ಕ್ರಿಕೆಟ್‌ನಲ್ಲಿ ಹೊಸ ನಿಯಮ ಜಾರಿಗೆ ತಂದ ಐಸಿಸಿ; ಬೌಲಿಂಗ್ ತಂಡ ಮೈಮರೆತರೆ 5 ರನ್ ದಂಡ..!
ICC: ಆಟದ ವೇಗವನ್ನು ಹೆಚ್ಚಿಸಲು ಈ ನಿಯಮವನ್ನು ತರಲಾಗಿದ್ದು, ಓವರ್‌ಗಳ ನಡುವೆ ತೆಗೆದುಕೊಳ್ಳುವ ಸಮಯವನ್ನು ಕಡಿಮೆ ಮಾಡುವ ಸಲುವಾಗಿ ಸ್ಟಾಪ್ ಕ್ಲಾಕ್ ನಿಯಮವನ್ನು ಪರಿಚಯಿಸಲಾಗುತ್ತಿದೆ. ಈ ನಿಯಮವನ್ನು ಪ್ರಾಯೋಗಿಕವಾಗಿ ಡಿಸೆಂಬರ್ 2023 ರಿಂದ ಏಪ್ರಿಲ್ 2024 ರವರೆಗೆ ಜಾರಿಗೊಳಿಸಲಾಗುವುದು.
1 / 7
ಅಹಮದಾಬಾದ್ನಲ್ಲಿ ನಡೆದ ಐಸಿಸಿ ಸಭೆಯಲ್ಲಿ ಸ್ಟಾಪ್ ಕ್ಲಾಕ್ ಎಂಬ ಹೊಸ ನಿಯಮವನ್ನು ಜಾರಿಗೆ ತರಲಾಗಿದೆ. ಇನ್ನು ಮುಂದೆ ಈ ನಿಯಮಗಳನ್ನು ಏಕದಿನ ಮತ್ತು ಟಿ20 ಕ್ರಿಕೆಟ್‌ನಲ್ಲಿ ಬಳಸಲಾಗುವುದು ಎಂದು ಐಸಿಸಿ ತಿಳಿಸಿದೆ.
2 / 7
ವಾಸ್ತವವಾಗಿ ಆಟದ ವೇಗವನ್ನು ಹೆಚ್ಚಿಸಲು ಈ ನಿಯಮವನ್ನು ತರಲಾಗಿದ್ದು, ಓವರ್‌ಗಳ ನಡುವೆ ತೆಗೆದುಕೊಳ್ಳುವ ಸಮಯವನ್ನು ಕಡಿಮೆ ಮಾಡುವ ಸಲಯವಾಗಿ ಸ್ಟಾಪ್ ಕ್ಲಾಕ್ ನಿಯಮವನ್ನು ಪರಿಚಯಿಸಲಾಗುತ್ತಿದೆ. ಈ ನಿಯಮವನ್ನು ಪ್ರಾಯೋಗಿಕವಾಗಿ ಡಿಸೆಂಬರ್ 2023 ರಿಂದ ಏಪ್ರಿಲ್ 2024 ರವರೆಗೆ ಜಾರಿಗೊಳಿಸಲಾಗುವುದು.
3 / 7
ಡಿಸೆಂಬರ್ 2023 ರಿಂದ ಏಪ್ರಿಲ್ 2024 ರವರೆಗೆ ಪುರುಷರ ಏಕದಿನ ಮತ್ತು ಟಿ20 ಕ್ರಿಕೆಟ್‌ನಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಸ್ಟಾಪ್ ಕ್ಲಾಕ್ ನಿಯಮವನ್ನು ಪರಿಚಯಿಸಲು CEC ಸಮ್ಮತಿಸಿದೆ. ಓವರ್‌ಗಳ ನಡುವೆ ತೆಗೆದುಕೊಳ್ಳುವ ಸಮಯವನ್ನು ಕಡಿಮೆ ಮಾಡಲು ಈ ನಿಯಮವನ್ನು ಬಳಸಲಾಗುತ್ತದೆ.
