
ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಶನಿವಾರ ಭಾರತ ಮತ್ತೊಂದು ಸೋಲು ಕಂಡಿದೆ. ಆಸ್ಟ್ರೇಲಿಯಾ ಆರು ವಿಕೆಟ್‌ಗಳಿಂದ ಭಾರತವನ್ನು ಸೋಲಿಸಿತು. ಈ ಬಾರಿಯ ವಿಶ್ವಕಪ್‌ನಲ್ಲಿ ಭಾರತಕ್ಕೆ ಇದು ಮೂರನೇ ಸೋಲು ಮತ್ತು ಇದರೊಂದಿಗೆ ಸೆಮಿಫೈನಲ್ ಹಾದಿ ಮತ್ತಷ್ಟು ಕಷ್ಟಕರವಾಗಿದೆ. ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 50 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 277 ರನ್ ಗಳಿಸಿತು. ಉತ್ತರವಾಗಿ ಆಸ್ಟ್ರೇಲಿಯಾ 49.3 ಓವರ್‌ಗಳಲ್ಲಿ ಗುರಿ ತಲುಪಿತು. ಬೃಹತ್ ಸ್ಕೋರ್ ಗಳಿಸಿದರು ಭಾರತ ಸೋತಿದ್ಯಾಕೆ? ಇಲ್ಲಿದೆ ವಿವರ

ಭಾರತೀಯ ಬೌಲರ್‌ಗಳು ಆರಂಭದಲ್ಲಿ ತಂಡಕ್ಕೆ ಯಶಸ್ಸು ನೀಡುವಲ್ಲಿ ವಿಫಲರಾದರು. ಆಸ್ಟ್ರೇಲಿಯದ ರಾಚೆಲ್ ಹೇನ್ಸ್ ಮತ್ತು ಅಲಿಸ್ಸಾ ಹೀಲಿ ತಂಡಕ್ಕೆ ಬಲಿಷ್ಠ ಆರಂಭ ನೀಡಿ ಮೊದಲ ವಿಕೆಟ್‌ಗೆ 121 ರನ್‌ಗಳ ಜತೆಯಾಟ ನಡೆಸಿ ತಂಡದ ಗೆಲುವಿಗೆ ಅಡಿಪಾಯ ಹಾಕಿದರು.



Published On - 2:38 pm, Sat, 19 March 22