IPL 2023 Auction: ಐಪಿಎಲ್​ ಹರಾಜಿಗೆ ಹೆಸರು ನೋಂದಾಯಿಸಲು ಡೆಡ್​ಲೈನ್ ಫಿಕ್ಸ್..!

IPL 2023 Auction: ಈ ಬಾರಿ ಸುಮಾರು 250 ಆಟಗಾರರು ಹೆಸರು ನೋಂದಣಿ ಮಾಡಿಕೊಳ್ಳುವ ನಿರೀಕ್ಷೆಯಿದೆ. ಅವರಲ್ಲಿ ಕೆಲವೇ ಕೆಲವು ಆಟಗಾರರಿಗೆ ಮಾತ್ರ ಅವಕಾಶ ಸಿಗಲಿದೆ.

TV9 Web
| Updated By: ಝಾಹಿರ್ ಯೂಸುಫ್

Updated on: Nov 23, 2022 | 6:04 PM

IPL 2023 Auction: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 16 ಗಾಗಿ ಬಿಸಿಸಿಐ ಭರ್ಜರಿ ಸಿದ್ಧತೆಯಲ್ಲಿದೆ. ಈಗಾಗಲೇ ಐಪಿಎಲ್ ಮಿನಿ ಹರಾಜಿಗಾಗಿ ದಿನಾಂಕ ಫಿಕ್ಸ್ ಮಾಡಲಾಗಿದ್ದು, ಅದರಂತೆ ಡಿಸೆಂಬರ್ 23 ರಂದು ಕೊಚ್ಚಿನ್​ನಲ್ಲಿ ಆಟಗಾರರ ಬಿಡ್ಡಿಂಗ್ ನಡೆಯಲಿದೆ.

1 / 7
ಅದಕ್ಕೂ ಮುನ್ನ ಈ ಹರಾಜಿಗಾಗಿ ಹೆಸರು ನೋಂದಣಿ ಮಾಡಿಕೊಳ್ಳಲು ಬಿಸಿಸಿಐ ಆಟಗಾರರಿಗೆ ಗಡುವು ವಿಧಿಸಿದೆ. ಅದರಂತೆ ಡಿಸೆಂಬರ್ 15, ಸಂಜೆ 5 ಗಂಟೆಯೊಳಗೆ ಆಸಕ್ತ ಆಟಗಾರರು ಹೆಸರು ರಿಜಿಸ್ಟರ್ ಮಾಡಿಕೊಳ್ಳಲು ಬಿಸಿಸಿಐ ಸೂಚಿಸಿದೆ.

2 / 7
ಡಿಸೆಂಬರ್ 15 ಕೊನೆಯ ದಿನಾಂಕವಾಗಿದ್ದು, ಆ ಬಳಿಕ ಹೆಸರು ನೀಡುವ ಆಟಗಾರರನ್ನು ಹರಾಜಿಗಾಗಿ ಪರಿಗಣಿಸಲಾಗುವುದಿಲ್ಲ. ಹೀಗಾಗಿ ಮುಂದಿನ ತಿಂಗಳ 15 ರೊಳಗೆ ಎಲ್ಲಾ ಆಟಗಾರರು ಮಿನಿ ಹರಾಜಿಗಾಗಿ ಹೆಸರು ನೀಡುವ ನಿರೀಕ್ಷೆಯಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

3 / 7
ಇನ್ನು ಮಿನಿ ಹರಾಜಿಗಾಗಿ ಹೆಸರು ನೋಂದಣಿ ದಿನಾಂಕ ಫಿಕ್ಸ್ ಆಗುತ್ತಿದ್ದಂತೆ, ಅತ್ತ ಇಂಗ್ಲೆಂಡ್​ ತಂಡದ ಆಲ್​ರೌಂಡರ್ ಬೆನ್​ ಸ್ಟೋನ್ಸ್ ಹಾಗೂ ಜೋ ರೂಟ್ ತಮ್ಮ ಹೆಸರುಗಳನ್ನು ರಿಜಿಸ್ಟರ್ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

4 / 7
ಈ ಬಾರಿ ಸುಮಾರು 250 ಆಟಗಾರರು ಹೆಸರು ನೋಂದಣಿ ಮಾಡಿಕೊಳ್ಳುವ ನಿರೀಕ್ಷೆಯಿದೆ. ಅವರಲ್ಲಿ ಕೆಲವೇ ಕೆಲವು ಆಟಗಾರರಿಗೆ ಮಾತ್ರ ಅವಕಾಶ ಸಿಗಲಿದೆ. ಏಕೆಂದರೆ ಈ ಬಾರಿ ಮಿನಿ ಹರಾಜು ನಡೆಯಲಿದ್ದು, ಹೀಗಾಗಿ ಆಯಾ ತಂಡಗಳಲ್ಲಿ ಖಾಲಿ ಇರುವ ಸ್ಥಾನಗಳಿಗಾಗಿ ಬಿಡ್ಡಿಂಗ್ ಜರುಗಲಿದೆ.

5 / 7
ಇನ್ನು ಈ ಬಾರಿಯ ಮಿನಿ ಹರಾಜಿನಲ್ಲಿ ಸ್ಟಾರ್ ಆಟಗಾರರಾಗಿ ಇಂಗ್ಲೆಂಡ್​ನ ಬೆನ್​ ಸ್ಟೋಕ್ಸ್, ಸ್ಯಾಮ್ ಕರನ್, ಜೋ ರೂಟ್ ಹಾಗೂ ಆಸ್ಟ್ರೇಲಿಯಾದ ಯುವ ಆಲ್​ರೌಂಡರ್ ಕ್ಯಾಮರೂನ್ ಗ್ರೀನ್ ಹೆಸರುಗಳು ಕಾಣಿಸಿಕೊಳ್ಳಲಿವೆ.

6 / 7
 ಡಿಸೆಂಬರ್ 23 ರಂದು ಒಟ್ಟು ಮೊತ್ತ 95 ಕೋಟಿ ರೂ. ನಲ್ಲಿ ಆಯಾ ಫ್ರಾಂಚೈಸಿ ಬಳಿ ಉಳಿದಿರುವ ಮೊತ್ತದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಅದರಂತೆ ಯಾವ ತಂಡಕ್ಕೆ ಯಾರು ಸೇರ್ಪಡೆಯಾಗಲಿದ್ದಾರೆ ಕಾದು ನೋಡಬೇಕಿದೆ.

7 / 7
Follow us