ICC Awards 2022: ಐಸಿಸಿ ಉದಯೋನ್ಮುಖ ಕ್ರಿಕೆಟಿಗ ನಾಮನಿರ್ದೇಶಿತ ಪಟ್ಟಿ ಪ್ರಕಟ: ಟೀಮ್ ಇಂಡಿಯಾ ಆಟಗಾರನಿಗೆ ಸ್ಥಾನ

| Updated By: ಝಾಹಿರ್ ಯೂಸುಫ್

Updated on: Dec 28, 2022 | 7:34 PM

ICC Awards 2022: ಐಸಿಸಿಯ ಉದಯೋನ್ಮುಖ ಕ್ರಿಕೆಟಿಗರ ಪ್ರಶಸ್ತಿಗೆ 26 ವರ್ಷಕ್ಕಿಂತ ಕಡಿಮೆ ವಯಸ್ಸಿನ ಆಟಗಾರರನ್ನು ಮಾತ್ರ ಪರಿಗಣಿಸಲಾಗುತ್ತದೆ.

1 / 6
ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ 2022ರ ಉದಯೋನ್ಮುಖ ಕ್ರಿಕೆಟಿಗರ ಪ್ರಶಸ್ತಿಗೆ ನಾಮನಿರ್ದೇಶಿತ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಒಟ್ಟು ನಾಲ್ವರು ಆಟಗಾರರು ಸ್ಥಾನ ಪಡೆದಿದ್ದು, ಅವರಲ್ಲಿ ಒಬ್ಬರು ಭಾರತೀಯ ಕ್ರಿಕೆಟಿಗ ಎಂಬುದು ವಿಶೇಷ. ಹಾಗಿದ್ರೆ ಐಸಿಸಿ ಯುವ ಆಟಗಾರನ ಪ್ರಶಸ್ತಿಗೆ ನಾಮನಿರ್ದೇಶಿತರಾಗಿರುವ ಆಟಗಾರರು ಯಾರೆಲ್ಲಾ ಎಂದು ನೋಡೋಣ...

2 / 6
ಮಾರ್ಕೊ ಯಾನ್ಸನ್: ಸೌತ್ ಆಫ್ರಿಕಾದ ಯುವ ಎಡಗೈ ವೇಗಿ ಈ ವರ್ಷ 9 ಟೆಸ್ಟ್ ಪಂದ್ಯಗಳಿಂದ 41 ವಿಕೆಟ್, 3 ಏಕದಿನ ಹಾಗೂ 1 ಟಿ20 ಪಂದ್ಯದಿಂದ ಒಟ್ಟು 4 ವಿಕೆಟ್ ಕಬಳಿಸಿದ್ದಾರೆ. ಈ ಭರ್ಜರಿ ಪ್ರದರ್ಶನದ ಫಲವಾಗಿ 22 ವರ್ಷ ಮಾರ್ಕೊ ಯಾನ್ಸನ್​ಗೆ ಉದಯೋನ್ಮುಖ ಆಟಗಾರರ ಪ್ರಶಸ್ತಿಗೆ ನಾಮನಿರ್ದೇಶಿತರಾಗಿದ್ದಾರೆ.

3 / 6
ಇಬ್ರಾಹಿಂ ಜದ್ರಾನ್: ಅಫ್ಘಾನಿಸ್ತಾನದ 21 ವರ್ಷದ ಬ್ಯಾಟ್ಸ್​ಮನ್ ಇಬ್ರಾಹಿಂ ಜದ್ರಾನ್ 4 ಟೆಸ್ಟ್ ಪಂದ್ಯಗಳಿಂದ 356 ರನ್​ ಹಾಗೂ 8 ಏಕದಿನ ಪಂದ್ಯಗಳಿಂದ 431 ರನ್​ ಕಲೆಹಾಕಿದ್ದಾರೆ. ಹಾಗೆಯೇ 16 ಟಿ20 ಪಂದ್ಯಗಳಿಂದ ಒಟ್ಟು 381 ರನ್ ಬಾರಿಸಿದ್ದಾರೆ. ಈ ಮೂಲಕ ಉದಯೋನ್ಮುಖ ಆಟಗಾರರ ಪ್ರಶಸ್ತಿ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

