ಐಸಿಸಿ ತಿಂಗಳ ಆಟಗಾರ ನಾಮನಿರ್ದೇಶಿತ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಇಬ್ಬರಿಗೆ ಸ್ಥಾನ

| Updated By: ಝಾಹಿರ್ ಯೂಸುಫ್

Updated on: Feb 08, 2023 | 5:00 PM

ICC Men's Player of the Month: ಪಾಕಿಸ್ತಾನ್ ವಿರುದ್ಧ ಆಡಿದ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದ ಕಾನ್ವೆ ಟೀಮ್ ಇಂಡಿಯಾ ವಿರುದ್ಧ 138 ಬಾರಿಸಿ ಅಬ್ಬರಿಸಿದ್ದರು.

1 / 5
ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯು (ICC) ಜನವರಿ ತಿಂಗಳ ಆಟಗಾರನ ನಾಮನಿರ್ದೇಶಿತ ಪಟ್ಟಿಯನ್ನು ಪ್ರಕಟಿಸಿದೆ. ಈ ಬಾರಿ ಆಯ್ಕೆಯಾದ ಮೂವರು ಕ್ರಿಕೆಟಿಗರಲ್ಲಿ ಇಬ್ಬರು ಭಾರತೀಯರು ಎಂಬುದು ವಿಶೇಷ. ಅವರೆಂದರೆ...

2 / 5
ಶುಭ್​ಮನ್ ಗಿಲ್: ಟೀಮ್ ಇಂಡಿಯಾ ಯುವ ಆರಂಭಿಕ ಆಟಗಾರ ಶುಭ್​ಮನ್ ಗಿಲ್ ಅದ್ಭುತ ಫಾರ್ಮ್​ನಲ್ಲಿದ್ದಾರೆ. ಜನವರಿಯಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ 3ಪಂದ್ಯಗಳಿಂದ 360 ರನ್​ ಕಲೆಹಾಕಿದ್ದ ಗಿಲ್, ಟಿ20 ಸರಣಿಯಲ್ಲೂ ಭರ್ಜರಿ ಶತಕ ಬಾರಿಸಿ ಅಬ್ಬರಿಸಿದ್ದರು. ಹೀಗಾಗಿ ಜನವರಿ ತಿಂಗಳ ನಾಮನಿರ್ದೇಶಿತರರ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಯುವ ಆಟಗಾರ ಸ್ಥಾನ ಪಡೆದಿದ್ದಾರೆ.

3 / 5
ಡೆವೊನ್ ಕಾನ್ವೆ: ನ್ಯೂಜಿಲೆಂಡ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ಡೆವೊನ್ ಕಾನ್ವೆ ಕೂಡ ಜನವರಿ ತಿಂಗಳ ಆಟಗಾರ ನಾಮನಿರ್ದೇಶೀತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಪಾಕಿಸ್ತಾನ್ ವಿರುದ್ಧ ಆಡಿದ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದ ಕಾನ್ವೆ ಟೀಮ್ ಇಂಡಿಯಾ ವಿರುದ್ಧ 138 ಬಾರಿಸಿ ಅಬ್ಬರಿಸಿದ್ದರು.

4 / 5
ಮೊಹಮ್ಮದ್ ಸಿರಾಜ್: ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಏಕೈಕ ಬೌಲರ್ ಎಂದರೆ ಮೊಹಮ್ಮದ್ ಸಿರಾಜ್. ಶ್ರೀಲಂಕಾ ಹಾಗೂ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದ ಸಿರಾಜ್ 5 ಪಂದ್ಯಗಳಿಂದ ಒಟ್ಟು 14 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಜನವರಿ ತಿಂಗಳ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶಿತರಾಗಿದ್ದಾರೆ.

5 / 5
ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿರುವ ಮೂವರಲ್ಲಿ ಯಾರು ಉತ್ತಮ ಎಂಬುದನ್ನು ನಿರ್ಧರಿಸುವ ಅವಕಾಶ ಕ್ರಿಕೆಟ್ ಪ್ರೇಮಿಗಳಿಗೆ ನೀಡಲಾಗಿದೆ. ಅದರಂತೆ ಐಸಿಸಿಯ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡುವ ಮೂಲಕ ವೋಟಿಂಗ್ ಮಾಡಬಹುದು.