ಟಿ20 ನಾಯಕತ್ವದಿಂದ ಸೂರ್ಯನಿಗೆ ಕೋಕ್? ಅನುಮಾನ ಮೂಡಿಸಿದ ಅನುಭವಿಯ ಹೇಳಿಕೆ
Team India: ಹರ್ಷ ಭೋಗ್ಲೆ ಪ್ರಕಾರ ಹಾರ್ದಿಕ್ ಪಾಂಡ್ಯ ಮತ್ತೊಮ್ಮೆ ಭಾರತ ಟಿ20 ತಂಡದ ನಾಯಕರಾಗಬಹುದು. ಇದರ ಹಿಂದಿನ ಕಾರಣವನ್ನೂ ಅವರು ನೀಡಿದ್ದು, ಹರ್ಷ ಭೋಗ್ಲೆ ಪ್ರಕಾರ, ಮ್ಯಾನೇಜ್‌ಮೆಂಟ್ ಪಾಂಡ್ಯ ಅವರನ್ನು ಎಲ್ಲಾ ವೈಟ್-ಬಾಲ್ ಪಂದ್ಯಗಳನ್ನು ಆಡುವಂತೆ ಸೂಚಿಸಿರುವುದರಿಂದ ಪಾಂಡ್ಯಗೆ ಮತ್ತೆ ನಾಯಕತ್ವ ಸಿಗಬಹುದು ಎಂದಿದ್ದಾರೆ.
1 / 7
2024ರ ಟಿ20 ವಿಶ್ವಕಪ್ ಗೆಲುವಿನ ನಂತರ ಭಾರತ ಟಿ20 ತಂಡದಲ್ಲಿ ಹಲವು ಬದಲಾವಣೆಗಳಾಗಿವೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟಿ20ಯಿಂದ ನಿವೃತ್ತಿ ಘೋಷಿಸಿದರೆ, ಗೌತಮ್ ಗಂಭೀರ್ ಮುಖ್ಯ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಇದೆಲ್ಲದರ ಜೊತೆಗೆ ದೊಡ್ಡ ಬದಲಾವಣೆ ಎಂದರೆ ಸೂರ್ಯಕುಮಾರ್ ಯಾದವ್ ಅವರನ್ನು ಟಿ20 ತಂಡದ ನಾಯಕನನ್ನಾಗಿ ನೇಮಿಸಿರುವುದು.
2 / 7
ಶ್ರೀಲಂಕಾ ಸರಣಿಗೂ ಮುನ್ನ ಸೂರ್ಯಕುಮಾರ್ ಯಾದವ್ ಅವರನ್ನು ಟಿ20 ತಂಡದ ನಾಯಕನನ್ನಾಗಿ ನೇಮಿಸಲಾಗಿದೆ. ವಾಸ್ತವವಾಗಿ ಟಿ20 ವಿಶ್ವಕಪ್ ಬಳಿಕ ಹಾರ್ದಿಕ್ ಪಾಂಡ್ಯ ಅವರನ್ನು ಟಿ20 ತಂಡದ ನಾಯಕನ ಸ್ಥಾನಕ್ಕೆ ದೊಡ್ಡ ಸ್ಪರ್ಧಿಯಾಗಿ ಪರಿಗಣಿಸಲಾಗಿತ್ತು. ಆದರೆ ವಿಭಿನ್ನ ಯೋಜನೆ ನಿರ್ಮಿಸಿದ ಬಿಸಿಸಿಐ ಸೂರ್ಯನಿಗೆ ನಾಯಕನ ಪಟ್ಟ ಕಟ್ಟಲಾಯಿತು.
3 / 7
ವರದಿಯ ಪ್ರಕಾರ, ಟಿ20 ತಂಡದ ಖಾಯಂ ನಾಯಕನಾಗಿ ಸೂರ್ಯಕುಮಾರ್ ಯಾದವ್ ಅವರೇ ಮುಂದುವರೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಇದೆಲ್ಲದರ ನಡುವೆ ವಿಮರ್ಶಕ ಹರ್ಷಾ ಭೋಗ್ಲೆ ಸ್ಫೋಟಕ ಹೇಳಿಕೆ ನೀಡಿದ್ದು, ಹಾರ್ದಿಕ್ ಪಾಂಡ್ಯ ಮತ್ತೆ ಟಿ20 ತಂಡದ ನಾಯಕನನ್ನಾಗಿ ಮಾಡಬಹುದು ಎಂದಿದ್ದಾರೆ.
