ನನಗೆ RCB ಪರ ಆಡೋದು ಇಷ್ಟವಿರಲಿಲ್ಲ, ಬೆದರಿಸಿ ಆಡ್ಸಿದ್ರು: ಪ್ರವೀಣ್ ಕುಮಾರ್ ಗಂಭೀರ ಆರೋಪ
TV9 Web | Updated By: ಝಾಹಿರ್ ಯೂಸುಫ್
Updated on:
Jan 09, 2024 | 12:20 PM
Praveen Kumar RCB: 2008 ರಿಂದ 2010 ರವರೆಗೆ ಆರ್ಸಿಬಿ ಪರ 3 ಸೀಸನ್ಗಳಲ್ಲಿ ಕಾಣಿಸಿಕೊಂಡಿದ್ದ ಪ್ರವೀಣ್ ಕುಮಾರ್ 47 ಪಂದ್ಯಗಳನ್ನಾಡಿದ್ದರು. ಈ ವೇಳೆ 41 ವಿಕೆಟ್ಗಳನ್ನು ಕಬಳಿಸಿದ್ದರು. ಅಷ್ಟೇ ಅಲ್ಲದೆ 2010 ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಕಬಳಿಸಿ ಆರ್ಸಿಬಿ ಪರ ಈ ಸಾಧನೆ ಮಾಡಿದ ಮೊದಲ ಬೌಲರ್ ಎನಿಸಿಕೊಂಡಿದ್ದರು.
1 / 7
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ನಾನು ಯಾವತ್ತೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಪರ ಆಡಲು ಬಯಸಿರಲಿಲ್ಲ. ಆದರೆ ನನ್ನ ವೃತ್ತಿಜೀವನವನ್ನು ಕೊನೆಗೊಳಿಸುವುದಾಗಿ ಬೆದರಿಕೆ ಹಾಕಿ ನನ್ನನ್ನು ಆರ್ಸಿಬಿ ಪರ ಆಡಿಸಿದ್ರು...ಇಂತಹದೊಂದು ಗಂಭೀರ ಆರೋಪ ಮಾಡಿರುವುದು ಮಾತ್ಯಾರೂ ಅಲ್ಲ, ಟೀಮ್ ಇಂಡಿಯಾದ ಮಾಜಿ ವೇಗಿ ಪ್ರವೀಣ್ ಕುಮಾರ್ (Praveen Kumar).
2 / 7
2008 ರ ಚೊಚ್ಚಲ ಐಪಿಎಲ್ನಲ್ಲಿ ಪ್ರವೀಣ್ ಕುಮಾರ್ ಆರ್ಸಿಬಿ ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ ಅಂದು ತಾನು ಬೆಂಗಳೂರು ತಂಡದ ಪರ ಕಣಕ್ಕಿಳಿಯಲು ಬಯಸಿರಲಿಲ್ಲ. ನನ್ನ ಮೊದಲ ಆಯ್ಕೆ ಡೆಲ್ಲಿ ಡೇರ್ ಡೆವಿಲ್ಸ್ (ಈಗಿನ ಡೆಲ್ಲಿ ಕ್ಯಾಪಿಟಲ್ಸ್) ತಂಡವಾಗಿತ್ತು. ಆದರೆ ನನಗೆ ಬೆದರಿಕೆಯೊಡ್ಡಿ ಆರ್ಸಿಬಿ ಪರ ಕಣಕ್ಕಿಳಿಯುವಂತೆ ಮಾಡಿದ್ದರು ಎಂದು ಪ್ರವೀಣ್ ಕುಮಾರ್ ಆರೋಪಿಸಿದ್ದಾರೆ.
3 / 7
ಹೀಗೆ ಬೆದರಿಕೆಯೊಡ್ಡಿ ಆರ್ಸಿಬಿ ಪರ ಆಡಿಸಿದ್ದು ಮತ್ಯಾರೂ ಅಲ್ಲ, ಇಂಡಿಯನ್ ಪ್ರೀಮಿಯರ್ ಲೀಗ್ನ ಅಂದಿನ ಅಧ್ಯಕ್ಷ ಲಲಿತ್ ಮೋದಿ ಎಂಬುದನ್ನು ಪ್ರವೀಣ್ ಕುಮಾರ್ ಬಹಿರಂಗಪಡಿಸಿದ್ದಾರೆ. ನಾನು ಆರ್ಸಿಬಿ ಪರ ಆಡದಿದ್ದರೆ ನನ್ನ ವೃತ್ತಿಜೀವನವನ್ನು ಕೊನೆಗೊಳಿಸುವುದಾಗಿ ಅಂದು ಲಲಿತ್ ಮೋದಿ ಬೆದರಿಸಿದ್ದರು. ಹೀಗಾಗಿ ನಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿಯಬೇಕಾಯಿತು ಎಂದು ತಿಳಿಸಿದ್ದಾರೆ.
