ICC Rankings: ಇತಿಹಾಸ ಸೃಷ್ಟಿಸಿದ ಟೀಂ ಇಂಡಿಯಾ; ಮೂರು ಮಾದರಿಯಲ್ಲೂ ಭಾರತವೇ ನಂ.1..!
TV9 Web | Updated By: ಪೃಥ್ವಿಶಂಕರ
Updated on:
Feb 15, 2023 | 2:27 PM
ICC Rankings: ಟೀಂ ಇಂಡಿಯಾ ಈ ಹಿಂದೆ ಏಕದಿನ ಮತ್ತು ಟಿ20 ಮಾದರಿಯಲ್ಲಿ ನಂ. 1 ಆಗಿತ್ತು. ಈಗ ರೋಹಿತ್ ಬಳಗ ಟೆಸ್ಟ್‌ನಲ್ಲೂ ನಂ. 1 ಆಗಿದೆ. ಅಂದರೆ ಈಗ ಟೀಂ ಇಂಡಿಯಾ ಎಲ್ಲಾ ಮೂರು ಸ್ವರೂಪಗಳಲ್ಲಿ ನಂಬರ್ 1 ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
1 / 6
ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಹೀನಾಯವಾಗಿ ಸೋಲಿಸಿದ ಟೀಂ ಇಂಡಿಯಾ ಐಸಿಸಿ ಟೆಸ್ಟ್ ರ್ಯಾಂಕಿಂಗ್ನಲ್ಲಿ ದೊಡ್ಡ ಮೈಲಿಗಲ್ಲು ಸಾಧಿಸಿದೆ. ಮೊದಲ ಟೆಸ್ಟ್‌ನಲ್ಲಿ ಭರ್ಜರಿ ಜಯ ಸಾಧಿಸಿದ ಭಾರತ ಕ್ರಿಕೆಟ್ ತಂಡ ಇದೀಗ ವಿಶ್ವದ ನಂಬರ್ 1 ಟೆಸ್ಟ್ ತಂಡ ಎನಿಸಿಕೊಂಡಿದೆ.
2 / 6
ಟೀಂ ಇಂಡಿಯಾ ಈ ಹಿಂದೆ ಏಕದಿನ ಮತ್ತು ಟಿ20 ಮಾದರಿಯಲ್ಲಿ ನಂ. 1 ಆಗಿತ್ತು. ಈಗ ರೋಹಿತ್ ಬಳಗ ಟೆಸ್ಟ್‌ನಲ್ಲೂ ನಂ. 1 ಆಗಿದೆ. ಅಂದರೆ ಈಗ ಟೀಂ ಇಂಡಿಯಾ ಎಲ್ಲಾ ಮೂರು ಸ್ವರೂಪಗಳಲ್ಲಿ ನಂಬರ್ 1 ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
3 / 6
ಇತ್ತೀಚಿಗೆ ಐಸಿಸಿ ಬಿಡುಗಡೆ ಮಾಡಿರುವ ಟೆಸ್ಟ್ ಶ್ರೇಯಾಂಕದ ಪ್ರಕಾರ, ಭಾರತ 115 ರೇಟಿಂಗ್ ಪಾಯಿಂಟ್‌ಗಳೊಂದಿಗೆ ನಂಬರ್ 1 ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ ತಂಡ 111 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನಕ್ಕೆ ಕುಸಿದಿದೆ. ಇಂಗ್ಲೆಂಡ್ ತಂಡ ಮೂರನೇ ಸ್ಥಾನದಲ್ಲಿದೆ.
4 / 6
ಐಸಿಸಿ ರ್ಯಾಂಕಿಂಗ್ ಪ್ರಿಡಿಕ್ಟರ್ ಪ್ರಕಾರ, ಭಾರತವು ದೀರ್ಘಕಾಲದವರೆಗೆ ಟೆಸ್ಟ್ ಶ್ರೇಯಾಂಕದಲ್ಲಿ ನಂಬರ್ 1 ಸ್ಥಾನದಲ್ಲಿ ಉಳಿಯಲು ತನ್ನ ಗೆಲುವಿನ ಸರಣಿಯನ್ನು ಮುಂದುವರಿಸಬೇಕಾಗಿದೆ. ಭಾರತ ಈ ಟೆಸ್ಟ್ ಸರಣಿಯನ್ನು 4-0 ಅಂತರದಿಂದ ಗೆದ್ದರೆ, ಅದು ನಂಬರ್ 1 ಸ್ಥಾನದಲ್ಲಿ ಉಳಿಯುತ್ತದೆ. ಹಾಗೆಯೇ ಆಸ್ಟ್ರೇಲಿಯಾ ಮೂರನೇ ಸ್ಥಾನಕ್ಕೆ ಕುಸಿಯಲಿದೆ.
5 / 6
ಅದೇ ಸಮಯದಲ್ಲಿ ಆಸ್ಟ್ರೇಲಿಯ ಮತ್ತೆ ನಂಬರ್ 1 ಸ್ಥಾನಕ್ಕೆ ಬರಲು ಸರಣಿ ಗೆಲ್ಲಲೇಬೇಕು. ಈ ಸರಣಿಯಲ್ಲಿ ಆಸ್ಟ್ರೇಲಿಯ 2-1 ಅಂತರದಲ್ಲಿ ಗೆದ್ದರೆ ಮತ್ತೊಮ್ಮೆ ಟೆಸ್ಟ್ ತಂಡವಾಗಿ ನಂ.1 ಸ್ಥಾನಕ್ಕೇರಲಿದೆ. ಮತ್ತೊಂದೆಡೆ, ಈ ಸರಣಿ ಡ್ರಾಗೊಂಡರೆ, ಭಾರತ ಇನ್ನೂ ನಂಬರ್ 1 ಸ್ಥಾನವನ್ನು ಉಳಿಸಿಕೊಳ್ಳಲಿದೆ.
6 / 6
ಇನ್ನು ಏಕದಿನ ಮಾದರಿಯಲ್ಲಿ 114 ರೇಟಿಂಗ್ ಹೊಂದಿರುವ ಟೀಂ ಇಂಡಿಯಾ 3572 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಟಿ20 ರ್ಯಾಂಕಿಂಗ್ನಲ್ಲೂ 267 ರೇಟಿಂಗ್ ಹೊಂದಿರುವ ರೋಹಿತ್ ಪಡೆ 18,445 ಅಂಕಗಳೊಂದಿಗೆ ನಂ.1 ಪಟ್ಟವನ್ನು ಅಲಂಕರಿಸಿದೆ.
Published On - 2:14 pm, Wed, 15 February 23