2023 ರ ವಿಶ್ವಕಪ್‌ನಲ್ಲಿ ನೆದರ್ಲೆಂಡ್ಸ್ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಅಫ್ಘಾನಿಸ್ತಾನ ತಂಡ ಸತತ ಮೂರನೇ ಗೆಲುವು ದಾಖಲಿಸಿದೆ. ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನಕ್ಕೆ ಇದು ನಾಲ್ಕನೇ ಗೆಲುವು. ಅಫ್ಘಾನಿಸ್ತಾನದ ಈ ಗೆಲುವಿನ ಮೂಲಕ ವಿಶ್ವಕಪ್ ಪಾಯಿಂಟ್ ಪಟ್ಟಿಯಲ್ಲೂ ಮಹತ್ತರ ಬದಲಾವಣೆಗಳಾಗಿವೆ.
ಅಂಕಪಟ್ಟಿಯಲ್ಲಿ ಟೀಂ ಇಂಡಿಯಾ ಮೊದಲ ಸ್ಥಾನದಲ್ಲಿದೆ. ಏಳರಲ್ಲಿ ಏಳು ಪಂದ್ಯಗಳನ್ನು ಗೆದ್ದಿರುವ ಭಾರತ, 14 ಅಂಕಗಳು ಹಾಗೂ +2.102 ನೆಟ್ ರನ್ರೇಟ್ ಹೊಂದಿದೆ. ರೋಹಿತ್ ಪಡೆ ತನ್ನ ಮುಂದಿನ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಮತ್ತು ನೆದರ್ಲೆಂಡ್ಸ್ ತಂಡಗಳನ್ನು ಎದುರಿಸಲಿದೆ.
ದಕ್ಷಿಣ ಆಫ್ರಿಕಾ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಪ್ರೋಟಿಯಸ್ 7 ಪಂದ್ಯಗಳಲ್ಲಿ 6 ರಲ್ಲಿ ಗೆದ್ದು 12 ಅಂಕ ಹಾಗೂ +2.290 ನೆಟ್ ರನ್ರೇಟ್ ಹೊಂದಿದೆ. ಆಫ್ರಿಕಾ ತಂಡ ಸೆಮಿಫೈನಲ್‌ಗೆ ಲಗ್ಗೆ ಇಡಲು ಉಳಿದ ಎರಡು ಪಂದ್ಯಗಳಲ್ಲಿ ಗೆಲುವಿನ ಅಗತ್ಯವಿದೆ. ಆದರೆ, ಇಲ್ಲಿಂದ ಎರಡು ಪಂದ್ಯಗಳಲ್ಲಿ ಸೋತರೂ ಪ್ರೋಟೀಸ್ ಸೆಮಿಫೈನಲ್‌ಗೆ ಹೋಗಬಹುದು. ಇದಕ್ಕಾಗಿ, ಅದು ಇತರ ತಂಡಗಳ ಫಲಿತಾಂಶಗಳ ಮೇಲೆ ಅವಲಂಬಿತವಾಗಬೇಕಿದೆ.
ಪಾಯಿಂಟ್ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಮೂರನೇ ಸ್ಥಾನದಲ್ಲಿದೆ. ಆಡಿರುವ ಆರು ಪಂದ್ಯಗಳಿಂದ 8 ಅಂಕಗಳನ್ನು ಆಸೀಸ್ ಹೊಂದಿದೆ. ಸೆಮಿಫೈನಲ್‌ಗೆ ಹೋಗುವ ಹಾದಿಯಲ್ಲಿ, ವಾಸ್ತವಿಕವಾಗಿ ಎಲ್ಲಾ ಪಂದ್ಯಗಳು ಈಗ ಆಸೀಸ್ಗೆ ಬಹುಮುಖ್ಯವಾಗಿದೆ. ಇಂದು ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿಯಲ್ಲಿರುವ ಆಸೀಸ್, ಆ ನಂತರ ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ವಿರುದ್ಧ ಪಂದ್ಯವನ್ನಾಡಬೇಕಿದೆ.
