ICC Rankings: ಟೆಸ್ಟ್ ಕ್ರಿಕೆಟ್ನಲ್ಲಿ ಅಶ್ವಿನ್ ನಂ.2; ಕ್ರಿಕೆಟ್ನಿಂದ ದೂರವಿದ್ದರೂ ಪಂತ್ಗಿಲ್ಲ ಸರಿಸಾಟಿ..!
TV9 Web | Updated By: ಪೃಥ್ವಿಶಂಕರ
Updated on:
Feb 15, 2023 | 5:56 PM
ICC Rankings: ಐಸಿಸಿ ಬ್ಯಾಟ್ಸ್ಮನ್, ಬೌಲರ್ ಹಾಗೂ ಆಲ್ರೌಂಡರ್ಗಳ ವಿಭಾಗದಲ್ಲೂ ಟೀಂ ಇಂಡಿಯಾ ಆಟಗಾರರು ಭರ್ಜರಿ ಮುಂಬಡ್ತಿ ಪಡೆದಿದ್ದಾರೆ. ಹಾಗಿದ್ದರೆ ಯಾವ ಆಟಗಾರ ಬಂಪರ್ ಹೊಡೆದಿದೆ ಎಂಬುದರ ವಿವರ ಹೀಗಿದೆ.
1 / 11
ಐಸಿಸಿ ಬಿಡುಗಡೆ ಮಾಡಿರುವ ನೂತನ ಟೆಸ್ಟ್ ರ್ಯಾಂಕಿಂಗ್ನಲ್ಲಿ ಟೀಂ ಇಂಡಿಯಾ ನಂ.1 ಟೆಸ್ಟ್ ತಂಡ ಎನಿಸಿಕೊಂಡಿದೆ. ಇದರೊಂದಿಗೆ ಕ್ರಿಕೆಟ್ನ ಮೂರು ಮಾದರಿಯಲ್ಲೂ ಅಗ್ರಸ್ಥಾನಕ್ಕೇರಿದೆ.
2 / 11
ಅಲ್ಲದೆ ಐಸಿಸಿ ಬ್ಯಾಟ್ಸ್ಮನ್, ಬೌಲರ್ ಹಾಗೂ ಆಲ್ರೌಂಡರ್ಗಳ ವಿಭಾಗದಲ್ಲೂ ಟೀಂ ಇಂಡಿಯಾ ಆಟಗಾರರು ಭರ್ಜರಿ ಮುಂಬಡ್ತಿ ಪಡೆದಿದ್ದಾರೆ. ಹಾಗಿದ್ದರೆ ಯಾವ ಆಟಗಾರ ಬಂಪರ್ ಹೊಡೆದಿದೆ ಎಂಬುದರ ವಿವರ ಹೀಗಿದೆ.
3 / 11
ಬ್ಯಾಟ್ಸ್ಮನ್ಗಳ ವಿಚಾರಕ್ಕೆ ಬಂದರೆ ಭಾರತೀಯ ನಾಯಕ ರೋಹಿತ್ ಶರ್ಮಾ ನಾಗ್ಪುರದಲ್ಲಿ ಶತಕದ ಲಾಭ ಪಡೆದಿದ್ದು, 10ನೇ ಸ್ಥಾನದಿಂದ 8ನೇ ಸ್ಥಾನಕ್ಕೆ ಏರಿದ್ದಾರೆ.
4 / 11
ಇನ್ನು 48 ದಿನಗಳ ಹಿಂದೆ ಕಾರು ಅಪಘಾತಕ್ಕೊಳಗಾಗಿ ಕ್ರಿಕೆಟ್ನಿಂದ ದೂರ ಉಳಿದಿರುವ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಬ್ ಪಂತ್ ಏಳನೇ ಸ್ಥಾನದಲ್ಲಿಯೇ ಮುಂದುವರೆದಿದ್ದಾರೆ.
5 / 11
ಹಾಗೆಯೇ ಆಸ್ಟ್ರೇಲಿಯದ ಮಾರ್ನಸ್ ಲಬುಶೇನ್ ಮತ್ತು ಸ್ಟೀವ್ ಸ್ಮಿತ್ ಮೊದಲ ಎರಡು ಸ್ಥಾನಗಳಲ್ಲಿದ್ದರೆ, ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಮೂರನೇ ಸ್ಥಾನದಲ್ಲಿದ್ದಾರೆ.
6 / 11
ಭಾರತ ವಿರುದ್ಧ ಕಳಪೆ ಆಟ ಪ್ರದರ್ಶಿಸಿದ ಡೇವಿಡ್ ವಾರ್ನರ್ ಆರು ಸ್ಥಾನಗಳನ್ನು ಕಳೆದುಕೊಂಡು 20 ನೇ ಸ್ಥಾನಕ್ಕೆ ಇಳಿದಿದ್ದು, ಖವಾಜಾ ಎರಡು ಸ್ಥಾನಗಳನ್ನು ಕಳೆದುಕೊಂಡು 10 ನೇ ಸ್ಥಾನಕ್ಕೆ ಬಂದಿದ್ದಾರೆ.
7 / 11
ಇನ್ನು ಬೌಲರ್‌ಗಳ ವಿಚಾರದಲ್ಲಿ ಆಸೀಸ್ ವಿರುದ್ಧ ವಿಕೆಟ್ಗಳ ಬೇಟೆ ಆಡಿದ್ದ ಆರ್ ಅಶ್ವಿನ್ ಟೆಸ್ಟ್ ಬೌಲರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ತಲುಪಿದ್ದಾರೆ.
8 / 11
ಮತ್ತೊಂದೆಡೆ, ಮೊಣಕಾಲಿನ ಗಾಯದಿಂದ ಸುಮಾರು ಐದು ತಿಂಗಳ ನಂತರ ತಂಡಕ್ಕೆ ಮರಳಿರುವ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ 16 ನೇ ಸ್ಥಾನಕ್ಕೆ ತಲುಪಿದ್ದಾರೆ.
9 / 11
ಟೆಸ್ಟ್ ಬೌಲರ್‌ಗಳ ಶ್ರೇಯಾಂಕದಲ್ಲಿ ಆಸ್ಟ್ರೇಲಿಯದ ನಾಯಕ ಪ್ಯಾಟ್ ಕಮಿನ್ಸ್ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.
10 / 11
ಭಾರತದ ಇತರ ಬೌಲರ್‌ಗಳ ಪೈಕಿ, ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಕಳೆದ ವರ್ಷ ಸೆಪ್ಟೆಂಬರ್‌ನಿಂದ ಗಾಯದ ಕಾರಣ ತಂಡದಿಂದ ಹೊರಗುಳಿದಿದ್ದು, ಶ್ರೇಯಾಂಕದಲ್ಲಿ ಐದನೇ ಸ್ಥಾನದಲ್ಲಿದ್ದಾರೆ.
11 / 11
ಭಾರತದ ಆಲ್ ರೌಂಡರ್ ಅಕ್ಷರ್ ಪಟೇಲ್ ಟೆಸ್ಟ್ ಆಲ್ ರೌಂಡರ್ ರ ್ಯಾಂಕಿಂಗ್ನಲ್ಲಿ ಆರು ಸ್ಥಾನ ಮೇಲೇರಿ ಏಳನೇ ಸ್ಥಾನಕ್ಕೆ ತಲುಪಿದ್ದಾರೆ.
Published On - 5:54 pm, Wed, 15 February 23