ICC ODI Cricketer of the Year: ಐಸಿಸಿ ವರ್ಷದ ಏಕದಿನ ಕ್ರಿಕೆಟಿಗ ಪ್ರಶಸ್ತಿ ರೇಸ್ನಲ್ಲಿ ಮೂವರು ಭಾರತೀಯರು..!
ICC ODI Cricketer of the Year: ಐಸಿಸಿ ಬಿಡುಗಡೆ ಮಾಡಿರುವ ನಾಲ್ವರು ಆಟಗಾರರ ಹೆಸರಲ್ಲಿ ಮೂವರು ಭಾರತೀಯ ಆಟಗಾರರು ಸ್ಥಾನ ಪಡೆದಿದ್ದಾರೆ. ಇದರರ್ಥ ಈ ಮೂವರು ಭಾರತೀಯ ಆಟಗಾರರಲ್ಲಿ ಯಾರಾದರೂ ಈ ಪ್ರಶಸ್ತಿಯನ್ನು ಪಡೆಯುವ ಸಾಧ್ಯತೆಗಳಿವೆ.
1 / 8
ವರ್ಷದ ಏಕದಿನ ಕ್ರಿಕೆಟಿಗ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಆಟಗಾರರ ಹೆಸರನ್ನು ಐಸಿಸಿ ಪ್ರಕಟಿಸಿದೆ. ವಿಶೇಷವೆಂದರೆ ಐಸಿಸಿ ಬಿಡುಗಡೆ ಮಾಡಿರುವ ನಾಲ್ವರು ಆಟಗಾರರ ಹೆಸರಲ್ಲಿ ಮೂವರು ಭಾರತೀಯ ಆಟಗಾರರು ಸ್ಥಾನ ಪಡೆದಿದ್ದಾರೆ. ಇದರರ್ಥ ಈ ಮೂವರು ಭಾರತೀಯ ಆಟಗಾರರಲ್ಲಿ ಯಾರಾದರೂ ಈ ಪ್ರಶಸ್ತಿಯನ್ನು ಪಡೆಯುವ ಸಾಧ್ಯತೆಗಳಿವೆ.
2 / 8
ಈ ಬಾರಿ ಟೀಂ ಇಂಡಿಯಾದಿಂದ ಮಾಜಿ ನಾಯಕ ವಿರಾಟ್ ಕೊಹ್ಲಿ, ಆರಂಭಿಕ ಬ್ಯಾಟ್ಸ್‌ಮನ್ ಶುಭ್‌ಮನ್ ಗಿಲ್ ಮತ್ತು ವೇಗದ ಬೌಲರ್ ಮೊಹಮ್ಮದ್ ಶಮಿ ಅವರ ಹೆಸರನ್ನು ನಾಮನಿರ್ದೇಶನ ಮಾಡಲಾಗಿದೆ. ನಾಲ್ಕನೇ ಆಟಗಾರನಾಗಿ ನ್ಯೂಜಿಲೆಂಡ್‌ನ ಡೇರಿಲ್ ಮಿಚೆಲ್ ಹೆಸರನ್ನು ಆಯ್ಕೆ ಮಾಡಲಾಗಿದೆ.
3 / 8
2023 ರಲ್ಲಿ 27 ಪಂದ್ಯಗನ್ನಾಡಿರುವ ವಿರಾಟ್ ಕೊಹ್ಲಿ 1377 ರನ್ ಬಾರಿಸಿರುವುದಲ್ಲದೆ ಒಂದು ವಿಕೆಟ್ ಕೂಡ ಪಡೆದರು. ಹಾಗೆಯೇ ಕೊಹ್ಲಿ 12 ಕ್ಯಾಚ್‌ಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. 2023 ರ ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ವಿರಾಟ್ ಅವರು ಐಸಿಸಿಯಿಂದ ಟೂರ್ನಮೆಂಟ್ ಆಟಗಾರ ಪ್ರಶಸ್ತಿಯನ್ನು ಸಹ ಪಡೆದರು.
4 / 8
ಆರಂಭಿಕ ಬ್ಯಾಟ್ಸ್‌ಮನ್ ಶುಭ್‌ಮನ್ ಗಿಲ್ ಅವರ ಈ ವರ್ಷದ ಪ್ರದರ್ಶನವನ್ನು ನೋಡುವುದಾದರೆ.. 2023 ರಲ್ಲಿ 29 ಏಕದಿನ ಪಂದ್ಯಗಳನ್ನಾಡಿರುವ ಗಿಲ್, 63.36 ಸರಾಸರಿಯಲ್ಲಿ 1584 ರನ್ ಬಾರಿಸಿದರೆ, 24 ಕ್ಯಾಚ್‌ಗಳನ್ನು ಸಹ ಪಡೆದಿದ್ದಾರೆ.