4 / 7
ನಾನು ಆರ್ಸಿಬಿ ಪರ ಆಡಲು ಇಚ್ಛಿಸದಿರಲು ಮುಖ್ಯ ಕಾರಣ ಬೆಂಗಳೂರು ನನ್ನ ಸ್ಥಳದಿಂದ ಸಾಕಷ್ಟು ದೂರಲ್ಲಿತ್ತು. ಅಲ್ಲಿನ ಆಹಾರ ಕೂಡ ನನಗೆ ಇಷ್ಟವಾಗುತ್ತಿರಲಿಲ್ಲ. ಇದೇ ವೇಳೆ ದೆಹಲಿ ನನ್ನ ಊರಾದ ಮೀರತ್ಗೆ ತುಂಬಾ ಹತ್ತಿರದಲ್ಲಿತ್ತು. ಇದರಿಂದ ನನಗೆ ಮನೆಗೆ ಹೋಗಲು ಅನುಕೂಲವಾಗುತ್ತಿತ್ತು. ಹೀಗಾಗಿ ನಾನು ಆರ್ಸಿಬಿ ಪರ ಆಡುವುದಿಲ್ಲ ಎಂದು ತಿಳಿಸಿದ್ದೆ.
5 / 7
ಆದರೆ ವ್ಯಕ್ತಿಯೊಬ್ಬರು ಅವರು ನನ್ನಿಂದ ಪೇಪರ್ ಒಂದಕ್ಕೆ ಸಹಿ ಹಾಕಿಸಿಕೊಂಡಿದ್ದರು. ಇದು ಆರ್ಸಿಬಿ ಜೊತೆಗಿನ ಒಪ್ಪಂದ ಪತ್ರವೆಂದು ಸಹಿ ಹಾಕಿದ ಬಳಿಕವಷ್ಟೇ ನನಗೆ ತಿಳಿಯುತು. ಏಕೆಂದರೆ ನನಗೆ ಇಂಗ್ಲಿಷ್ ಓದಲು ಬರುತ್ತಿರಲಿಲ್ಲ. ಇದಾಗ್ಯೂ ನಾನು ಡೆಲ್ಲಿ ತಂಡದ ಪರ ಆಡುತ್ತೇನೆ ಎಂದು ತಿಳಿಸಿದ್ದೆ.
6 / 7
ಈ ವೇಳೆ ನನಗೆ ಕರೆ ಮಾಡಿದ್ದ ಐಪಿಎಲ್ನ ಅಂದಿನ ಅಧ್ಯಕ್ಷ ಲಲಿತ್ ಮೋದಿ, ಆರ್ಸಿಬಿ ಪರ ಆಡದಿದ್ದರೆ ನಿನ್ನ ವೃತ್ತಿಜೀವನನ್ನೇ ಕೊನೆಗೊಳಿಸುವುದಾಗಿ ಬೆದರಿಕೆ ಹಾಕಿದ್ದರು. ಹೀಗಾಗಿ ನಾನು ಆರ್ಸಿಬಿ ಪರ ಆಡಲೇಬೇಕಾಯಿತು ಎಂದು ಪ್ರವೀಣ್ ಕುಮಾರ್ ತಿಳಿಸಿದ್ದಾರೆ.
7 / 7
2008 ರಿಂದ 2010 ರವರೆಗೆ ಆರ್ಸಿಬಿ ಪರ 3 ಸೀಸನ್ಗಳಲ್ಲಿ ಕಾಣಿಸಿಕೊಂಡಿದ್ದ ಪ್ರವೀಣ್ ಕುಮಾರ್ 47 ಪಂದ್ಯಗಳನ್ನಾಡಿದ್ದರು. ಈ ವೇಳೆ 41 ವಿಕೆಟ್ಗಳನ್ನು ಕಬಳಿಸಿದ್ದರು. ಅಷ್ಟೇ ಅಲ್ಲದೆ 2010 ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಕಬಳಿಸಿ ಆರ್ಸಿಬಿ ಪರ ಈ ಸಾಧನೆ ಮಾಡಿದ ಮೊದಲ ಬೌಲರ್ ಎನಿಸಿಕೊಂಡಿದ್ದರು. ಇದೀಗ ಐಪಿಎಲ್ ಒಪ್ಪಂದ ಹಿಂದಿರುವ ಕರಾಳತೆಯನ್ನು ಬಿಚ್ಚಿಡುವ ಮೂಲಕ ಪ್ರವೀಣ್ ಕುಮಾರ್ ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದಾರೆ.