Updated on: Nov 23, 2022 | 10:40 PM
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ಗಾಗಿ ಎಲ್ಲಾ ತಂಡಗಳು ಭರದ ಸಿದ್ಧತೆಯಲ್ಲಿದೆ. ಈಗಾಗಲೇ 10 ತಂಡಗಳು ಕೆಲ ಆಟಗಾರರನ್ನು ಕೈ ಬಿಟ್ಟು, ಮಿನಿ ಹರಾಜಿಗಾಗಿ ಭರ್ಜರಿ ಪ್ಲ್ಯಾನ್ಗಳನ್ನು ರೂಪಿಸುತ್ತಿದೆ.
ವಿಶೇಷ ಎಂದರೆ ಹೀಗೆ ಬಿಡುಗಡೆ ಮಾಡಿದ ಆಟಗಾರರ ಪಟ್ಟಿಯಲ್ಲಿ ಸ್ಟಾರ್ ಆಟಗಾರರ ದಂಡೇ ಇದೆ. ಅದರಲ್ಲೂ ಲಕ್ನೋ ಸೂಪರ್ ಜೈಂಟ್ಸ್ ತಂಡವು ಕರ್ನಾಟಕದ ಆಟಗಾರ ಮನೀಷ್ ಪಾಂಡೆಯನ್ನು ತಂಡದಿಂದ ಕೈ ಬಿಟ್ಟಿದೆ. ಆದರೆ ಹೀಗೆ ರಿಲೀಸ್ ಮಾಡುವ ವೇಳೆ ತನ್ನ ಆಟಗಾರರೊಂದಿಗೆ ಚರ್ಚಿಸಲಾಗಿತ್ತು ಎಂದು ಲಕ್ನೋ ಫ್ರಾಂಚೈಸಿ ತಿಳಿಸಿತ್ತು.
ಆದರೀಗ ಅಂತಹ ಯಾವುದೇ ಮಾತುಕತೆ ನಡೆದಿರಲಿಲ್ಲ ಎಂಬುದನ್ನು ಮನೀಷ್ ಪಾಂಡೆ ಬಹಿರಂಗಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಪಾಂಡೆ, ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ತನ್ನನ್ನು ತಂಡದಿಂದ ಬಿಡುಗಡೆ ಮಾಡುವ ಬಗ್ಗೆ ಒಮ್ಮೆಯೂ ತಿಳಿಸಿರಲಿಲ್ಲ ಎಂದಿದ್ದಾರೆ.
ನನಗೆ ಈ ಬಗ್ಗೆ ಯಾವುದೇ ಕರೆ ಬಂದಿಲ್ಲ. ಫ್ರಾಂಚೈಸಿ ಪಟ್ಟಿ ಬಿಡುಗಡೆ ಮಾಡಿದಾಗಲೇ ನನಗೆ ಈ ವಿಷಯ ತಿಳಿಯಿತು. ಅವರು ನನ್ನನ್ನು ಬಿಡುಗಡೆ ಮಾಡಲು ಬಯಸಿದ್ದರು ಎಂದು ನಾನು ಅರ್ಥಮಾಡಿಕೊಂಡಿದ್ದೇನೆ ಎಂದು ಮನೀಷ್ ಪಾಂಡೆ ತಿ
ನನ್ನನ್ನು ಬಿಡುಗಡೆ ಮಾಡಿದ್ದರಿಂದ ಅವರಿಗೆ ಸ್ಪಲ್ಪ ಹಣ ಉಳಿದಿದೆ. ಆದರೆ ನಾನು ವಿಕೆಟ್ನಲ್ಲಿ (ಪಿಚ್) ಹೆಚ್ಚು ಸಮಯ ಕಳೆಯಲು ಬಯಸುವ ಆಟಗಾರ. ಒಮ್ಮೆ ನಾನು ಸೆಟ್ ಆದರೆ ದೊಡ್ಡ ಸ್ಕೋರ್‌ಗಳನ್ನು ಎದುರು ನೋಡುತ್ತೇನೆ ಎಂದು ಪಾಂಡೆ ತಿಳಿಸಿದರು.
2021 ರಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವು ಮನೀಷ್ ಪಾಂಡೆಯನ್ನು ಕೈಬಿಟ್ಟಿತ್ತು. ಹೀಗಾಗಿ ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪಾಂಡೆಯನ್ನು 4.6 ಕೋಟಿಗೆ ಖರೀದಿಸಿತ್ತು. ಆದರೆ 6 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಪಾಂಡೆ ಕಲೆಹಾಕಿದ್ದು ಕೇವಲ 88 ರನ್ ಮಾತ್ರ. ಹೀಗಾಗಿ ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ತಂಡವು ಮನೀಷ್ ಪಾಂಡೆಯನ್ನು ಒಂದೇ ವರ್ಷದೊಳಗೆ ರಿಲೀಸ್ ಮಾಡಿದೆ.
ಇನ್ನು ಐಪಿಎಲ್ನಲ್ಲಿ ಆರ್ಸಿಬಿ, ಕೆಕೆಆರ್, ಎಸ್ಆರ್ಹೆಚ್ ಪರ ಆಡಿರುವ ಮನೀಷ್ ಪಾಂಡೆ ಇದುವರೆಗೆ 149 ಇನ್ನಿಂಗ್ಸ್‌ಗಳಲ್ಲಿ 121 ಸ್ಟ್ರೈಕ್ ರೇಟ್‌ನಲ್ಲಿ 3648 ರನ್ ಕಲೆಹಾಕಿದ್ದಾರೆ. ಈ ಅಂಕಿ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡರೆ ಈ ಬಾರಿಯ ಮಿನಿ ಹರಾಜಿನಲ್ಲೂ ಪಾಂಡೆ ಹೊಸ ತಂಡದ ಪಾಲಾಗುವ ಸಾಧ್ಯತೆಯಿದೆ.