ಹಾರ್ದಿಕ್ ಪಾಂಡ್ಯ ಧರಿಸಿದ್ದ ವಾಚ್ ಬೆಲೆ ಇಡೀ ಪಾಕ್ ತಂಡದ ವಾರ್ಷಿಕ ವೇತನಕ್ಕಿಂತ ಹೆಚ್ಚು..!

Updated on: Sep 07, 2025 | 5:09 PM

Hardik Pandya watch: ಏಷ್ಯಾಕಪ್‌ ಅಭ್ಯಾಸದ ವೇಳೆ ಟೀಂ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯ ಧರಿಸಿದ್ದ ವಾಚ್ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಸೃಷ್ಟಿಸಿದೆ. ವಾಸ್ತವವಾಗಿ ಹಾರ್ದಿಕ್ ರಿಚರ್ಡ್ ಮಿಲ್ಲೆ RM 27-04 ವಾಚ್ ಧರಿಸಿದ್ದು ಅದರ ಬೆಲೆ 20 ಕೋಟಿ ರೂಪಾಯಿ ಎಂದು ವರದಿಯಾಗಿದೆ. ಇದು ಆಶ್ಚರ್ಯಕರವಾಗಿ, ಏಷ್ಯಾಕಪ್‌ಗೆ ಆಯ್ಕೆಯಾದ 17 ಪಾಕಿಸ್ತಾನಿ ಆಟಗಾರರ ಸಂಯುಕ್ತ ವಾರ್ಷಿಕ ವೇತನ (19.34 ಕೋಟಿ ರೂಪಾಯಿ) ಗಿಂತ ಹೆಚ್ಚು.

1 / 6
ಸೆಪ್ಟೆಂಬರ್ 9 ರಿಂದ ಏಷ್ಯಾಕಪ್ ಆರಂಭವಾಗುತ್ತಿದೆ. ಈ ಪಂದ್ಯಾವಳಿಗಾಗಿ ಟೀಂ ಇಂಡಿಯಾ ಈಗಾಗಲೇ ದುಬೈನಲ್ಲಿ  ಅಭ್ಯಾಸ ಆರಂಭಿಸಿದೆ. ಈ ಅಭ್ಯಾಸದ ಸಮಯದಲ್ಲಿ ಟೀಂ ಇಂಡಿಯಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಧರಿಸಿದ್ದ ಕೈಗಡಿಯಾರ ಚರ್ಚೆಯ ವಿಷಯವಾಗಿದೆ. ಪಾಂಡ್ಯ ಅವರ ವಾಚ್ ಸುದ್ದಿಯಲ್ಲಿರಲು ದೊಡ್ಡ ಕಾರಣವೆಂದರೆ ಅದರ ಬೆಲೆ.

2 / 6
ಹಾರ್ದಿಕ್ ಧರಿಸಿದ ವಾಚ್ ಬೆಲೆ ಎಷ್ಟು ದುಬಾರಿಯೆಂದರೆ, ಏಷ್ಯಾಕಪ್‌ಗೆ ಆಯ್ಕೆಯಾದ 17 ಪಾಕಿಸ್ತಾನಿ ಆಟಗಾರರ ವಾರ್ಷಿಕ ವೇತನವನ್ನು ಸೇರಿಸಿದರೂ ಅದು ಇನ್ನೂ ಕಡಿಮೆಯಾಗುತ್ತದೆ. ವಾಸ್ತವವಾಗಿ ಅಭ್ಯಾಸದ ಸಮಯದಲ್ಲಿ, ಹಾರ್ದಿಕ್ ಪಾಂಡ್ಯ ರಿಚರ್ಡ್ ಮಿಲ್ಲೆ RM 27-04 ಕೈಗಡಿಯಾರವನ್ನು ಧರಿಸಿದ್ದರು. ವರದಿಯ ಪ್ರಕಾರ ಅದರ ಮಾರುಕಟ್ಟೆ ಬೆಲೆ 20 ಕೋಟಿ ರೂ. ಹಾಗಿದ್ದರೆ ಏಷ್ಯಾಕಪ್​ಗೆ ಆಯ್ಕೆಯಾಗಿರುವ ಪಾಕಿಸ್ತಾನದ 17 ಆಟಗಾರರ ವೇತನ ಎಷ್ಟು ಎಂಬುದನ್ನು ನೋಡುವುದಾದರೆ..

