ICC Rankings: ಟಿ20 ವಿಶ್ವಕಪ್ ಗೆದ್ದರೂ ಟಿ20 ರ‍್ಯಾಂಕಿಂಗ್​ನಲ್ಲಿ ಜಾರಿದ ಟೀಂ ಇಂಡಿಯಾ ವೇಗಿಗಳು..!

|

Updated on: Jul 11, 2024 | 10:49 PM

ICC Rankings: ಟಿ20 ವಿಶ್ವಕಪ್​ನಲ್ಲಿ ಯಾವೊಬ್ಬ ಬ್ಯಾಟರ್​ಗೂ ಸ್ಥಿರ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಆದರೆ ತಂಡದ ಬೌಲಿಂಗ್ ವಿಭಾಗ ಮಾತ್ರ ಅದ್ಭುತ ಪ್ರದರ್ಶನ ನೀಡಿತ್ತು. ಹೀಗಾಗಿಯೇ ತಂಡ ಅಜೇಯ ಓಟ ಮುಂದುವರೆಸಲು ಸಾಧ್ಯವಾಗಿತ್ತು. ಆದರೆ ಈ ಅದ್ಭುತ ಪ್ರದರ್ಶನದ ಹೊರತಾಗಿಯೂ ಟೀಂ ಇಂಡಿಯಾ ವೇಗಿಗಳು ಟಿ20 ರ‍್ಯಾಂಕಿಂಗ್​ನಲ್ಲಿ ಕುಸಿತ ಕಂಡಿದ್ದಾರೆ.

1 / 9
ಟಿ20 ವಿಶ್ವಕಪ್ ಫೈನಲ್​ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಟೀಂ ಇಂಡಿಯಾ ಎರಡನೇ ಬಾರಿಗೆ ಟಿ20 ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇಡೀ ಟೂರ್ನಿಯಲ್ಲಿ ಭಾರತ ಅಜೇಯವಾಗಿದ್ದನ್ನು ಗಮನಿಸಿದಾಗ ತಂಡದ ಸಮತೋಲದನ ಪ್ರದರ್ಶನ ಹೇಗಿತ್ತು ಎಂಬುದನ್ನು ಅರಿಯಬಹುದಾಗಿದೆ.

2 / 9
ಅದಾಗ್ಯೂ ಇಡೀ ಟೂರ್ನಿಯಲ್ಲಿ ಟೀಂ ಇಂಡಿಯಾದ ಬ್ಯಾಟಿಂಗ್ ವಿಭಾಗ ಸಾಕಷ್ಟು ಏರಿಳಿತಗಳಿಂದ ಕೂಡಿತ್ತು. ಯಾವೊಬ್ಬ ಬ್ಯಾಟರ್​ಗೂ ಸ್ಥಿರ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಆದರೆ ತಂಡದ ಬೌಲಿಂಗ್ ವಿಭಾಗ ಮಾತ್ರ ಅದ್ಭುತ ಪ್ರದರ್ಶನ ನೀಡಿತ್ತು. ಹೀಗಾಗಿಯೇ ತಂಡ ಅಜೇಯ ಓಟ ಮುಂದುವರೆಸಲು ಸಾಧ್ಯವಾಗಿತ್ತು. ಆದರೆ ಈ ಅದ್ಭುತ ಪ್ರದರ್ಶನದ ಹೊರತಾಗಿಯೂ ಟೀಂ ಇಂಡಿಯಾ ವೇಗಿಗಳು ಟಿ20 ರ‍್ಯಾಂಕಿಂಗ್​ನಲ್ಲಿ ಕುಸಿತ ಕಂಡಿದ್ದಾರೆ.

3 / 9
ಜಸ್ಪ್ರೀತ್ ಬುಮ್ರಾ: ಟಿ20 ವಿಶ್ವಕಪ್‌ನಲ್ಲಿ ಅದ್ಭುತ ಬೌಲಿಂಗ್ ಮಾಡಿ ಪಂದ್ಯಾವಳಿಯ ಆಟಗಾರ ಪ್ರಶಸ್ತಿ ಪಡೆದಿದ್ದ ಬುಮ್ರಾ ಒಟ್ಟು 15 ವಿಕೆಟ್ ಪಡೆದಿದ್ದರು. ಆದರೆ ಐಸಿಸಿ ಟಿ20 ಶ್ರೇಯಾಂಕದಲ್ಲಿ 2 ಸ್ಥಾನ ಕುಸಿದು 627 ರೇಟಿಂಗ್ ಪಾಯಿಂಟ್‌ಗಳೊಂದಿಗೆ 14ನೇ ಸ್ಥಾನಕ್ಕೆ ತಲುಪಿದ್ದಾರೆ.

4 / 9
ಅರ್ಷದೀಪ್ ಸಿಂಗ್: 2024ರ ಟಿ20 ವಿಶ್ವಕಪ್‌ನಲ್ಲಿ ಅರ್ಷದೀಪ್ ಸಿಂಗ್ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಟೀಂ ಇಂಡಿಯಾ ಪರ ಒಟ್ಟು 15 ವಿಕೆಟ್ ಕಬಳಿಸಿದ್ದ ಅರ್ಷದೀಪ್ ಐಸಿಸಿ ಟಿ20 ಶ್ರೇಯಾಂಕದಲ್ಲಿ ಐದು ಸ್ಥಾನ ಕಳೆದುಕೊಂಡು 622 ರೇಟಿಂಗ್ ಪಾಯಿಂಟ್‌ಗಳೊಂದಿಗೆ 19ನೇ ಸ್ಥಾನದಲ್ಲಿದ್ದಾರೆ.

