ICC World Cup 2023 Points Table: 2ನೇ ಸ್ಥಾನಕ್ಕೆ ಜಿಗಿದ ಪಾಕ್; ಬಾಂಗ್ಲಾ ಸೋಲಿನಿಂದ ಭಾರತಕ್ಕೂ ಲಾಭ
ICC World Cup 2023 Points Table: ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವೆ ನಡೆದ ಟೂರ್ನಿಯ ಒಂಬತ್ತನೇ ಪಂದ್ಯದಲ್ಲಿ ಶ್ರೀಲಂಕಾವನ್ನು ಹೀನಾಯವಾಗಿ ಸೋಲಿಸಿದ ಪಾಕಿಸ್ತಾನ 2 ಅಂಕ ಪಡೆದು ನೆಟ್ ರನ್ ರೇಟ್ನಲ್ಲಿ ಭಾರಿ ಲಾಭ ಪಡೆದುಕೊಂಡಿದೆ. ಇದೀಗ ಪಾಕಿಸ್ತಾನ ನೇರವಾಗಿ ಎರಡನೇ ಸ್ಥಾನಕ್ಕೆ ಜಿಗಿದಿದೆ. ಹಾಗೆಯೇ ಬಾಂಗ್ಲಾದೇಶದ ಸೋಲಿನಿಂದಾಗಿ ಟೀಂ ಇಂಡಿಯಾ ಕೂಡ ಪಂದ್ಯವನ್ನಾಡದೆ ಪಾಯಿಂಟ್ಸ್ ಪಟ್ಟಿಯಲ್ಲಿ ಜಿಗಿತ ಕಂಡಿದೆ.
1 / 9
2023ರ ಏಕದಿನ ವಿಶ್ವಕಪ್‌ನಲ್ಲಿ ಹತ್ತು ತಂಡಗಳು ಭಾಗವಹಿಸುತ್ತಿದ್ದು, ಪಂದ್ಯಗಳು ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯುತ್ತಿವೆ. ಆದ್ದರಿಂದ ಲೀಗ್ ಸುತ್ತಿನಲ್ಲಿ ಪ್ರತಿ ತಂಡಗಳು ಒಮ್ಮೆ ಮಾತ್ರ ಮುಖಾಮುಖಿಯಾಗಲಿವೆ. ಪ್ರತಿ ತಂಡ 9 ಪಂದ್ಯಗಳನ್ನು ಆಡಲಿದ್ದು, ಅಗ್ರ 4 ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿವೆ.
2 / 9
ಆದ್ದರಿಂದ ಪ್ರತಿ ಗೆಲುವಿನೊಂದಿಗೆ ನೆಟ್ ರನ್ ರೇಟ್ ಮುಖ್ಯವಾಗಿರುತ್ತದೆ. ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವೆ ನಡೆದ ಟೂರ್ನಿಯ ಒಂಬತ್ತನೇ ಪಂದ್ಯದಲ್ಲಿ ಶ್ರೀಲಂಕಾವನ್ನು ಹೀನಾಯವಾಗಿ ಸೋಲಿಸಿದ ಪಾಕಿಸ್ತಾನ 2 ಅಂಕ ಪಡೆದು ನೆಟ್ ರನ್ ರೇಟ್ನಲ್ಲಿ ಭಾರಿ ಲಾಭ ಪಡೆದುಕೊಂಡಿದೆ.
3 / 9
ಈ ಲಾಭ ಪಾಯಿಂಟ್ಸ್ ಪಟ್ಟಿಯಲ್ಲಿ ಗೋಚರಿಸಿದ್ದು ಇದೀಗ ಪಾಕಿಸ್ತಾನ ನೇರವಾಗಿ ಎರಡನೇ ಸ್ಥಾನಕ್ಕೆ ಜಿಗಿದಿದೆ. ಹಾಗೆಯೇ ನಿನ್ನೆ ನಡೆದ ಇನ್ನೊಂದು ಪಂದ್ಯದಲ್ಲಿ ಇಂಗ್ಲೆಂಡ್ ಎದುರು ಬಾಂಗ್ಲಾದೇಶ ಸೋತಿದ್ದರಿಂದಾಗಿ ಟೀಂ ಇಂಡಿಯಾ ಕೂಡ ಪಂದ್ಯವನ್ನಾಡದೆ ಪಾಯಿಂಟ್ಸ್ ಪಟ್ಟಿಯಲ್ಲಿ ಜಿಗಿತ ಕಂಡಿದೆ.
