ICC Test Rankings: ಟಾಪ್ 2ಕ್ಕೆ ಬ್ರೂಕ್ ಎಂಟ್ರಿ; ಮೂವರು ಭಾರತೀಯರ ಸ್ಥಾನ ಪಲ್ಲಟ

|

Updated on: Oct 16, 2024 | 7:15 PM

ICC Test Rankings: ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಟ್ರಿಪಲ್ ಸೆಂಚುರಿ ಸಿಡಿಸಿದ್ದ ಹ್ಯಾರಿ ಬ್ರೂಕ್, ಇತ್ತೀಚಿನ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಭರ್ಜರಿ ಜಿಗಿತ ಸಾಧಿಸಿದರೆ, ಟೀಂ ಇಂಡಿಯಾದ ಇಬ್ಬರು ಆಟಗಾರರಾದ ಯಶಸ್ವಿ ಜೈಸ್ವಾಲ್ ಹಾಗೂ ವಿರಾಟ್ ಕೊಹ್ಲಿ ಒಂದೊಂದು ಸ್ಥಾನ ಕುಸಿತ ಕಂಡಿದ್ದಾರೆ.

1 / 5
ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ನಡುವೆ ಐಸಿಸಿ ನೂತನ ಟೆಸ್ಟ್ ರ್ಯಾಂಕಿಂಗ್ ಪ್ರಕಟ ಮಾಡಿದೆ. ಅದರಂತೆ ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ದಾಖಲೆಯ ತ್ರಿಶತಕದ ಇನ್ನಿಂಗ್ಸ್ ಆಡಿದ್ದ ಇಂಗ್ಲೆಂಡ್‌ ಸ್ಫೋಟಕ ಬ್ಯಾಟರ್ ಹ್ಯಾರಿ ಬ್ರೂಕ್ ನೂತನ ರ್ಯಾಂಕಿಂಗ್​ನಲ್ಲಿ ಭರ್ಜರಿ ಮುಂಬಡ್ತಿ ಪಡೆದಿದ್ದಾರೆ.

2 / 5
ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಟ್ರಿಪಲ್ ಸೆಂಚುರಿ ಸಿಡಿಸಿದ್ದ ಹ್ಯಾರಿ ಬ್ರೂಕ್, ಇತ್ತೀಚಿನ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಭರ್ಜರಿ ಜಿಗಿತ ಕಂಡಿದ್ದು,  ಬರೋಬ್ಬರಿ 11 ಸ್ಥಾನ ಮೇಲೇರಿ ಜಂಟಿಯಾಗಿ ಎರಡನೇ ಸ್ಥಾನವನ್ನು ಅಲಂಕರಿಸಿದ್ದಾರೆ. ಪಾಕಿಸ್ತಾನ ವಿರುದ್ಧದ ಸರಣಿ ಆರಂಭಕ್ಕೂ ಮುನ್ನ 13ನೇ ಸ್ಥಾನದಲ್ಲಿದ್ದ ಬ್ರೂಕ್ ಇದೀಗ ಟಾಪ್ ಎರಡಕ್ಕೆ ಎಂಟ್ರಿಕೊಟ್ಟಿದ್ದಾರೆ.

3 / 5
ಬ್ರೂಕ್ ಟಾಪ್ 10 ರೊಳಗೆ ಎಂಟ್ರಿಕೊಡುವುದರೊಂದಿಗೆ ಟೀಂ ಇಂಡಿಯಾ ಆಟಗಾರರು ಹಿನ್ನಡೆ ಅನುಭವಿಸಬೇಕಾಗಿದೆ. ಅದರಂತೆ ಟೀಂ ಇಂಡಿಯಾದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದಾರೆ.

4 / 5
ಜೈಸ್ವಾಲ್ ಅಲ್ಲದೆ ಟೀಂ ಇಂಡಿಯಾದ ಇನ್ನಿಬ್ಬರು ಆಟಗಾರರು ಕುಸಿತ ಕಂಡಿದ್ದು, ವಿರಾಟ ಕೊಹ್ಲಿ ಕೂಡ ಒಂದು ಸ್ಥಾನ ಕುಸಿತ ಕಂಡಿದ್ದಾರೆ. ಈ ಹಿಂದೆ 6ನೇ ಸ್ಥಾನದಲ್ಲಿದ್ದ ವಿರಾಟ್ ಕೊಹ್ಲಿ ಇದೀಗ 1 ಸ್ಥಾನ ಕಳೆದುಕೊಂಡಿದ್ದು 7ನೇ ಸ್ಥಾನಕ್ಕೆ ಜಾರಿದ್ದಾರೆ. ಉಳಿದಂತೆ ರಿಷಬ್ ಪಂತ್ 9ನೇ ಸ್ಥಾನದಲ್ಲಿದ್ದಾರೆ.

5 / 5
ಇನ್ನು ಪಾಕಿಸ್ತಾನದ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ 262 ರನ್‌ಗಳ ಇನ್ನಿಂಗ್ಸ್‌ ಆಡಿದ್ದ ಜೋ ರೂಟ್ ಇತ್ತೀಚಿನ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಭಾರಿ ಲಾಭ ಗಳಿಸಿದ್ದಾರೆ. ಅದರಂತೆ ಜೋ ರೂಟ್ 932 ರೇಟಿಂಗ್‌ ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿ ಮುಂದುವರಿದರೆ, ಕೇನ್ ವಿಲಿಯಮ್ಸನ್ 829 ರೇಟಿಂಗ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.