5 / 9
ಅಕ್ಷರ್ ಪಟೇಲ್: ಪ್ರಸ್ತುತ ಐಸಿಸಿ ಟಿ20 ಬೌಲರ್‌ಗಳ ಶ್ರೇಯಾಂಕದಲ್ಲಿ ಅಕ್ಷರ್ ಪಟೇಲ್ ಎರಡು ಸ್ಥಾನ ಕುಸಿದಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ 9 ವಿಕೆಟ್‌ಗಳನ್ನು ಕಬಳಿಸಿದ್ದ ಅಕ್ಷರ್, 644 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಸದ್ಯ 9ನೇ ಸ್ಥಾನದಲ್ಲಿದ್ದಾರೆ.

6 / 9
ಕುಲ್ದೀಪ್ ಯಾದವ್: 2024ರ ಟಿ20 ವಿಶ್ವಕಪ್‌ನಲ್ಲಿ ಸೂಪರ್-8ಸುತ್ತಿನಿಂದ ತಂಡದಲ್ಲಿ ಅವಕಾಶ ಪಡೆದಿದ್ದ ಕುಲ್ದೀಪ್ ಒಟ್ಟು 10 ವಿಕೆಟ್ ಉರುಳಿಸಿದ್ದರು. ಅದಾಗ್ಯೂ ಐಸಿಸಿ ಟಿ20 ರ್ಯಾಂಕಿಂಗ್‌ನಲ್ಲಿ 3 ಸ್ಥಾನ ಕುಸಿದಿರುವ ಅವರು 641 ರೇಟಿಂಗ್ ಪಾಯಿಂಟ್ಸ್​ನೊಂದಿಗೆ 11ನೇ ಸ್ಥಾನಕ್ಕೆ ತಲುಪಿದ್ದಾರೆ.

7 / 9
ಹಾರ್ದಿಕ್ ಪಾಂಡ್ಯ: 2024ರ ಟಿ20 ವಿಶ್ವಕಪ್‌ನಲ್ಲಿ ಒಟ್ಟು 10 ವಿಕೆಟ್‌ಗಳನ್ನು ಕಬಳಿಸಿದ್ದ ಪಾಂಡ್ಯ, ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಕೊನೆಯ ಓವರ್ ಬೌಲ್ ಮಾಡಿ ಟೀಂ ಇಂಡಿಯಾಗೆ ಜಯ ತಂದುಕೊಟ್ಟಿದ್ದರು. ಆದರೆ ಟಿ20 ರ್ಯಾಂಕಿಂಗ್‌ನಲ್ಲಿ 4 ಸ್ಥಾನ ಕುಸಿದಿರುವ ಪಾಂಡ್ಯ 475 ರೇಟಿಂಗ್ ಪಾಯಿಂಟ್‌ಗಳೊಂದಿಗೆ 57ನೇ ಸ್ಥಾನಕ್ಕೆ ತಲುಪಿದ್ದಾರೆ.

8 / 9
ರವೀಂದ್ರ ಜಡೇಜಾ: 2024 ರ ಟಿ20 ವಿಶ್ವಕಪ್‌ನಲ್ಲಿ ಎಲ್ಲಾ ಪಂದ್ಯಗಳನ್ನು ಆಡಿರುವ ರವೀಂದ್ರ ಜಡೇಜಾ ಟಿ20 ಶ್ರೇಯಾಂಕದಲ್ಲಿ ಪ್ರಸ್ತುತ 44 ರೇಟಿಂಗ್ ಪಾಯಿಂಟ್​ಗಳೊಂದಿಗೆ ನಾಲ್ಕು ಸ್ಥಾನ ಕುಸಿದು 90ನೇ ಸ್ಥಾನಕ್ಕೆ ತಲುಪಿದ್ದಾರೆ. ಅಲ್ಲದೆ ಆಲ್ ರೌಂಡರ್​ಗಳ ಶ್ರೇಯಾಂಕದಲ್ಲೂ ರವೀಂದ್ರ ಜಡೇಜಾ ಕುಸಿತ ಅನುಭವಿಸಿದ್ದಾರೆ.

9 / 9
ಮೊಹಮ್ಮದ್ ಸಿರಾಜ್: ಐಸಿಸಿ ಟಿ20 ಶ್ರೇಯಾಂಕದಲ್ಲಿ ಒಂದು ಸ್ಥಾನ ಕಳೆದುಕೊಂಡಿರುವ ಸಿರಾಜ್ 435 ರೇಟಿಂಗ್ ಪಾಯಿಂಟ್‌ಗಳೊಂದಿಗೆ 73 ನೇ ಸ್ಥಾನದಲ್ಲಿದ್ದಾರೆ. 2024ರ ಟಿ20 ವಿಶ್ವಕಪ್‌ನಲ್ಲಿ ಸಿರಾಜ್ ಕೇವಲ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಆದರೆ ಸಿರಾಜ್​ಗೆ ಸೂಪರ್-8 ಸುತ್ತಿನಲ್ಲಿ ಆಡುವ ಅವಕಾಶ ಸಿಗಲಿಲ್ಲ.