- TV9 Kannada Photo gallery Cricket photos How many runs does Joe Root need to break Sachin Tendulkar's world record?
ಸಚಿನ್ರ ವಿಶ್ವ ದಾಖಲೆ ಮುರಿಯಲು ರೂಟ್ ಇನ್ನೆಷ್ಟು ರನ್ ಕಲೆಹಾಕಬೇಕು?
Joe Root: ಟೆಸ್ಟ್ ಕ್ರಿಕೆಟ್ನಲ್ಲಿ ಜೋ ರೂಟ್ ಪ್ರಚಂಡ ಪ್ರದರ್ಶನ ಮುಂದುವರೆದಿದೆ. ಈ ಪ್ರದರ್ಶನದೊಂದಿಗೆ ರೂಟ್ ಸಚಿನ್ ತೆಂಡೂಲ್ಕರ್ ಅವರ ಐತಿಹಾಸಿಕ ದಾಖಲೆಯನ್ನು ಸರಿಗಟ್ಟಿದ್ದಾರೆ. ಅಂದರೆ ಟೆಸ್ಟ್ ಕ್ರಿಕೆಟ್ನಲ್ಲಿ 14 ಸಾವಿರ ರನ್ಗಳ ಗಡಿದಾಟಿದ ಏಕೈಕ ಬ್ಯಾಟ್ಸ್ಮನ್ ಆಗಿ ಸಚಿನ್ ತೆಂಡೂಲ್ಕರ್ ಗುರುತಿಸಿಕೊಂಡಿದ್ದರು. ಇದೀಗ ಈ ಪಟ್ಟಿಗೆ ಜೋ ರೂಟ್ ಎಂಟ್ರಿ ಕೊಟ್ಟಿದ್ದಾರೆ.
Updated on: Jun 23, 2026 | 1:47 PM

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿರುವ ಟೆಸ್ಟ್ ಕ್ರಿಕೆಟ್ನ ಸಾರ್ವಕಾಲಿಕ ದಾಖಲೆಯೊಂದು ಶೀಘ್ರದಲ್ಲೇ ಪತನಗೊಳ್ಳುವ ಮುನ್ಸೂಚನೆ ಸಿಗುತ್ತಿದೆ. ಇಂಗ್ಲೆಂಡ್ ತಂಡದ ಅನುಭವಿ ಬ್ಯಾಟರ್ ಜೋ ರೂಟ್, ಸಚಿನ್ ಅವರ 'ಅತಿ ಹೆಚ್ಚು ಟೆಸ್ಟ್ ರನ್'ಗಳ ಬೃಹತ್ ವಿಶ್ವ ದಾಖಲೆಯನ್ನು ಅಳಿಸಿ ಹಾಕುವತ್ತ ಹೆಜ್ಜೆಯನ್ನಿಟ್ಟಿದ್ದಾರೆ. (PC: Gettyimages)

ಜೋ ರೂಟ್ ಇನ್ನೆರಡು ವರ್ಷಗಳಲ್ಲಿ 14 ಟೆಸ್ಟ್ ಪಂದ್ಯಗಳನ್ನಾಡಲಿದ್ದಾರೆ. ಈ ಹದಿನಾಲ್ಕು ಟೆಸ್ಟ್ ಮ್ಯಾಚ್ಗಳ ಮೂಲಕ ಒಟ್ಟು 28 ಇನಿಂಗ್ಸ್ ಆಡಲು ಅವಕಾಶ ದೊರೆಯಬಹುದು. ಈ ಇಪ್ಪತ್ತೆಂಟು ಇನಿಂಗ್ಸ್ಗಳ ಮೂಲಕ ರೂಟ್ ಕೇವಲ 1,847 ರನ್‌ಗಳಿಸಿದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ. ಅಂದರೆ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ. (PC: Gettyimages)

ಟೆಸ್ಟ್ ಕ್ರಿಕೆಟ್ನಲ್ಲಿ 200 ಪಂದ್ಯಗಳಲ್ಲಿ 329 ಇನಿಂಗ್ಸ್ ಆಡಿರುವ ಸಚಿನ್ ತೆಂಡೂಲ್ಕರ್ ಒಟ್ಟು 15921 ರನ್ ಕಲೆಹಾಕಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದೀಗ ಈ ಪಟ್ಟಿಯಲ್ಲಿ ಜೋ ರೂಟ್ ದ್ವಿತೀಯ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. (PC: Gettyimages)

ಟೆಸ್ಟ್ ಕ್ರಿಕೆಟ್ನಲ್ಲಿ ಈವರೆಗೆ 165 ಪಂದ್ಯಗಳ 302 ಇನ್ನಿಂಗ್ಸ್ ಆಡಿರುವ ಜೋ ರೂಟ್ ಒಟ್ಟು 14,075 ರನ್ ಕಲೆಹಾಕಿದ್ದಾರೆ. ಈ ಮೂಲಕ ಸಚಿನ್ ತೆಂಡೂಲ್ಕರ್ ಬಳಿಕ ಟೆಸ್ಟ್ ಕ್ರಿಕೆಟ್ನಲ್ಲಿ 14 ಸಾವಿರ ರನ್ ಕಲೆಹಾಕಿದ ಏಕೈಕ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇನ್ನು ಮುಂದಿನ 14 ಟೆಸ್ಟ್ ಪಂದ್ಯಗಳ ಮೂಲಕ ಈ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ರೂಟ್ಗೆ ಉತ್ತಮ ಅವಕಾಶವಿದೆ. (PC: Gettyimages)

ಅಂದರೆ 14 ಟೆಸ್ಟ್ ಪಂದ್ಯಗಳ 28 ಇನಿಂಗ್ಸ್ಗಳ ಲೆಕ್ಕಾಚಾರ ತೆಗೆದುಕೊಂಡರೆ ಜೋ ರೂಟ್ 65 ರ ಸರಾಸರಿಯಲ್ಲಿ ರನ್ ಕಲೆಹಾಕಿದರೆ ಅಗ್ರಸ್ಥಾನಕ್ಕೇರಬಹುದು. ಒಂದು ವೇಳೆ ಜೋ ರೂಟ್ 2028 ರಲ್ಲೂ ಟೆಸ್ಟ್ ಕ್ರಿಕೆಟ್ನಲ್ಲಿ ಮುಂದುವರೆದರೆ ಸುಲಭವಾಗಿ ಸಚಿನ್ ತೆಂಡೂಲ್ಕರ್ ಅವರ ಬೃಹತ್ ರನ್ಗಳನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರುವುದನ್ನು ಎದುರು ನೋಡಬಹುದು. (PC: Gettyimages)




