IND vs AFG: ಟಿ20 ಮಾದರಿಯಲ್ಲಿ 6 ದಾಖಲೆ ಸೃಷ್ಟಿಸಲು ಸಜ್ಜಾದ ರೋಹಿತ್ ಶರ್ಮಾ..!

|

Updated on: Jan 08, 2024 | 8:12 PM

IND vs AFG, Rohit Sharma: ರೋಹಿತ್ ಶರ್ಮಾ ಕೊನೆಯ ಬಾರಿಗೆ 2022 ರ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ಪರ ಆಡಿದ್ದರು. ಇದೀಗ ಮತ್ತೊಮ್ಮೆ ಈ ಚುಟುಕು ಮಾದರಿಯಲ್ಲಿ ಕಣಕ್ಕಿಳಿಯುವ ಮೂಲಕ ಹಲವು ದಾಖಲೆಗಳನ್ನು ಸೃಷ್ಟಿಸುವ ಸನಿಹದಲ್ಲಿದ್ದಾರೆ.

1 / 7
ಟೀಂ ಇಂಡಿಯಾದ ಹಿಟ್‌ಮ್ಯಾನ್ ರೋಹಿತ್ ಶರ್ಮಾ ಒಂದು ವರ್ಷದ ನಂತರ ಮತ್ತೊಮ್ಮೆ ಟಿ20 ತಂಡದಲ್ಲಿ ಕಾಣಿಸಿಕೊಳ್ಳುವುದರೊಂದಿಗೆ ನಾಯಕತ್ವವನ್ನು ಸಹ ವಹಿಸಿಕೊಂಡಿದ್ದಾರೆ. ರೋಹಿತ್ ಶರ್ಮಾ ಕೊನೆಯ ಬಾರಿಗೆ 2022 ರ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ಪರ ಆಡಿದ್ದರು. ಇದೀಗ ಮತ್ತೊಮ್ಮೆ ಈ ಚುಟುಕು ಮಾದರಿಯಲ್ಲಿ ಕಣಕ್ಕಿಳಿಯುವ ಮೂಲಕ ಹಲವು ದಾಖಲೆಗಳನ್ನು ಸೃಷ್ಟಿಸುವ ಸನಿಹದಲ್ಲಿದ್ದಾರೆ.

2 / 7
ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20ಯಲ್ಲಿ 4000 ರನ್‌ಗಳ ಗಡಿಯನ್ನು ತಲುಪುವ ಸನಿಹದಲ್ಲಿದ್ದಾರೆ. ಮುಂಬರುವ ಸರಣಿಯಲ್ಲಿ ಅವರು 147 ರನ್ ಗಳಿಸಿದರೆ, ಅವರು 4000 ಟಿ20 ಅಂತಾರಾಷ್ಟ್ರೀಯ ರನ್ ಪೂರ್ಣಗೊಳಿಸಲಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ನಂತರ 4000 ಟಿ20 ಅಂತರಾಷ್ಟ್ರೀಯ ರನ್ ಗಳಿಸಿದ ವಿಶ್ವದ ಎರಡನೇ ಆಟಗಾರ ಎನಿಸಿಕೊಳ್ಳಲಿದ್ದಾರೆ.

3 / 7
ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯಲ್ಲಿ ರೋಹಿತ್ ಶರ್ಮಾ ಇನ್ನೂ 156 ರನ್ ಗಳಿಸಿದರೆ ವಿರಾಟ್ ಕೊಹ್ಲಿ ದಾಖಲೆಯನ್ನು ಮುರಿಯಲಿದ್ದಾರೆ . ವಿರಾಟ್ ಪ್ರಸ್ತುತ ಅಂತಾರಾಷ್ಟ್ರೀಯ ಟಿ20ಯಲ್ಲಿ ಅತಿ ಹೆಚ್ಚು (4008 ರನ್) ರನ್ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ.

