಂಬಂಧದಲ್ಲಿ ಬಿರುಕು ಉಂಟಾಗಿದೆಯೇ ಅಥವಾ ಫ್ರಾಂಚೈಸಿ ಜೊತೆಗಿನ ಸಂಬಂಧ ಹದಗೆಟ್ಟಿದೆಯೇ ಎಂಬುದು ಸ್ಪಷ್ಟವಾಗಿಲ್ಲ?. ಐಪಿಎಲ್ 2023ರ ಸೀಸನ್‌ನಲ್ಲಿಯೇ ಎಲ್ಲವೂ ಸರಿ ಇರಲಿಲ್ಲ, ಕಳೆದ 4 ತಿಂಗಳಲ್ಲಿ ಮುಂಬೈ ಜತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು ಎಂದು ಹೇಳಲಾಗಿದೆ.
7 / 7
ಹಾರ್ದಿಕ್ 2021 ರ ಋತುವಿನವರೆಗೆ ಮುಂಬೈನ ಭಾಗವಾಗಿದ್ದರು. ಆದರೆ 2022 ರ ಋತುವಿನ ಮೊದಲು 2 ಹೊಸ ತಂಡಗಳ ಪೈಕಿ ಗುಜರಾತ್ ಟೈಟಾನ್ಸ್ಗೆ ನಾಯಕನಾಗಿ ಆಯ್ಕೆ ಆದರು. ಹಾರ್ದಿಕ್ ನಾಯಕತ್ವದಲ್ಲಿ ಗುಜರಾತ್ ಮೊದಲ ಸೀಸನ್‌ನಲ್ಲಿಯೇ ಚಾಂಪಿಯನ್ ಆಗಿ ಹೊರಹೊಮ್ಮಿತು. 2023 ರ ಋತುವಿನಲ್ಲಿ, ಫೈನಲ್‌ಗೆ ತಲುಪಿತ್ತು ಆದರೆ, ಇಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋತಿತು.