IND vs AUS: ಕನ್ನಡಿಗ ಕುಂಬ್ಳೆ ಹೆಸರಿನಲ್ಲಿದ್ದ ವಿಶ್ವ ದಾಖಲೆಯೊಂದನ್ನು 18 ವರ್ಷಗಳ ಬಳಿಕ ಮುರಿದ ಅಶ್ವಿನ್!
TV9 Web | Updated By: ಪೃಥ್ವಿಶಂಕರ
Updated on:
Feb 09, 2023 | 3:59 PM
IND vs AUS: ಅಲೆಕ್ಸ್ ಕ್ಯಾರಿ ವಿಕೆಟ್ ಪಡೆದ ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗವಾಗಿ 450 ವಿಕೆಟ್ ಪಡೆದ ಭಾರತೀಯ ಬೌಲರ್ ಎನಿಸಿಕೊಂಡರು. ತಮ್ಮ 89ನೇ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ ಈ ವಿಶ್ವ ದಾಖಲೆ ನಿರ್ಮಿಸಿದರು.
1 / 5
ಆಸ್ಟ್ರೇಲಿಯ ವಿರುದ್ಧ ನಾಗ್ಪುರದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಸ್ಪಿನ್ನರ್ ಆರ್. ಅಶ್ವಿನ್ ವಿಶ್ವ ದಾಖಲೆಯೊಂದನ್ನು ಮುರಿದಿದ್ದಾರೆ. ಆಸೀಸ್ ತಂಡದ ಅಲೆಕ್ಸ್ ಕ್ಯಾರಿಯ ವಿಕೆಟ್ ಪಡೆದ ಅಶ್ವಿನ್, ಈ ವಿಕೆಟ್‌ನೊಂದಿಗೆ ನಾಗ್ಪುರದಲ್ಲಿ 18 ವರ್ಷಗಳ ಹಳೆಯ ದಾಖಲೆಯನ್ನೂ ಮುರಿದರು.
2 / 5
ಅಲೆಕ್ಸ್ ಕ್ಯಾರಿ ವಿಕೆಟ್ ಪಡೆದ ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗವಾಗಿ 450 ವಿಕೆಟ್ ಪಡೆದ ಭಾರತೀಯ ಬೌಲರ್ ಎನಿಸಿಕೊಂಡರು. ತಮ್ಮ 89ನೇ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ ಈ ವಿಶ್ವ ದಾಖಲೆ ನಿರ್ಮಿಸಿದರು.
3 / 5
18 ವರ್ಷಗಳ ಹಿಂದೆ ಕನ್ನಡಿಗ ಅನಿಲ್ ಕುಂಬ್ಳೆ ನಿರ್ಮಿಸಿದ್ದ ಈ ದಾಖಲೆಯನ್ನು ಅಶ್ವಿನ್ ಈ ಪಂದ್ಯದಲ್ಲಿ ಮುರಿದರು. ಮಾರ್ಚ್ 2005 ರಲ್ಲಿ ಪಾಕಿಸ್ತಾನ ವಿರುದ್ಧದ ಟೆಸ್ಟ್‌ನಲ್ಲಿ ಕುಂಬ್ಳೆ ತಮ್ಮ 450 ವಿಕೆಟ್‌ಗಳನ್ನು ಪೂರೈಸಿದ್ದರು. ಈ ಸಾಧನೆಯನ್ನು ಮಾಡಲು ಕುಂಬ್ಳೆ 93 ಪಂದ್ಯಗಳನ್ನು ಆಡಿದ್ದರು.
4 / 5
ಈಗ 450 ಟೆಸ್ಟ್ ವಿಕೆಟ್‌ಗಳನ್ನು ಅತಿ ಕಡಿಮೆ ಪಂದ್ಯಗಳಲ್ಲಿ ಕಬಳಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗುವುದರ ಜೊತೆಗೆ, ಅಶ್ವಿನ್ ಈಗ ಈ ರೇಸ್‌ನಲ್ಲಿ ವಿಶ್ವದ 2ನೇ ಬೌಲರ್ ಆಗಿದ್ದಾರೆ. ಇದರರ್ಥ ಅವರು 450 ಟೆಸ್ಟ್ ವಿಕೆಟ್‌ಗಳನ್ನು ಪಡೆದ ವಿಶ್ವದ ಎರಡನೇ ವೇಗದ ಬೌಲರ್ ಎನಿಸಿಕೊಂಡಿದ್ದಾರೆ.
5 / 5
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿವೇಗವಾಗಿ 450 ವಿಕೆಟ್ ಪಡೆದ ವಿಶ್ವದಾಖಲೆ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಹೆಸರಿನಲ್ಲಿದೆ. ಅವರು ಕೇವಲ 80 ಪಂದ್ಯಗಳಲ್ಲಿ 450 ಟೆಸ್ಟ್ ವಿಕೆಟ್‌ಗಳನ್ನು ಪಡೆದಿದ್ದರು.
Published On - 3:59 pm, Thu, 9 February 23