4 / 9
ಪ್ರಸ್ತುತ ಆಡಿರುವ 2 ಪಂದ್ಯಗಳನ್ನು ಗೆದ್ದಿರುವ ನ್ಯೂಜಿಲೆಂಡ್ 4 ಅಂಕಗಳು ಮತ್ತು +1.958 ನೆಟ್ ರನ್ ರೇಟ್‌ನೊಂದಿಗೆ ಮೊದಲ ಸ್ಥಾನದಲ್ಲಿದೆ.
5 / 9
ಪಾಕಿಸ್ತಾನ ಕೂಡ ಆಡಿರುವ 2 ಪಂದ್ಯಗಳನ್ನು ಗೆದ್ದು 4 ಅಂಕಗಳು ಮತ್ತು +0.927 ನೆಟ್ ರನ್ ರೇಟ್‌ನೊಂದಿಗೆ ಎರಡನೇ ಸ್ಥಾನದಲ್ಲಿದೆ.
6 / 9
ಏಕೈಕ ಪಂದ್ಯವನ್ನಾಡಿರುವ ದಕ್ಷಿಣ ಆಫ್ರಿಕಾ 2 ಅಂಕಗಳು ಮತ್ತು +2.040 ನೆಟ್ ರನ್ ರೇಟ್‌ನೊಂದಿಗೆ ಮೂರನೇ ಸ್ಥಾನದಲ್ಲಿದೆ.
7 / 9
ನಾಲ್ಕನೇ ಸ್ಥಾನದಲ್ಲಿರುವ ಭಾರತ 2 ಅಂಕಗಳು ಮತ್ತು +0.883 ನೆಟ್ ರನ್ ರೇಟ್ ಹೊಂದಿದೆ. ಈ ಮೊದಲು ಐದನೇ ಸ್ಥಾನದಲ್ಲಿದ್ದ ಭಾರತ, ಬಾಂಗ್ಲಾದೇಶದ ಸೋಲಿನ ಪ್ರಯೋಜನ ಪಡೆದು 4ನೇ ಸ್ಥಾನಕ್ಕೇರಿದೆ. ಇದೀಗ ಸೆಮಿಫೈನಲ್ ರೇಸ್ನಲ್ಲಿ ಉಳಿಯಲು ಟೀಂ ಇಂಡಿಯಾ ಗೆಲುವಿನ ಜತೆಗೆ ಉತ್ತಮ ನೆಟ್ ರನ್ ರೇಟ್ ಕಾಯ್ದುಕೊಳ್ಳಬೇಕಿದೆ.
8 / 9
ಬಾಂಗ್ಲಾದೇಶವನ್ನು ಭಾರಿ ಅಂತರದಿಂದ ಮಣಿಸಿದ ಇಂಗ್ಲೆಂಡ್ ತಂಡ ಒಂದು ಸೋಲು ಹಾಗೂ ಒಂದು ಗೆಲುವಿನೊಂದಿಗೆ 2 ಅಂಕ ಸಂಪಾದಿಸಿ +0.553 ನೆಟ್ ರನ್ರೇಟ್ನೊಂದಿಗೆ ಐದನೇ ಸ್ಥಾನದಲ್ಲಿದೆ.
9 / 9
ಇನ್ನುಳಿದಂತೆ ವಿಶ್ವಕಪ್‌ನಲ್ಲಿ ಗೆಲುವಿನ ಖಾತೆಯನ್ನು ತೆರೆಯದ ಬಾಂಗ್ಲಾದೇಶ, ಆಸ್ಟ್ರೇಲಿಯಾ, ಶ್ರೀಲಂಕಾ, ಅಫ್ಘಾನಿಸ್ತಾನ, ನೆದರ್ಲೆಂಡ್ಸ್ ತಂಡಗಳು ಕ್ರಮವಾಗಿ 6,7,8,9, 10 ನೇ ಸ್ಥಾನದಲ್ಲಿವೆ.