4 / 7
ನಿಯಮಗಳ ಪ್ರಕಾರ, ಬೌಲಿಂಗ್ ತಂಡವು ಹಿಂದಿನ ಓವರ್ ಮುಗಿದ 60 ಸೆಕೆಂಡುಗಳ ಒಳಗೆ ಮುಂದಿನ ಓವರ್ ಅನ್ನು ಬೌಲ್ ಮಾಡಲು ಸಿದ್ಧವಾಗಿರಬೇಕು. ಒಂದು ವೇಳೆ ಇದು ಸಾಧ್ಯವಾಗದಿದ್ದರೆ ಹಾಗೂ ಈ ರೀತಯ ಘಟನೆ ಇನ್ನಿಂಗ್ಸ್‌ನಲ್ಲಿ ಮೂರನೇ ಬಾರಿಗೆ ಸಂಭವಿಸಿದರೆ ಬೌಲಿಂಗ್ ತಂಡಕ್ಕೆ 5 ರನ್‌ಗಳ ದಂಡವನ್ನು ವಿಧಿಸಲಾಗುತ್ತದೆ.
5 / 7
ಏಕದಿನ ಪಂದ್ಯಗಳಲ್ಲಿ, ಬೌಲಿಂಗ್ ತಂಡಕ್ಕೆ 50 ಓವರ್‌ಗಳನ್ನು ಬೌಲ್ ಮಾಡಲು 3.5 ಗಂಟೆಗಳ ಕಾಲಾವಕಾಶ ನೀಡಲಾಗುತ್ತದೆ. ಆದರೆ ಟಿ20ಯಲ್ಲಿ ತಂಡಕ್ಕೆ 20 ಓವರ್‌ಗಳನ್ನು ಬೌಲ್ ಮಾಡಲು ಒಂದು ಗಂಟೆ 25 ನಿಮಿಷಗಳು ಸಿಗುತ್ತವೆ.
6 / 7
ಯಾವುದೇ ತಂಡವು ನಿಗದಿತ ಸಮಯದಲ್ಲಿ ಓವರ್‌ಗಳನ್ನು ಪೂರ್ಣಗೊಳಿಸದಿದ್ದರೆ, ನಿಧಾನಗತಿಯ ಓವರ್‌ರೇಟ್‌ನ ನಿಯಮದಿಂದಾಗಿ, ತಂಡವು ಉಳಿದ ಓವರ್‌ಗಳಲ್ಲಿ 30 ಯಾರ್ಡ್ ವೃತ್ತದೊಳಗೆ ಮತ್ತೊಬ್ಬ ಆಟಗಾರನನ್ನು ಇರಿಸಬೇಕಾಗುತ್ತದೆ. ಹಾಗೆಯೇ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22 ಅಡಿಯಲ್ಲಿ ದಂಡ ವಿಧಿಸುವ ಅವಕಾಶವೂ ಇದೆ.
7 / 7
ಈಗ ಸ್ಟಾಪ್ ಕ್ಲಾಕ್ ನಿಯಮದಿಂದ ಬ್ಯಾಟಿಂಗ್ ತಂಡಕ್ಕೆ ಲಾಭವಾಗಲಿದೆ. ಯಾವುದೇ ತಂಡವು ಹಿಂದಿನ ಓವರ್ ಮುಗಿದ ನಂತರ ಮುಂದಿನ ಓವರ್ ಅನ್ನು ಬೌಲ್ ಮಾಡಲು ಎರಡು ಬಾರಿ 60 ಸೆಕೆಂಡುಗಳಿಗಿಂತ ಹೆಚ್ಚು ತೆಗೆದುಕೊಂಡರೆ, ಬ್ಯಾಟಿಂಗ್ ತಂಡಕ್ಕೆ 5 ರನ್ಗಳನ್ನು ನೀಡಲಾಗುತ್ತದೆ.
Published On - 10:26 am, Wed, 22 November 23