4 / 7
ಹರ್ಷ ಭೋಗ್ಲೆ ಪ್ರಕಾರ ಹಾರ್ದಿಕ್ ಪಾಂಡ್ಯ ಮತ್ತೊಮ್ಮೆ ಭಾರತ ಟಿ20 ತಂಡದ ನಾಯಕರಾಗಬಹುದು. ಇದರ ಹಿಂದಿನ ಕಾರಣವನ್ನೂ ಅವರು ನೀಡಿದ್ದು, ಹರ್ಷ ಭೋಗ್ಲೆ ಪ್ರಕಾರ, ಮ್ಯಾನೇಜ್‌ಮೆಂಟ್ ಪಾಂಡ್ಯ ಅವರನ್ನು ಎಲ್ಲಾ ವೈಟ್-ಬಾಲ್ ಪಂದ್ಯಗಳನ್ನು ಆಡುವಂತೆ ಸೂಚಿಸಿರುವುದರಿಂದ ಪಾಂಡ್ಯಗೆ ಮತ್ತೆ ನಾಯಕತ್ವ ಸಿಗಬಹುದು ಎಂದಿದ್ದಾರೆ.
5 / 7
ಮುಂದುವರೆದು ಮಾತನಾಡಿರುವ ಅವರು, ಆಡಳಿತ ಮಂಡಳಿಯು ಸೂರ್ಯಕುಮಾರ್ ಯಾದವ್ಗೆ ಪರೀಕ್ಷಾರ್ಥವಾಗಿ ಟಿ20 ತಂಡದ ನಾಯಕತ್ವ ನೀಡಿದೆ. ಒಮ್ಮೆ ಹಾರ್ದಿಕ್ ಪಾಂಡ್ಯ ಸೀಮಿತ ಓವರ್‌ಗಳಲ್ಲಿ ತನ್ನ ಫಿಟ್ನೇಸ್ ಸಾಭೀತು ಪಡಿಸಿದರೆ, ಅವರಿಗೆ ಸೀಮಿತ ಓವರ್ಗಳ ನಾಯಕತ್ವ ನೀಡುವುದು ಖಚಿತ ಎಂದಿದ್ದಾರೆ.
6 / 7
ಹರ್ಷ ಭೋಗ್ಲೆ ಅವರ ಹೇಳಿಕೆ ಎಷ್ಟು ಪರಿಣಾಮಕಾರಿಯಾಗಿದೆ ಎಂಬುದನ್ನು ಕಾದುನೋಡಬೇಕಿದೆ. ಏಕೆಂದರೆ ಲಂಕಾ ಪ್ರವಾಸಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಸೂರ್ಯನಿಗೆ ನಾಯಕತ್ವ ನೀಡುವುದರ ಬಗ್ಗೆ ಮಾತನಾಡಿದ್ದ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್, ಟಿ20 ನಾಯಕತ್ವಕ್ಕೆ ಸೂರ್ಯಕುಮಾರ್ ಯಾದವ್ ಉತ್ತಮ ಆಯ್ಕೆ. ಅವರು ತಮ್ಮ ಪ್ರತಿಭೆಯನ್ನು ಈಗಾಗಲೇ ತೋರಿಸಿದ್ದಾರೆ ಎಂದಿದ್ದರು.
7 / 7
ಅದೇ ಸಮಯದಲ್ಲಿ ಹಾರ್ದಿಕ್ ಬಗ್ಗೆ ಯೂ ಹೇಳಿಕೆ ನೀಡಿದ್ದ ಅಗರ್ಕರ್, ಹಾರ್ದಿಕ್ ಕೂಡ ನಮಗೆ ಪ್ರಮುಖ ಆಟಗಾರ. ಅವರಂತಹ ಪ್ರತಿಭೆ ಸಿಗುವುದು ಕಷ್ಟ. ಆದರೆ ಕಳೆದ 2 ವರ್ಷಗಳಲ್ಲಿ ಅವರ ಫಿಟ್ನೆಸ್ ದೊಡ್ಡ ಸವಾಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ನಾಯಕನಾಗಿ ಯಾವಾಗಲೂ ಲಭ್ಯವಿರುವ ಮತ್ತು ತನ್ನ ಪಾತ್ರವನ್ನು ಉತ್ತಮವಾಗಿ ನಿರ್ವಹಿಸಬಲ್ಲ ಆಟಗಾರನನ್ನು ನಾವು ನಾಯಕನ ಸ್ಥಾನಕ್ಕೆ ಬಯಸಿದ್ದೇವೆ. ಸೂರ್ಯನಿಗೆ ಆ ಎಲ್ಲಾ ಗುಣಗಳಿವೆ ಎಂದಿದ್ದರು.