3 / 6
ಏಷ್ಯಾಕಪ್‌ಗಾಗಿ ಪಾಕಿಸ್ತಾನ ಆಯ್ಕೆ ಮಾಡಿದ 17 ಆಟಗಾರರಲ್ಲಿ 7 ಮಂದಿ ಬಿ ಗ್ರೇಡ್‌ನಲ್ಲಿದ್ದಾರೆ. ಈ ಪಟ್ಟಿಯಲ್ಲಿ ಅಬ್ರಾರ್ ಅಹ್ಮದ್, ಫಖರ್ ಜಮಾನ್, ಹ್ಯಾರಿಸ್ ರೌಫ್, ಹಸನ್ ಅಲಿ, ಸ್ಯಾಮ್ ಅಯೂಬ್, ಸಲ್ಮಾನ್ ಅಘಾ ಮತ್ತು ಶಾಹೀನ್ ಅಫ್ರಿದಿ ಅವರ ಹೆಸರುಗಳಿವೆ. ಅವರಲ್ಲಿ ಪ್ರತಿಯೊಬ್ಬರ ವಾರ್ಷಿಕ ವೇತನ ಭಾರತೀಯ ಕರೆನ್ಸಿಯಲ್ಲಿ 1 ಕೋಟಿ 69 ಲಕ್ಷ 2 ಸಾವಿರ 540 ರೂ. ಈಗ ಈ ಅರ್ಥದಲ್ಲಿ, ಏಳು ಆಟಗಾರರ ಒಟ್ಟು ವಾರ್ಷಿಕ ವೇತನ 11 ಕೋಟಿ 83 ಲಕ್ಷ 17 ಸಾವಿರ ಏಳುನೂರ ಎಂಬತ್ತು ರೂ.

4 / 6
ಹಾಗೆಯೇ ಪಾಕಿಸ್ತಾನ ತಂಡದಲ್ಲಿರುವ 5 ಆಟಗಾರರು ಸಿ ದರ್ಜೆಗೆ ಸೇರಿದ್ದಾರೆ, ಅವರಲ್ಲಿ ಫಹೀಮ್ ಅಶ್ರಫ್, ಹಸನ್ ನವಾಜ್, ಮೊಹಮ್ಮದ್ ಹ್ಯಾರಿಸ್, ಮೊಹಮ್ಮದ್ ನವಾಜ್ ಮತ್ತು ಶಾಹಿಬ್ಜಾದಾ ಫರ್ಹಾನ್ ಸೇರಿದ್ದಾರೆ. ಅವರಲ್ಲಿ ಪ್ರತಿಯೊಬ್ಬರ ವಾರ್ಷಿಕ ವೇತನ ಭಾರತೀಯ ಕರೆನ್ಸಿಯಲ್ಲಿ 93 ಲಕ್ಷ, 90 ಸಾವಿರ, 300 ರೂ. ಅಂದರೆ ಈ ಐದು ಆಟಗಾರರ ಒಟ್ಟು ಮೊತ್ತ 4 ಕೋಟಿ, 69 ಲಕ್ಷ, 51 ಸಾವಿರ, 500 ರೂ.

5 / 6
ಅದೇ ರೀತಿ, ಉಳಿದ 5 ಆಟಗಾರರು ಡಿ ಗ್ರೇಡ್‌ಗೆ ಸೇರಿದ್ದು, ಅವರು ಭಾರತೀಯ ಕರೆನ್ಸಿಯಲ್ಲಿ ವಾರ್ಷಿಕವಾಗಿ 56 ಲಕ್ಷ, 34 ಸಾವಿರ, 180 ರೂ. ಪಡೆಯುತ್ತಾರೆ. ಈ ಐದು ಆಟಗಾರರ ಒಟ್ಟು ವಾರ್ಷಿಕ ವೇತನ 2 ಕೋಟಿ, 81 ಲಕ್ಷ, 70 ಸಾವಿರ, 900 ರೂ.

6 / 6
ಈಗ ಏಷ್ಯಾಕಪ್‌ಗೆ ಆಯ್ಕೆಯಾದ ಎಲ್ಲಾ 17 ಪಾಕಿಸ್ತಾನಿ ಆಟಗಾರರ ವಾರ್ಷಿಕ ವೇತನವನ್ನು ಸೇರಿಸಿದರೆ, ಆ ಮೊತ್ತವು ಭಾರತೀಯ ಕರೆನ್ಸಿಯಲ್ಲಿ 19.34 ಕೋಟಿ ರೂ. ಆಗುತ್ತದೆ. ಈ ಮೊತ್ತವು ಹಾರ್ದಿಕ್ ಪಾಂಡ್ಯ ಅವರ ಕೈಗಡಿಯಾರದ ಬೆಲೆಗಿಂತ ಕಡಿಮೆ ಇದೆ. ಮೇಲೆ ಹೇಳಿದಂತೆ ಹಾರ್ದಿಕ್ ಅವರ ವಾಚ್​ನ ಮಾರುಕಟ್ಟೆ ಬೆಲೆ 20 ಕೋಟಿ ರೂ. ಆಗಿದೆ.