5 / 8
ಕಳೆದ ವರ್ಷ ಏಕದಿನ ಪಂದ್ಯಗಳಲ್ಲಿ ಒಟ್ಟು ಐದು ಶತಕಗಳನ್ನು ಬಾರಿಸಿರುವ ಗಿಲ್, ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಉತ್ತಮ ಜೊತೆಯಾಟದ ಮೂಲಕ ಸಾಕಷ್ಟು ರನ್ ಗಳಿಸಿದ್ದರು. 2023ರಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಶುಭ್‌ಮನ್ ಗಿಲ್ ಒಟ್ಟು 354 ರನ್ ಸಹ ಬಾರಿಸಿದ್ದರು.
6 / 8
ವಿಶ್ವಕಪ್‌ನುದ್ದಕ್ಕೂ ಅದ್ಭುತವಾಗಿ ಬೌಲಿಂಗ್ ಮಾಡಿದ ವೇಗಿ ಮೊಹಮ್ಮದ್ ಶಮಿಗೆ ಅರ್ಜುನ ಪ್ರಶಸ್ತಿ ಕೂಡ ಲಭಿಸಿತ್ತು. ಇದೀಗ ಶಮಿ ವರ್ಷದ ಏಕದಿನ ಕ್ರಿಕೆಟಿಗ ಪ್ರಶಸ್ತಿ ಪಡೆಯುವ ರೇಸ್ನಲ್ಲಿದ್ದಾರೆ. ಮೊಹಮ್ಮದ್ ಶಮಿ ಈ ವರ್ಷ 19 ಏಕದಿನ ಪಂದ್ಯಗಳಲ್ಲಿ 43 ವಿಕೆಟ್ ಕಬಳಿಸಿದ್ದಾರೆ. ಅಲ್ಲದೆ ಬ್ಯಾಟಿಂಗ್ನಲ್ಲಿ 36 ರನ್ ಬಾರಿಸಿರುವ ಶಮಿ ಮೂರು ಕ್ಯಾಚ್‌ಗಳನ್ನು ಸಹ ಪಡೆದಿದ್ದರು.
7 / 8
ವಾಸ್ತವವಾಗಿ 2023 ರ ವಿಶ್ವಕಪ್‌ನ ಮೊದಲ ಕೆಲವು ಪಂದ್ಯಗಳಲ್ಲಿ ಶಮಿಗೆ ಆಡುವ ಹನ್ನೊಂದರಲ್ಲಿ ಅವಕಾಶ ಸಿಕ್ಕಿರಲಿಲ್ಲ. ಆದರೆ ಅವಕಾಶ ಸಿಕ್ಕ ಬಳಿಕ ಪಂದ್ಯಾವಳಿಯ ಉದ್ದಕ್ಕೂ 10.7 ರ ಸರಾಸರಿಯಲ್ಲಿ 24 ವಿಕೆಟ್ಗಳನ್ನು ಪಡೆದ ಶಮಿ, ವಿಶ್ವಕಪ್ 2023 ರಲ್ಲಿ ಪ್ರಮುಖ ವಿಕೆಟ್ ಟೇಕರ್ ಎನಿಸಿಕೊಂಡರು. ಕಳೆದ ಏಳು ಪಂದ್ಯಗಳ ಪೈಕಿ ಮೂರು ಬಾರಿ ಐದು ಹಾಗೂ ಒಮ್ಮೆ ನಾಲ್ಕು ವಿಕೆಟ್ ಕಬಳಿಸಿದ್ದಾರೆ.
8 / 8
ಈ ಪಟ್ಟಿಯಲ್ಲಿ ಈ ಮೂವರು ಭಾರತೀಯರಲ್ಲದೆ ನ್ಯೂಜಿಲೆಂಡ್‌ನ ಡೇರಿಲ್ ಮಿಚೆಲ್ ಹೆಸರೂ ಸೇರಿದೆ. ಅವರು 26 ಪಂದ್ಯಗಳಲ್ಲಿ 1204 ರನ್ ಬಾರಿಸಿದ್ದರೆ, 9 ವಿಕೆಟ್ ಮತ್ತು 22 ಕ್ಯಾಚ್‌ಗಳನ್ನು ಸಹ ಪಡೆದಿದ್ದಾರೆ.