4 / 7
ಪ್ರಸ್ತುತ, ರೋಹಿತ್ ಶರ್ಮಾ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 4 ಶತಕಗಳನ್ನು ಸಿಡಿಸಿದ್ದು, ಅಫ್ಘಾನಿಸ್ತಾನ ವಿರುದ್ಧ ಇನ್ನೂ ಒಂದು ಶತಕ ಬಾರಿಸಿದರೆ ಅಂತಾರಾಷ್ಟ್ರೀಯ ಟಿ20ಯಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಏಕೈಕ ಆಟಗಾರ ಎನಿಸಿಕೊಳ್ಳಲಿದ್ದಾರೆ.

5 / 7
ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20ಯಲ್ಲಿ ಇದುವರೆಗೆ 29 ಅರ್ಧಶತಕಗಳನ್ನು ಬಾರಿಸಿದ್ದಾರೆ. ಇದೀಗ ಅಫ್ಘಾನ್ ವಿರುದ್ಧ ರೋಹಿತ್ ಇನ್ನೊಂದು ಅರ್ಧಶತಕ ಬಾರಿಸಿದರೆ, 30 ಅರ್ಧಶತಕ ಸಿಡಿಸಿರುವ ಪಾಕ್ ತಂಡದ ಮಾಜಿ ನಾಯಕ ಬಾಬರ್ ಆಝಂರ ದಾಖಲೆಯನ್ನು ಸರಿಗಟ್ಟುವ ಅಥವಾ ಅವರ ದಾಖಲೆಯನ್ನು ಮುರಿಯುವ ಹೊಸ್ತಿಲಿನಲ್ಲಿದ್ದಾರೆ.

6 / 7
ಇದರೊಂದಿಗೆ ಅಂತಾರಾಷ್ಟ್ರೀಯ ಟಿ20ಯಲ್ಲಿ ರೋಹಿತ್ ಇನ್ನು 8 ಬೌಂಡರಿ ಬಾರಿಸಿದರೆ ಈ ಮಾದರಿಯಲ್ಲಿ ಅತಿ ಹೆಚ್ಚು ಬೌಂಡರಿಗಳನ್ನು ಬಾರಿಸಿದ ಆಟಗಾರ ಎನಿಸಿಕೊಳ್ಳಲಿದ್ದಾರೆ. ಪ್ರಸ್ತುತ 356 ಬೌಂಡರಿಗಳನ್ನು ಬಾರಿಸಿರುವ ವಿರಾಟ್ ಕೊಹ್ಲಿ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಇದುವರೆಗೆ 348 ಬೌಂಡರಿ ಬಾರಿಸಿರುವ ರೋಹಿತ್ ಎರಡನೇ ಸ್ಥಾನದಲ್ಲಿದ್ದಾರೆ.

7 / 7
ಹಾಗೆಯೇ ನಾಯಕನಾಗಿ ಅಂತಾರಾಷ್ಟ್ರೀಯ ಟಿ20ಯಲ್ಲಿ ಅಧಿಕ ರನ್ ಕಲೆಹಾಕಿದ ಆಟಗಾರ ಎನಿಸಿಕೊಳ್ಳಲು ರೋಹಿತ್ ಇನ್ನು 44 ರನ್ ಬಾರಿಸಬೇಕಾಗಿದೆ. ಪ್ರಸ್ತುತ 46 ಇನ್ನಿಂಗ್ಸ್‌ಗಳಲ್ಲಿ 1570 ರನ್ ಬಾರಿಸಿರುವ ಕೊಹ್ಲಿ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, 51 ಪಂದ್ಯಗಳ 51 ಇನ್ನಿಂಗ್ಸ್‌ಗಳಲ್ಲಿ 1527 ರನ್ ಬಾರಿಸಿರುವ ರೋಹಿತ್ 2ನೇ ಸ್ಥಾನದಲ್ಲಿದ್ದಾರೆ.