0,0,0.. ಭಾರತಕ್ಕೆ ಆಘಾತ; ಖಾತೆಯನ್ನೇ ತೆರೆಯದ ಕಿಶನ್, ರೋಹಿತ್, ಶ್ರೇಯಸ್..!

|

Updated on: Oct 08, 2023 | 7:30 PM

ICC World Cup 2023: ಆಸ್ಟ್ರೇಲಿಯಾ ನೀಡಿದ ಅಲ್ಪ ಗುರಿಯನ್ನು ಬೆನ್ನಟ್ಟಿರುವ ಟೀಂ ಇಂಡಿಯಾ ಆರಂಭದಲ್ಲೇ ಆಘಾತ ಎದುರಿಸಿದೆ. ಮೊದಲ ಎರಡು ಓವರ್​ಗಳಲ್ಲೇ ತಂಡದ ಮೂರು ವಿಕೆಟ್ ಶೂನ್ಯಕ್ಕೆ ಪತನವಾಗಿದೆ. ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಇಶಾನ್ ಕಿಶನ್, ನಾಯಕ ರೋಹಿತ್ ಶರ್ಮಾ ಹಾಗೂ ಶ್ರೇಯಸ್ ಅಯ್ಯರ್​ಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ.

1 / 8
ಚೆನ್ನೈನ ಚೆಪಾಕ್‌ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ವಿಶ್ವಕಪ್​ನಲ್ಲಿ ಸಮಬಲದ ಹೋರಾಟ ಕಂಡುಬರುತ್ತಿದೆ. ಆಸೀಸ್ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿದ ಭಾರತ, ಗುರಿ ಬೆನ್ನಟ್ಟುವಲ್ಲಿ ಎಡವಿದೆ.

2 / 8
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವನ್ನು ಕೇವಲ 199 ರನ್​ಗಳಿಗೆ ಟೀಂ ಇಂಡಿಯಾ ಕಟ್ಟಿಹಾಕಿದೆ.

3 / 8
ಭಾರತದ ಬೌಲರ್​ಗಳ ದಾಳಿ ಮುಂದೆ ಆಸೀಸ್ ತಂಡದ ಒಬ್ಬ ಬ್ಯಾಟರ್ ಕೂಡ ಅರ್ಧಶತಕದ ಇನ್ನಿಂಗ್ಸ್ ಆಡಲಿಲ್ಲ. ಸ್ಮಿತ್ ಹಾಗೂ ವಾರ್ನರ್ ಮಾತ್ರ 40 ರನ್​ಗಳ ಗಡಿ ದಾಟಿದರು.

4 / 8
ಇನ್ನು ಆಸ್ಟ್ರೇಲಿಯಾ ನೀಡಿದ ಅಲ್ಪ ಗುರಿಯನ್ನು ಬೆನ್ನಟ್ಟಿರುವ ಟೀಂ ಇಂಡಿಯಾ ಆರಂಭದಲ್ಲೇ ಆಘಾತ ಎದುರಿಸಿದೆ. ಮೊದಲ ಎರಡು ಓವರ್​ಗಳಲ್ಲೇ ತಂಡದ ಮೂರು ವಿಕೆಟ್ ಶೂನ್ಯಕ್ಕೆ ಪತನವಾಗಿದೆ.

5 / 8
ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಇಶಾನ್ ಕಿಶನ್, ನಾಯಕ ರೋಹಿತ್ ಶರ್ಮಾ  ಹಾಗೂ ಶ್ರೇಯಸ್ ಅಯ್ಯರ್​ಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ.

6 / 8
ಮೊದಲ ಓವರ್​ ಬೌಲ್ ಮಾಡಿದ ಮಿಚೆಲ್ ಸ್ಟಾರ್ಕ್ ಓವರ್​ನ 4ನೇ ಎಸೆತದಲ್ಲಿ ಕಿಶನ್ ವಿಕೆಟ್ ಪಡೆದರು. ತನ್ನ ಮೊದಲ ಎಸೆತವನ್ನು ಎದುರಿಸಿದ ಕಿಶನ್, ಕ್ಯಾಮರೂನ್ ಗ್ರೀನ್​ಗೆ ಕ್ಯಾಚಿತ್ತು ಔಟಾದರು.

7 / 8
ಇನ್ನು ಎರಡನೇ ಓವರ್​ನ ಮೂರನೇ ಎಸೆತದಲ್ಲಿ ನಾಯಕ ರೋಹಿತ್ ಶರ್ಮಾ ಎಲ್​ಬಿ ಬಲೆಗೆ ಬಿದ್ದರು. ಜೋಶ್ ಹ್ಯಾಜಲ್‌ವುಡ್ ಬೌಲ್ ಮಾಡಿದ ಈ ಓವರ್​ನಲ್ಲಿ ರೋಹಿತ್​ಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ.

8 / 8
ಆರಂಭಿಕರಿಬ್ಬರ ಶೂನ್ಯಾಘಾತದ ಬಳಿಕ ಕ್ರೀಸ್​ಗೆ ಬಂದ ಶ್ರೇಯಸ್ ಅಯ್ಯರ್ ಕೂಡ 2ನೇ ಓವರ್​ನ ಕೊನೆಯ ಎಸೆತದಲ್ಲಿ ಡೇವಿಡ್ ವಾರ್ನರ್​ಗೆ ಕ್ಯಾಚಿತ್ತು ಔಟಾದರು. ಈ ವೇಳೆಗೆ ಭಾರತದ ಖಾತೆಯಲ್ಲಿ ಕೇವಲ 2 ರನ್ ಮಾತ್ರ ಇದ್ದವು ಎಂಬುದು ಅಚ್ಚರಿಯ ಸಂಗತಿ.

Published On - 7:29 pm, Sun, 8 October 23