ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ICC) ಪುರುಷರ ಏಕದಿನ ಬ್ಯಾಟರ್ ರ‍್ಯಾಕಿಂಗ್ ಪಟ್ಟಿಯನ್ನು ಪ್ರಕಟಿಸಿದೆ. ನೂತನ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಇಬ್ಬರು ಆಟಗಾರರು ಸ್ಥಾನ ಪಡೆದಿದ್ದಾರೆ.
ಅತ್ತ ಪಾಕಿಸ್ತಾನ್ ನಾಯಕ ಬಾಬರ್ ಆಜಂ ಈ ಬಾರಿ ಕೂಡ ಅಗ್ರಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ದದ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ ಕಳೆದ ಬಾರಿಯ ರ‍್ಯಾಕಿಂಗ್ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಸೌತ್ ಆಫ್ರಿಕಾ ಸರಣಿಯಿಂದ ಹೊರಗುಳಿದಿದ್ದ ರೋಹಿತ್ ಶರ್ಮಾ ಅವರ ಸ್ಥಾನದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಅದರಂತೆ ಇದೀಗ ಹಿಟ್ಮ್ಯಾನ್ ಹಾಗೂ ಕಿಂಗ್ ಕೊಹ್ಲಿ ನಡುವೆ ಪೈಪೋಟಿ ಇದೆ. ಹಾಗಿದ್ರೆ ಟಾಪ್ 10 ನಲ್ಲಿ ಯಾರೆಲ್ಲಾ ಇದ್ದಾರೆ ನೋಡೋಣ.
1- ಬಾಬರ್ ಆಜಂ (ಪಾಕಿಸ್ತಾನ್)- 873 ಅಂಕ
2- ವಿರಾಟ್ ಕೊಹ್ಲಿ (ಭಾರತ)- 836 ಅಂಕ
3- ರೋಹಿತ್ ಶರ್ಮಾ (ಭಾರತ)- 801 ಅಂಕ
4- ರಾಸ್ ಟೇಲರ್ (ನ್ಯೂಜಿಲೆಂಡ್)- 801 ಅಂಕ
5- ಕ್ವಿಂಟನ್ ಡಿಕಾಕ್ (ಸೌತ್ ಆಫ್ರಿಕಾ)- 783 ಅಂಕ
6- ಆರೋನ್ ಫಿಂಚ್ (ಆಸ್ಟ್ರೇಲಿಯಾ)- 779 ಅಂಕ
7- ಜಾನಿ ಬೈರ್ಸ್ಟೋವ್ (ಇಂಗ್ಲೆಂಡ್)- 775 ಅಂಕ
8- ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ)- 762 ಅಂಕ
9- ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್)- 754 ಅಂಕ
10- ರಸ್ಸಿ ವಂಡೆರ್ ಡುಸ್ಸೆನ್ (ದಕ್ಷಿಣ ಆಫ್ರಿಕಾ)- 750 ಅಂಕ
Published On - 3:58 pm, Wed, 26 January 22