Imran Tahir: 42ನೇ ವಯಸ್ಸಿನಲ್ಲೂ ತಾಹಿರ್ ಸ್ಪಿನ್ ಮೋಡಿ: ದಿ ಹಂಡ್ರೆಡ್ನಲ್ಲಿ ಮೊದಲ ಹ್ಯಾಟ್ರಿಕ್
TV9 Web | Updated By: ಝಾಹಿರ್ ಯೂಸುಫ್
Updated on:
Aug 10, 2021 | 4:52 PM
IPL 2021: ಐಪಿಎಲ್ನಲ್ಲಿ ತಾಹಿರ್ ಒಟ್ಟು 59 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 82 ವಿಕೆಟ್ ಉರುಳಿಸಿದ್ದಾರೆ. ಇನ್ನುಈ ಬಾರಿಯ ಐಪಿಎಲ್ನ ಮೊದಲಾರ್ಧದಲ್ಲಿ ತಾಹಿರ್ ಕೇವಲ ಒಂದು ಪಂದ್ಯವನ್ನಾಡಿದ್ದರು.
1 / 5
ಭಾನುವಾರ ನಡೆದ ದಿ ಹಂಡ್ರೆಡ್ ಲೀಗ್ನಲ್ಲಿನ ಪಂದ್ಯದಲ್ಲಿ ವೆಲ್ಷ್ ಫೈರ್ ತಂಡವನ್ನು ಬರ್ಮಿಂಗ್ ಹ್ಯಾಮ್ ಫೀನಿಕ್ಸ್ ತಂಡ 93 ರನ್ ಗಳಿಂದ ಸೋಲಿಸಿತು. ಈ ಭರ್ಜರಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಇಮ್ರಾನ್ ತಾಹಿರ್.
2 / 5
ತಾಹಿರ್ ಈ ಪಂದ್ಯದಲ್ಲಿ ಒಟ್ಟು 19 ಎಸೆತಗಳನ್ನು ಎಸೆದು 25 ರನ್ ನೀಡಿದರು. ಅಲ್ಲದೆ ಪಂದ್ಯದ 72, 73 ಮತ್ತು 74 ನೇ ಎಸೆತಗಳಲ್ಲಿ ಹ್ಯಾಟ್ರಿಕ್ ವಿಕೆಟ್ ಉರುಳಿಸಿ ವೆಲ್ಷ್ ಫೈರ್ ತಂಡದ ಇನಿಂಗ್ಸ್ ಅಂತ್ಯಕ್ಕೆ ಕಾರಣರಾದರು. ಅಹ್ಮದ್, ಮ್ಯಾಟ್ ಮಿಲ್ನೆಸ್, ಡೇವಿಡ್ ಪೇನ್ ಅವರ ವಿಕೆಟ್ಗಳನ್ನು ಬ್ಯಾಕ್ ಟು ಬ್ಯಾಕ್ ಉರುಳಿಸಿದ ತಾಹಿರ್ ಒಟ್ಟು ಐದು ವಿಕೆಟ್ ಪಡೆದರು.
3 / 5
ದಿ ಹಂಡ್ರೆಡ್ ಲೀಗ್ನ ಮೊದಲ ಹ್ಯಾಟ್ರಿಕ್ ಇದಾಗಿದ್ದು, ಈ ಮೂಲಕ ಟೂರ್ನಿಯಲ್ಲಿ ಚೊಚ್ಚಲ ಹ್ಯಾಟ್ರಿಕ್ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ 42 ವರ್ಷದ ಇಮ್ರಾನ್ ತಾಹಿರ್. ಇನ್ನು ಈ ಲೀಗ್ ಬಳಿಕ ದಕ್ಷಿಣ ಆಫ್ರಿಕಾದ ಮಾಜಿ ಸ್ಪಿನ್ನರ್ ಐಪಿಎಲ್ನಲ್ಲಿ ಕಾಣಿಸಿಕೊಳ್ಳಲಿದ್ದು, ಧೋನಿ ನಾಯಕತ್ವದ ಸಿಎಸ್ಕೆ ಪರ ಸ್ಪಿನ್ ಮೋಡಿ ಮಾಡುವ ವಿಶ್ವಾಸದಲ್ಲಿದ್ದಾರೆ.
4 / 5
ಐಪಿಎಲ್ನಲ್ಲಿ ತಾಹಿರ್ ಒಟ್ಟು 59 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 82 ವಿಕೆಟ್ ಉರುಳಿಸಿದ್ದಾರೆ. ಇನ್ನುಈ ಬಾರಿಯ ಐಪಿಎಲ್ನ ಮೊದಲಾರ್ಧದಲ್ಲಿ ತಾಹಿರ್ ಕೇವಲ ಒಂದು ಪಂದ್ಯವನ್ನಾಡಿದ್ದರು. ಆರ್ಸಿಬಿ ವಿರುದ್ದದ ಈ ಪಂದ್ಯದಲ್ಲಿ 2 ವಿಕೆಟ್ ಉರುಳಿಸಿ ಮಿಂಚಿದ್ದರು.
5 / 5
ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿರುವ ವಿವಿಧ ದೇಶಗಳ ಟಿ 20 ಲೀಗ್‌ಗಳಲ್ಲಿ ಭಾಗವಹಿಸುತ್ತಿದ್ದಾರೆ. ಐಪಿಎಲ್ ಹೊರತುಪಡಿಸಿ, ಅವರು ಪಿಎಸ್‌ಎಲ್, ಸಿಪಿಎಲ್‌ನಲ್ಲಿ ಕೂಡ ಆಡಿದ್ದಾರೆ. ಇದಾಗ್ಯೂ ಟಿ20 ವಿಶ್ವಕಪ್ ವೇಳೆಗೆ ಮತ್ತೆ ತಾಹಿರ್ ಹಾಗೂ ಎಬಿ ಡಿವಿಲಿಯರ್ಸ್ ದಕ್ಷಿಣ ಆಫ್ರಿಕಾ ತಂಡಕ್ಕೆ ಮರಳಲಿದ್ದಾರೆ ಎಂಬ ಮಾತುಗಳು ಈ ಹಿಂದೆ ಕೇಳಿ ಬಂದಿತ್ತು. ಇದೀಗ ಎಬಿಡಿ ಟಿ20 ವಿಶ್ವಕಪ್ ಆಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು, ಹೀಗಾಗಿ ತಾಹಿರ್ ಕೂಡ ಲಭ್ಯರಿರುವುದು ಅನುಮಾನ.