Suryakumar Yadav: ಟಿ20 ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಬರೆದ ಸೂರ್ಯಕುಮಾರ್ ಯಾದವ್

Suryakumar Yadav: ಈ ವರ್ಷದ ಟೀಮ್ ಇಂಡಿಯಾದ ಟಿ20 ವೇಳಾಪಟ್ಟಿ ಮುಗಿದಿದ್ದು, ಇನ್ನುಳಿದಿರುವುದು ಏಕದಿನ ಹಾಗೂ ಟೆಸ್ಟ್​ ಸರಣಿಗಳು ಮಾತ್ರ.

| Updated By: ಝಾಹಿರ್ ಯೂಸುಫ್

Updated on: Nov 23, 2022 | 8:31 PM

ಟೀಮ್ ಇಂಡಿಯಾದ ಹೊಡಿಬಡಿ ದಾಂಡಿಗ ಸೂರ್ಯಕುಮಾರ್ ಯಾದವ್ ಟಿ20 ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ಅದು ಕೂಡ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಎಂಬುದು ವಿಶೇಷ.

1 / 8
2022 ರಲ್ಲಿ ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಆಟಗಾರನಾಗಿ ಸೂರ್ಯಕುಮಾರ್ ಯಾದವ್ ಹೊರಹೊಮ್ಮಿದ್ದಾರೆ. ಈ ವರ್ಷ 	31 ಪಂದ್ಯಗಳನ್ನಾಡಿರುವ ಸೂರ್ಯ ಒಟ್ಟು 1164 ರನ್ ಕಲೆಹಾಕಿದ್ದಾರೆ. ಈ ಮೂಲಕ 2022 ರಲ್ಲಿ ಅತ್ಯಧಿಕ ರನ್ ಬಾರಿಸಿದ ಬ್ಯಾಟ್ಸ್​ಮನ್ ಎನಿಸಿಕೊಂಡಿದ್ದಾರೆ.

2 / 8
ಈ ಪಟ್ಟಿಯಲ್ಲಿ ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ 2ನೇ ಸ್ಥಾನದಲ್ಲಿದ್ದಾರೆ. ಆದರೆ ಪಾಕ್ ತಂಡವು ಈ ವರ್ಷಾಂತ್ಯದಲ್ಲಿ ಯಾವುದೇ ಟಿ20 ಪಂದ್ಯವನ್ನು ಆಡುತ್ತಿಲ್ಲ. ಹೀಗಾಗಿ 25 ಪಂದ್ಯಗಳಿಂದ 996 ರನ್​ ಕಲೆಹಾಕಿರುವ ರಿಜ್ವಾನ್ 2ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ.

3 / 8
ಅಷ್ಟೇ ಅಲ್ಲದೆ ಒಂದು ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಬೌಂಡರಿ ಸಿಡಿಸಿದ ಮೊದಲ ಭಾರತೀಯ ಬ್ಯಾಟರ್ ಎಂಬ ದಾಖಲೆಯನ್ನೂ ಕೂಡ ಸೂರ್ಯ ತಮ್ಮದಾಗಿಸಿಕೊಂಡಿದ್ದಾರೆ. ಈ ವರ್ಷ 31 ಇನಿಂಗ್ಸ್ ಆಡಿರುವ ಸೂರ್ಯಕುಮಾರ್ ಯಾದವ್, ಒಟ್ಟು 106 ಫೋರ್ ಹಾಗೂ 68 ಸಿಕ್ಸ್ ಸಿಡಿಸುವ ಮೂಲಕ ವಿಶೇಷ ದಾಖಲೆ ನಿರ್ಮಿಸಿದ್ದಾರೆ.

4 / 8
ಇದರ ಜೊತೆಗೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಒಂದು ವರ್ಷದೊಳಗೆ 1000 ರನ್ ಪೂರೈಸಿದ ಮೊದಲ ಭಾರತೀಯ ಆಟಗಾರನಾಗಿ ಸೂರ್ಯಕುಮಾರ್ ಹೊರಹೊಮ್ಮಿದ್ದಾರೆ. ಅಷ್ಟೇ ಅಲ್ಲದೆ ಈ ಸಾಧನೆ ಮಾಡಿದ ವಿಶ್ವದ 2ನೇ ಬ್ಯಾಟ್ಸ್​ಮನ್ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.

5 / 8
ಇದಕ್ಕೂ ಮುನ್ನ 2021 ರಲ್ಲಿ ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ ಕೇವಲ 26 ಇನಿಂಗ್ಸ್​ ಮೂಲಕ 1326 ರನ್ ಬಾರಿಸಿ ವಿಶ್ವ ದಾಖಲೆ ಬರೆದಿದ್ದರು. ಇದೀಗ 1164 ರನ್ ಬಾರಿಸಿರುವ ಸೂರ್ಯಕುಮಾರ್​ಗೆ ಈ ದಾಖಲೆ ಮುರಿಯಲು ಸಾಧ್ಯವಾಗುವುದಿಲ್ಲ.

6 / 8
ಏಕೆಂದರೆ ಈ ವರ್ಷದ  ಟೀಮ್ ಇಂಡಿಯಾದ ಟಿ20 ವೇಳಾಪಟ್ಟಿ ಮುಗಿದಿದ್ದು, ಇನ್ನುಳಿದಿರುವುದು ಏಕದಿನ ಹಾಗೂ ಟೆಸ್ಟ್​ ಸರಣಿಗಳು ಮಾತ್ರ. ಹೀಗಾಗಿ ರಿಜ್ವಾನ್ ಹೆಸರಿನಲ್ಲಿರುವ ವಿಶ್ವ ದಾಖಲೆ ಮುರಿಯುವ ಅವಕಾಶ ಸೂರ್ಯಕುಮಾರ್ ಯಾದವ್ ಕೈತಪ್ಪಿದೆ.

7 / 8
ಒಟ್ಟಿನಲ್ಲಿ 2022 ರಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ 9 ಅರ್ಧಶತಕ ಹಾಗೂ 2 ಶತಕದೊಂದಿಗೆ 1164 ರನ್ ಕಲೆಹಾಕಿ ಸೂರ್ಯಕುಮಾರ್ ಯಾದವ್ ರನ್ ಮೆಷಿನ್ ಆಗಿ ಹೊರಹೊಮ್ಮಿರುವುದು ವಿಶೇಷ.

8 / 8
Follow us