ವಿಶ್ವಕಪ್ ಪಾಯಿಂಟ್ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಜಾರಿದ ಪಾಕ್; ಅಫ್ಘಾನ್ ಮಣಿಸಿದ ಭಾರತಕ್ಕೆ ಭರ್ಜರಿ ಮುಂಬಡ್ತಿ!
ICC World Cup 2023 Updated Points Table: ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ತನ್ನ ಎರಡನೇ ವಿಶ್ವಕಪ್ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವನ್ನು 8 ವಿಕೆಟ್ಗಳಿಂದ ಮಣಿಸಿರುವ ಭಾರತ ಈ ಮಹಾ ಈವೆಂಟ್ನಲ್ಲಿ ಸತತ ಎರಡನೇ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಅಫ್ಘಾನ್ ತಂಡವನ್ನು ಇನ್ನು 15 ಓವರ್ಗಳು ಬಾಕಿ ಇರುವಂತೆಯೇ ಮಣಿಸಿದ ಭಾರತ ಅಂಕಪಟ್ಟಿಯಲ್ಲೂ ಜಿಗಿತ ಕಂಡಿದೆ.
1 / 8
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ತನ್ನ ಎರಡನೇ ವಿಶ್ವಕಪ್ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವನ್ನು 8 ವಿಕೆಟ್ಗಳಿಂದ ಮಣಿಸಿರುವ ಭಾರತ ಈ ಮಹಾ ಈವೆಂಟ್ನಲ್ಲಿ ಸತತ ಎರಡನೇ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಅಫ್ಘಾನ್ ತಂಡವನ್ನು ಇನ್ನು 15 ಓವರ್ಗಳು ಬಾಕಿ ಇರುವಂತೆಯೇ ಮಣಿಸಿದ ಭಾರತ ಅಂಕಪಟ್ಟಿಯಲ್ಲೂ ಜಿಗಿತ ಕಂಡಿದೆ.
2 / 8
ಈ ಗೆಲುವಿನೊಂದಿಗೆ ಭಾರತ ವಿಶ್ವಕಪ್ ಅಂಕಪಟ್ಟಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಏರಿದೆ. ಆಡಿರುವ ಎರಡು ಪಂದ್ಯಗಳಿಂದ ನಾಲ್ಕು ಅಂಕ ಕಲೆಹಾಕಿರುವ ಭಾರತ ನೆಟ್ ರನ್ರೇಟ್ ಕೂಡ ಗಮನಾರ್ಹವಾಗಿ ಸುಧಾರಿಸಿದ್ದು, ಈಗ 1.500 ಆಗಿದೆ.
3 / 8
ಇಂಗ್ಲೆಂಡ್ ಮತ್ತು ನೆದರ್ಲ್ಯಾಂಡ್ಸ್ ವಿರುದ್ಧ ಸುಲಭ ಗೆಲುವು ದಾಖಲಿಸಿದ್ದ ಹಿಂದಿನ ಆವೃತ್ತಿಯ ರನ್ನರ್ ಅಪ್ ನ್ಯೂಜಿಲೆಂಡ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಆಕ್ರಮಿಸಿಕೊಂಡಿದೆ. ನ್ಯೂಜಿಲೆಂಡ್ ಕೂಡ ನಾಲ್ಕು ಅಂಕಗಳನ್ನು ಹೊಂದಿದೆ. ಆದರೆ ಉತ್ತಮ ನೆಟ್ ರನ್ ರೇಟ್‌ನಿಂದ ಅಂದು ಭಾರತಕ್ಕಿಂತ ಮುಂದಿದೆ. ಕಿವೀಸ್ ಪ್ರಸ್ತುತ 1.958 ನೆಟ್ ರನ್ ರೇಟ್ ಹೊಂದಿವೆ.
4 / 8
ಪಾಕಿಸ್ತಾನ ಕೂಡ ನಾಲ್ಕು ಅಂಕ ಹಾಗೂ 0.927 ನಿವ್ವಳ ರನ್ ರೇಟ್‌ನೊಂದಿಗೆ ಮೂರನೇ ಸ್ಥಾನದಲ್ಲಿದೆ ಮತ್ತು ತನ್ನ ಎರಡೂ ಪಂದ್ಯಗಳನ್ನು ಗೆದ್ದು ಒಟ್ಟು ನಾಲ್ಕು ಅಂಕಗಳನ್ನು ಹೊಂದಿರುವ ಮೂರನೇ ತಂಡವಾಗಿದೆ.
5 / 8
ದಕ್ಷಿಣ ಆಫ್ರಿಕಾ ತಂಡ ಕೂಡ ಆಡಿರುವ ಏಕೈಕ ಪಂದ್ಯದಲ್ಲಿ ಭಾರಿ ಗೆಲುವು ದಾಖಲಿಸಿತು. ಇದರೊಂದಿಗೆ 2 ಅಂಕ ಕಲೆಹಾಕಿದ್ದ ಹರಣಿಗಳ ನೆಟ್ ರನ್ರೇಟ್ ಕೂಡ ಅದ್ಭುತವಾಗಿದೆ. ಪ್ರಸ್ತುತ 2.040 ನೆಟ್ ರನ್ರೇಟ್ ಹೊಂದಿರುವ ಆಫ್ರಿಕಾ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ.
6 / 8
ಮತ್ತೊಂದೆಡೆ, ಹಾಲಿ ಚಾಂಪಿಯನ್ ಇಂಗ್ಲೆಂಡ್ ಆಡಿರುವ ಎರಡು ಪಂದ್ಯಗಳಲ್ಲಿ ಒಂದರಲ್ಲಿ ಗೆದ್ದು, ಒಂದರಲ್ಲಿ ಸೋತು, 0.553 ನೆಟ್ ರನ್ ರೇಟ್ ಹಾಗೂ ಎರಡು ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ.
7 / 8
ಆಡಿರುವ 2 ಪಂದ್ಯಗಳಲ್ಲಿ ಒಂದರಲ್ಲಿ ಗೆದ್ದು ಒಂದರಲ್ಲಿ ಸೋತಿರುವ ಬಾಂಗ್ಲಾದೇಶ ತಂಡ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದು, -0.653 ನೆಟ್ ರನ್ರೇಟ್ ಹೊಂದಿದೆ.
8 / 8
ಉಳಿದಂತೆ ಪಂದ್ಯಾವಳಿಯಲ್ಲಿ ಒಂದೇ ಒಂದು ಗೆಲುವು ದಾಖಲಿಸದ ಆಸ್ಟ್ರೇಲಿಯಾ, ಶ್ರೀಲಂಕಾ, ನೆದರ್ಲೆಂಡ್ಸ್ ಹಾಗೂ ಅಫ್ಘಾನಿಸ್ತಾನ ಕ್ರಮವಾಗಿ 7,8,9,10ನೇ ಸ್ಥಾನದಲ್ಲಿವೆ.