AFG vs PAK, ICC World Cup: ವಿಶ್ವಕಪ್ ಸೆಮಿ ಫೈನಲ್ ರೇಸ್ನಲ್ಲಿ ಅಫ್ಘಾನಿಸ್ತಾನ ತಂಡ: ಇನ್ನೆಷ್ಟು ಪಂದ್ಯ ಗೆಲ್ಲಬೇಕು?
Afghanistan Semi Final Chance in ICC ODI World Cup 2023: ಅಫ್ಘಾನಿಸ್ತಾನ ಕ್ರಿಕೆಟ್ ತಂಡವು ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಅಚ್ಚರಿ ಮೂಡಿಸುತ್ತಿದೆ. ಇದೇರೀತಿಯ ಪ್ರದರ್ಶನವನ್ನು ಅಫ್ಘಾನ್ ಮುಂದುವರೆಸಿದರೆ ಈ ಬಾರಿ ಸೆಮಿಫೈನಲ್ ತಲುಪುವ ಅವಕಾಶ ಕೂಡ ಹೊಂದಿದೆ. ಅಫ್ಘಾನಿಸ್ತಾನ ತಂಡ ಇದುವರೆಗೆ ಐದು ಪಂದ್ಯಗಳನ್ನು ಆಡಿದ್ದು, 2ರಲ್ಲಿ ಗೆದ್ದು 3ರಲ್ಲಿ ಸೋತಿದೆ. ಪಾಯಿಂಟ್ಸ್ ಪಟ್ಟಿಯಲ್ಲಿ ಅಫ್ಘಾನಿಸ್ತಾನ 4 ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದೆ.
1 / 6
ಚೆನ್ನೈನ ಎಮ್‌ಎ ಚಿದಂಬರಂ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಾಕಿಸ್ತಾನ ವಿರುದ್ಧದ 2023 ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ಐತಿಹಾಸಕ ಗೆಲುವು ಕಂಡಿತು. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಾಬರ್ ಪಡೆ ವಿರುದ್ಧ ಅಫ್ಘಾನಿಸ್ತಾನ ಜಯ ಸಾಧಿಸಿತು.
2 / 6
ಅಫ್ಘಾನಿಸ್ತಾನ ಕ್ರಿಕೆಟ್ ತಂಡವು ಈ ವಿಶ್ವಕಪ್‌ನಲ್ಲಿ ಅಚ್ಚರಿ ಮೂಡಿಸುತ್ತಿದೆ. ಇದೇರೀತಿಯ ಪ್ರದರ್ಶನವನ್ನು ಅಫ್ಘಾನ್ ಮುಂದುವರೆಸಿದರೆ ಈ ಬಾರಿ ಸೆಮಿಫೈನಲ್ ತಲುಪುವ ಅವಕಾಶ ಕೂಡ ಹೊಂದಿದ್ದಾರೆ. ಈ ಬಾರಿಯ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ತಂಡ ಮೊದಲು ಹಾಲಿ ಚಾಂಪಿಯನ್ ಇಂಗ್ಲೆಂಡ್ಗೆ ಸೋಲುಣಿಸಿ ಅಚ್ಚರಿ ಮೂಡಿಸಿದರೆ, ನಂತರ ಪಾಕಿಸ್ತಾನವನ್ನು ಸೋಲಿಸಿದೆ.
3 / 6
ಈ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ತಂಡ ಇದುವರೆಗೆ ಐದು ಪಂದ್ಯಗಳನ್ನು ಆಡಿದ್ದು, 2ರಲ್ಲಿ ಗೆದ್ದು 3ರಲ್ಲಿ ಸೋತಿದೆ. ಪಾಯಿಂಟ್ಸ್ ಪಟ್ಟಿಯಲ್ಲಿ ಅಫ್ಘಾನಿಸ್ತಾನ 4 ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದೆ. ಪ್ರಸ್ತುತ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ತಂಡಗಳು 4-4 ಅಂಕಗಳೊಂದಿಗೆ ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿವೆ. ಅಫ್ಘಾನಿಸ್ತಾನ ತಂಡವು ಮುಂದಿನ ನಾಲ್ಕು ಪಂದ್ಯಗಳನ್ನು ಕ್ರಮವಾಗಿ ಶ್ರೀಲಂಕಾ, ನೆದರ್ಲೆಂಡ್ಸ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಆಡಬೇಕಾಗಿದೆ.