ನ್ಯೂಜಿಲೆಂಡ್ ನಾಲ್ಕನೇ ಸ್ಥಾನದಲ್ಲಿದೆ. ಹ್ಯಾಟ್ರಿಕ್ ಸೋಲಿನೊಂದಿಗೆ ಕಿವೀಸ್ ಭಾರೀ ಒತ್ತಡದಲ್ಲಿದೆ. ಆಡಿರುವ 7 ಪಂದ್ಯಗಳಿಂದ 8 ಅಂಕಗಳನ್ನು ಹೊಂದಿದೆ. ಕಿವೀಸ್ ಪಡೆಗೆ ಎರಡು ಪಂದ್ಯಗಳು ಮಾತ್ರ ಬಾಕಿ ಉಳಿದಿವೆ. ಇಂದು ಪಾಕಿಸ್ತಾನದ ವಿರುದ್ಧ ಕಣಕ್ಕಿಳಿಯಲ್ಲಿರುವ ಕಿವೀಸ್, ನಂತರ ನವೆಂಬರ್ 9 ರಂದು ಶ್ರೀಲಂಕಾ ವಿರುದ್ಧ ಪಂದ್ಯವನ್ನಾಡಲಿದೆ.
ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಅಫ್ಘಾನಿಸ್ತಾನದಂತೆಯೇ 8 ಅಂಕಗಳನ್ನು ಹೊಂದಿದೆ. ನೆಟ್ ರನ್ ರೇಟ್ನಲ್ಲಿ ಅಫ್ಘಾನಿಸ್ತಾನ ಐದನೇ ಸ್ಥಾನದಲ್ಲಿದೆ. ಅಫ್ಘಾನ್ಗೆ ಇನ್ನೂ ಎರಡು ಪಂದ್ಯಗಳು ಬಾಕಿ ಇವೆ. ಈ ಎರಡೂ ಕಠಿಣ ಪಂದ್ಯಗಳಾಗಿವೆ. ಒಂದು ಆಸ್ಟ್ರೇಲಿಯಾ ವಿರುದ್ಧವಾಗಿದ್ದರೆ, ಇನ್ನೊಂದು ದಕ್ಷಿಣ ಆಫ್ರಿಕಾ ವಿರುದ್ಧ. ಈ ಎರಡು ಪಂದ್ಯಗಳನ್ನು ಗೆದ್ದರೆ ಅಫ್ಘಾನಿಸ್ತಾನ ತಂಡ ಸೆಮಿಫೈನಲ್‌ಗೆ ಹೋಗುವ ಪ್ರಬಲ ಸಾಧ್ಯತೆಯಿದೆ.
ಪಾಕಿಸ್ತಾನ ಆರನೇ ಸ್ಥಾನದಲ್ಲಿದೆ. ತಂಡದ ಬಳಿ ಕೇವಲ ಆರು ಅಂಕಗಳಿವೆ. ಹೀಗಾಗಿ ಪಾಕಿಸ್ತಾನಕ್ಕೆ ಸೆಮಿಫೈನಲ್‌ಗೆ ಹೋಗುವ ಅವಕಾಶ ಕಡಿಮೆ ಇದೆ. ಪಾಕ್ ತಂಡ ಇಂದು ನ್ಯೂಜಿಲೆಂಡ್ ವಿರುದ್ಧ, ನಂತರ ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿಯಲ್ಲಿದೆ. ಈ ಎರಡು ಪಂದ್ಯಗಳಲ್ಲಿ ಪಾಕಿಸ್ತಾನ ಗೆದ್ದರೆ ಮತ್ತು ನ್ಯೂಜಿಲೆಂಡ್ ಕೊನೆಯ ಪಂದ್ಯದಲ್ಲೂ ಸೋತರೆ. ಆಸ್ಟ್ರೇಲಿಯ ಅಥವಾ ಅಫ್ಘಾನಿಸ್ತಾನ ಸತತ ಸೋಲನುಭವಿಸಿದರೆ, ಪಾಕಿಸ್ತಾನಕ್ಕೆ ಸೆಮಿಫೈನಲ್‌ಗೆ ಪ್ರವೇಶಿಸುವ ಅವಕಾಶವಿದೆ.