4 / 6
ಫಿನ್ ಅಲೆನ್: ನ್ಯೂಜಿಲೆಂಡ್​ನ 23 ವರ್ಷದ ಹೊಡಿಬಡಿ ದಾಂಡಿಗ ಫಿನ್ ಅಲೆನ್ ಈ ವರ್ಷ 11 ಏಕದಿನ ಪಂದ್ಯಗಳಿಂದ 387 ರನ್ ಹಾಗೂ ಒಟ್ಟು 25 ಟಿ20 ಪಂದ್ಯಗಳಿಂದ 567 ರನ್ ಬಾರಿಸಿದ್ದಾರೆ. ಈ ಭರ್ಜರಿ ಪ್ರದರ್ಶನದ ಫಲವಾಗಿ ಇದೀಗ ಐಸಿಸಿಯ ಉದಯೋನ್ಮುಖ ಪ್ರಶಸ್ತಿಗೆ ನಾಮನಿರ್ದೇಶಿತರಾಗಿದ್ದಾರೆ.

5 / 6
ಅರ್ಷದೀಪ್ ಸಿಂಗ್: ಟೀಮ್ ಇಂಡಿಯಾ ಪರ ಈ ವರ್ಷ ಪದಾರ್ಪಣೆ ಮಾಡಿದ್ದ 23 ವರ್ಷದ ಯುವ ಎಡಗೈ ವೇಗಿ ಅರ್ಷದೀಪ್ ಸಿಂಗ್ ಭರ್ಜರಿ ಪ್ರದರ್ಶನ ನೀಡಿದ್ದರು. 2022 ರಲ್ಲಿ ವೃತ್ತಿಜೀವನ ಆರಂಭಿಸಿದ್ದ ಅರ್ಷದೀಪ್ 21 ಟಿ20 ಪಂದ್ಯಗಳಿಂದ ಒಟ್ಟು 33 ವಿಕೆಟ್ ಕಬಳಿಸಿದ್ದಾರೆ. ಈ ಅತ್ಯುತ್ತಮ ಪ್ರದರ್ಶನದಿಂದಾಗಿ ಇದೀಗ ಐಸಿಸಿಯ ಉದಯೋನ್ಮುಖ ಪ್ರಶಸ್ತಿಗೆ ನಾಮನಿರ್ದೇಶಿತರಾಗಿದ್ದಾರೆ.

6 / 6
ಐಸಿಸಿಯ ಉದಯೋನ್ಮುಖ ಕ್ರಿಕೆಟಿಗರ ಪ್ರಶಸ್ತಿಗೆ 26 ವರ್ಷಕ್ಕಿಂತ ಕಡಿಮೆ ವಯಸ್ಸಿನ ಆಟಗಾರರನ್ನು ಮಾತ್ರ ಪರಿಗಣಿಸಲಾಗುತ್ತದೆ. ಅದರಂತೆ ಈ ಬಾರಿ ಫಿನ್ ಅಲೆನ್, ಅರ್ಷದೀಪ್ ಸಿಂಗ್, ಇಬ್ರಾಹಿಂ ಜದ್ರಾನ್ ಹಾಗೂ ಮಾರ್ಕೊ ಯಾನ್ಸನ್ ಕೊನೆಯ ಸುತ್ತಿಗೆ ಆಯ್ಕೆಯಾಗಿದ್ದಾರೆ. ಇವರಲ್ಲಿ ಈ ಬಾರಿಯ ಯಾರು ಅತ್ಯುತ್ತಮ ಯುವ ಕ್ರಿಕೆಟಿಗರಾಗಿ ಹೊರಹೊಮ್ಮಲಿದ್ದಾರೆ ಕಾದು ನೋಡಬೇಕಿದೆ.

Published On - 7:34 pm, Wed, 28 December 22