ICC ODI rankings: ಅಗ್ರಸ್ಥಾನಕ್ಕೆ ಗಿಲ್ ಹತ್ತಿರ; ಅಗ್ರ ಐದರಲ್ಲಿ ಕೊಹ್ಲಿ..! ಡಿ ಕಾಕ್, ಕ್ಲಾಸೆನ್ಗೆ ಮುಂಬಡ್ತಿ
ICC ODI rankings: ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಪ್ರಕಟಿಸಿದ ಇತ್ತೀಚಿನ ಬ್ಯಾಟರ್ಗಳ ಶ್ರೇಯಾಂಕದಲ್ಲಿ ಗಿಲ್ 823 ರೇಟಿಂಗ್ ಅಂಕಗಳನ್ನು ಸಂಪಾದಿಸಿದ್ದು, ಸದ್ಯ ವಿಶ್ವದ ನಂ.1 ಬ್ಯಾಟ್ಸ್‌ಮನ್ ಆಗಿರುವ ಪಾಕಿಸ್ತಾನ ತಂಡದ ನಾಯಕ ಬಾಬರ್ ಆಝಂ ಅವರಿಗಿಂತ ಕೇವಲ ಆರು ಅಂಕಗಳನ್ನು ಕಡಿಮೆ ಹೊಂದಿದ್ದಾರೆ.
1 / 7
ಟೀಂ ಇಂಡಿಯಾದ ಯುವ ಬ್ಯಾಟ್ಸ್‌ಮನ್ ಶುಭ್ಮನ್ ಗಿಲ್ ಐಸಿಸಿ ಏಕದಿನ ರ್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಲು ಇನ್ನು ಕೆಲವೇ ಹೆಜ್ಜೆ ದೂರದಲ್ಲಿದ್ದಾರೆ.
2 / 7
ನಿನ್ನೆ ಅಂದರೆ ಬುಧವಾರ ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಪ್ರಕಟಿಸಿದ ಇತ್ತೀಚಿನ ಬ್ಯಾಟರ್ಗಳ ಶ್ರೇಯಾಂಕದಲ್ಲಿ ಗಿಲ್ 823 ರೇಟಿಂಗ್ ಅಂಕಗಳನ್ನು ಸಂಪಾದಿಸಿದ್ದು, ಸದ್ಯ ವಿಶ್ವದ ನಂ.1 ಬ್ಯಾಟ್ಸ್‌ಮನ್ ಆಗಿರುವ ಪಾಕಿಸ್ತಾನ ತಂಡದ ನಾಯಕ ಬಾಬರ್ ಆಝಂ ಅವರಿಗಿಂತ ಕೇವಲ ಆರು ಅಂಕಗಳನ್ನು ಕಡಿಮೆ ಹೊಂದಿದ್ದಾರೆ.
3 / 7
ಡೆಂಗ್ಯೂನಿಂದಾಗಿ ಗಿಲ್, ವಿಶ್ವಕಪ್ ಆರಂಭಿಕ ಪಂದ್ಯಗಳನ್ನು ಆಡಲಿಲ್ಲ. ಆದರೆ ಪಾಕ್ ವಿರುದ್ಧ ಕಣಕ್ಕಿಳಿದಿದ್ದ ಗಿಲ್, ಕೇವಲ 16 ರನ್‌ಗಳಿಗೆ ಇನ್ನಿಂಗ್ಸ್ ಮುಗಿಸಿದ್ದರು. ಆದರೆ ಬಾಂಗ್ಲಾದೇಶ ವಿರುದ್ಧ ಅರ್ಧಶತಕ (53) ಗಳಿಸುವ ಮೂಲಕ ಫಾರ್ಮ್‌ಗೆ ಮರಳಿದರು. ಇಲ್ಲಿಯವರೆಗೆ ಅವರು ಮೂರು ಇನ್ನಿಂಗ್ಸ್‌ಗಳಲ್ಲಿ ಒಟ್ಟು 95 ರನ್ ಗಳಿಸಿದ್ದಾರೆ.
4 / 7
ಗಿಲ್ ಹೊರತುಪಡಿಸಿ ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟ್ಸ್‌ಮನ್‌ಗಳಾದ ಕ್ವಿಂಟನ್ ಡಿ ಕಾಕ್ ಮತ್ತು ಹೆನ್ರಿಕ್ ಕ್ಲಾಸೆನ್ ಬುಧವಾರ ಐಸಿಸಿ ಪ್ರಕಟಿಸಿದ ಏಕದಿನ ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ಧೂಳೆಬ್ಬಿಸಿದ್ದಾರೆ. 2023ರ ಏಕದಿನ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಮೂರನೇ ಶತಕ ದಾಖಲಿಸಿದ್ದ ಡಿ ಕಾಕ್ ಮೂರು ಸ್ಥಾನ ಮೇಲಕ್ಕೇರಿ ಮೂರನೇ ಶ್ರೇಯಾಂಕ ಪಡೆದಿದ್ದಾರೆ.
5 / 7
ಅದೇ ರೀತಿ.. ಆರಂಭದಿಂದಲೂ ಅದ್ಭುತ ಇನ್ನಿಂಗ್ಸ್ ಆಡುತ್ತಿರುವ ಕ್ಲಾಸೆನ್ ಬಾಂಗ್ಲಾದೇಶ ವಿರುದ್ಧ 90 ರನ್ ಗಳಿಸಿ ಇತ್ತೀಚಿನ ರ‍್ಯಾಂಕಿಂಗ್‌ನಲ್ಲಿ ನಾಲ್ಕು ಸ್ಥಾನ ಸುಧಾರಿಸಿ ನಾಲ್ಕನೇ ಶ್ರೇಯಾಂಕ ಪಡೆದಿದ್ದಾರೆ.
6 / 7
ಇನ್ನೊಂದೆಡೆ.. ಟೀಂ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, ನ್ಯೂಜಿಲೆಂಡ್ ವಿರುದ್ಧದ 95 ರನ್ಗಳ ಅಮೋಘ ಇನ್ನಿಂಗ್ಸ್ನ ಲಾಭ ಪಡೆದು ಅಗ್ರ ಐದರೊಳಗೆ ಸ್ಥಾನ ಪಡೆದಿದ್ದಾರೆ.
7 / 7
ಭಾರತ ತಂಡದ ನಾಯಕ ರೋಹಿತ್ ಶರ್ಮಾ ಒಂದು ಸ್ಥಾನ ಸುಧಾರಿಸಿ ಎಂಟನೇ ರ್ಯಾಂಕ್ ಪಡೆದುಕೊಂಡಿದ್ದಾರೆ.