ICC ODI Rankings: ರಾಹುಲ್- ಶ್ರೇಯಸ್ಗೆ ಲಾಭ; ಅಗ್ರ 10ರಲ್ಲಿ ಮೂವರು ಭಾರತೀಯರು
ICC ODI Rankings: ಇಂದು ಬಿಡುಗಡೆಯಾಗಿರುವ ಐಸಿಸಿ ನೂತನ ಏಕದಿನ ರ್ಯಾಂಕಿಂಗ್ ಪಟ್ಟಿಯಲ್ಲಿ ಟೀಂ ಇಂಡಿಯಾದ ಬ್ಯಾಟರ್ಗಳಾದ ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಭರ್ಜರಿ ಮುಂಬಡ್ತಿ ಪಡೆದಿದ್ದಾರೆ. ಅಲ್ಲದೆ ನೂತನ ಪಟ್ಟಿಯ ಮೊದಲ 4 ಸ್ಥಾನಗಳಲ್ಲಿ ಮೂವರು ಭಾರತೀಯರೇ ಇದ್ದಾರೆ.
1 / 8
ಇಂದು ಬಿಡುಗಡೆಯಾಗಿರುವ ಐಸಿಸಿ ನೂತನ ಏಕದಿನ ರ್ಯಾಂಕಿಂಗ್ ಪಟ್ಟಿಯಲ್ಲಿ ಟೀಂ ಇಂಡಿಯಾದ ಬ್ಯಾಟರ್ಗಳಾದ ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಭರ್ಜರಿ ಮುಂಬಡ್ತಿ ಪಡೆದಿದ್ದಾರೆ. ಅಲ್ಲದೆ ನೂತನ ಪಟ್ಟಿಯ ಮೊದಲ 4 ಸ್ಥಾನಗಳಲ್ಲಿ ಮೂವರು ಭಾರತೀಯರೇ ಇದ್ದಾರೆ.
2 / 8
2023 ರ ಏಕದಿನ ವಿಶ್ವಕಪ್ ನಂತರ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಿತ್ತು. ಈ ಸರಣಿಯಲ್ಲಿ ಟೀಂ ಇಂಡಿಯಾದ ನಾಯಕತ್ವವನ್ನು ಕೆಎಲ್ ರಾಹುಲ್ ವಹಿಸಿಕೊಂಡಿದ್ದರು. ಅಲ್ಲದೆ ಅವರ ನಾಯಕತ್ವದಲ್ಲಿ ತಂಡ 2-1 ಅಂತರದಲ್ಲಿ ಸರಣಿ ಗೆದ್ದಿತ್ತು.
3 / 8
ಈ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ 52 ರನ್ಗಳ ಇನ್ನಿಂಗ್ಸ್ ಆಡಿ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶ್ರೇಯಸ್ ಅಯ್ಯರ್ ಐಸಿಸಿ ಶ್ರೇಯಾಂಕದಲ್ಲೂ ಇದರ ಲಾಭ ಪಡೆದಿದ್ದಾರೆ.
4 / 8
ಅದರಂತೆ ನೂತನ ಏಕದಿನ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ 689 ರೇಟಿಂಗ್ ಅಂಕಗಳನ್ನು ಹೊಂದಿರುವ ಶ್ರೇಯಸ್ ಒಂದು ಸ್ಥಾನ ಮೇಲೇರಿ 11 ನೇ ಸ್ಥಾನಕ್ಕೆ ತಲುಪಿದ್ದಾರೆ.
5 / 8
ಇವರಂತೆ ಕೆಎಲ್ ರಾಹುಲ್ ಕೂಡ ಒಂದು ಸ್ಥಾನ ಮೇಲೇರಿ 666 ರೇಟಿಂಗ್ ಅಂಕಗಳೊಂದಿಗೆ 16ನೇ ಸ್ಥಾನಕ್ಕೆ ತಲುಪಿದ್ದಾರೆ.
6 / 8
ಉಳಿದಂತೆ ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಆಝಂ ಏಕದಿನ ಬ್ಯಾಟರ್ಗಳ ಶ್ರೇಯಾಂಕದಲ್ಲಿ 824 ರೇಟಿಂಗ್ ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಆ ಬಳಿಕ ಉಳಿದ ಮೂರು ಸ್ಥಾನಗಳಲ್ಲಿ ಭಾರತೀಯ ಆಟಗಾರರಿರುವುದು ವಿಶೇಷವಾಗಿದೆ.
7 / 8
ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ತಂಡದ ಯುವ ಆರಂಭಿಕ ಆಟಗಾರ ಶುಭ್ಮನ್ ಗಿಲ್ 801 ರೇಟಿಂಗ್ಸ್ ಪಾಯಿಂಟ್ ಹೊಂದಿದ್ದಾರೆ.
8 / 8
768 ರೇಟಿಂಗ್ ಪಾಯಿಂಟ್ಸ್ಗಳೊಂದಿಗೆ ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದರೆ, 4ನೇ ಸ್ಥಾನದಲ್ಲಿರುವ ನಾಯಕ ರೋಹಿತ್ ಶರ್ಮಾ 746 ರೇಟಿಂಗ್ಸ್ ಹೊಂದಿದ್ದಾರೆ. ಇದರೊಂದಿಗೆ ಐಸಿಸಿ ಬ್ಯಾಟಿಂಗ್ ಏಕದಿನ ರ‍್ಯಾಂಕಿಂಗ್‌ನ ಅಗ್ರ 10ರಲ್ಲಿ ಭಾರತದ ಮೂವರು ಆಟಗಾರರು ಇದ್ದಂತ್ತಾಗಿದೆ.