4 / 6
ಅಫ್ಘಾನಿಸ್ತಾನ ಉಳಿದಿರುವ ಎಲ್ಲಾ ನಾಲ್ಕು ಪಂದ್ಯಗಳನ್ನು ಗೆದ್ದರೆ, 12 ಅಂಕಗಳನ್ನು ಸಂಪಾದಿಸುತ್ತಾರೆ. ಆ 12 ಅಂಕಗಳೊಂದಿಗೆ, ಅಫ್ಘಾನ್ ತಂಡವು ಸೆಮಿಫೈನಲ್ ತಲುಪಬಹುದು. ಇಂಗ್ಲೆಂಡ್ ಮತ್ತು ಪಾಕಿಸ್ತಾನವನ್ನು ಸೋಲಿಸಿದ ನಂತರ, ಅಫ್ಘಾನಿಸ್ತಾನ ತಂಡಕ್ಕೆ ಶ್ರೀಲಂಕಾ ಮತ್ತು ನೆದರ್ಲೆಂಡ್ಸ್ ದೊಡ್ಡ ಸವಾಲು ಅಲ್ಲ ಎನ್ನಬಹುದು. ಇದಲ್ಲದೆ ಆಸ್ಟ್ರೇಲಿಯ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಕಠಿಣ ಪೈಪೋಟಿ ಎದುರಿಸಲಿದ್ದರೂ ಅಫ್ಘಾನ್ ತಂಡ ಅವರನ್ನೂ ಸೋಲಿಸುವ ಸಾಮರ್ಥ್ಯ ಹೊಂದಿದೆ.
5 / 6
ಮತ್ತೊಂದೆಡೆ, ಆಸ್ಟ್ರೇಲಿಯಾ ತಂಡ ಇನ್ನೂ 5 ಪಂದ್ಯಗಳನ್ನು ಆಡಬೇಕಾಗಿದೆ. ಕಮ್ಮಿನ್ಸ್ ಪಡೆ ತನ್ನ ಮುಂದಿನ 4 ಪಂದ್ಯಗಳನ್ನು ಗೆದ್ದು, ಅಫ್ಘಾನಿಸ್ತಾನ ವಿರುದ್ಧ ಸೋತರೆ ಅಫ್ಘಾನ್ ಮತ್ತು ಆಸೀಸ್ ಎರಡೂ ತಂಡಗಳು ತಲಾ 12 ಅಂಕಗಳನ್ನು ಹೊಂದುತ್ತದೆ. ಹೀಗಾದಾಗ, ನೆಟ್ ರನ್ ರೇಟ್ ಆಧಾರದ ಮೇಲೆ ಸೆಮಿಫೈನಲ್‌ಗೆ ಯಾರು ಎಂಬುದು ನಿರ್ಧಾರವಾಗುತ್ತೆ.
6 / 6
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಪಾಕಿಸ್ತಾನ ತಂಡವು 4 ಅಂಕಗಳನ್ನು ಹೊಂದಿದೆ. ಇವರಿಗೆ 4 ಪಂದ್ಯಗಳು ಉಳಿದಿದೆ. ಆದ್ದರಿಂದ ಬಾಬರ್ ಪಡೆ ಕೂಡ 12 ಅಂಕಗಳನ್ನು ತಲುಪಬಹುದು. ಆದರೆ ಪಾಕಿಸ್ತಾನ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಂತಹ ಬಲಿಷ್ಠ ತಂಡಗಳನ್ನು ಸೋಲಿಸಬೇಕಿದೆ.
Published On - 10:04 am, Tue, 24 October 23